ಪೋರ್ಚುಗಲ್ಗೆ ಅಳಿವು ಉಳಿವಿನ ಪ್ರಶ್ನೆ
ಬ್ರೆಸಿಲಿಯಾ: ಫಿಫಾ ವರ್ಷದ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಾರಥ್ಯದ ಪೋರ್ಚುಗಲ್ ಪಡೆಯ ಮುಂದೆ ಈಗ ಅಳಿವು-ಉಳಿವಿನ ಪ್ರಶ್ನೆ.
ಈ ಬಾರಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗುಂಪು ಸೆಣಸಿನಿಂದಲೇ ಹೊರನಡೆಯುವ ಅಪಾಯದಲ್ಲಿ ಸಿಲುಕಿರುವ ಪೋರ್ಚುಗಲ್ 'ಜಿ' ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಘಾನಾ ವಿರುದ್ಧ ಗೆಲವು ಕಾಣಲೇಬೇಕಾಗಿದೆ.
ಆದರೆ, ಈ ಗೆಲವು ಬರೀ ಗೆಲುವಾಗಿರದೇ ಹೆಚ್ಚಿನ ಗೋಲು ಸರಾಸರಿಯ ಆಧಾರದಲ್ಲಿ ಲಭಿಸಬೇಕಾಗಿದೆ. ಅಂದಾಗ ಮಾತ್ರ ಪ್ರಿಕ್ವಾರ್ಟರ್ಫೈನಲ್ ಸುತ್ತು ಪ್ರವೇಶಿಸುವ ಪೋರ್ಚುಗಲ್ ತಂಡದ ಕನಸು ನನಸಾಗಬಹುದು.
ಸದ್ಯ ಪೋರ್ಚುಗಲ್ ತಂಡ ಆಡಿದ ಎರಡು ಪಂದ್ಯಗಳಲ್ಲಿ ಒಂದು ಡ್ರಾ ಮತ್ತು ಒಂದು ಸೋಲಿನ ಫಲಿತಾಂಶದೊಂದಿಗೆ ಕೇವಲ 1 ಅಂಕ ಸಂಪಾದಿಸಿ, ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.
ಎಸ್ಟಾಡಿಯೊ ನಾಸಿಯೊನಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಪೋರ್ಚುಗಲ್ ತಂಡ ಘಾನಾ ವಿರುದ್ಧ ಗೆಲ್ಲುವ ನೆಚ್ಚಿನ ಪಡೆಯಾಗಿದ್ದರೂ ದೊಡ್ಡ ಜಯ ಅಗತ್ಯವಿದೆ. ಈ ಪಂದ್ಯವನ್ನು ಪೋರ್ಚುಗಲ್ ಜಯಿಸಿದರೆ, ಮತ್ತೊಂದು ಪಂದ್ಯದಲ್ಲಿ ಎದುರಾಗಲಿರುವ ಅಮೆರಿಕ ಮತ್ತು ಜರ್ಮನಿ ತಂಡಗಳ ನಡುವಿನ ಫಲಿತಾಂಶದ ಮೇಲೆ ಅದರ ಅಳಿವು-ಉಳಿವಿನ ಪ್ರಶ್ನೆ ಅವಲಂಬಿಸಿದೆ.
ಘಾನಾ ಸ್ಥಿತಿ ಕೂಡ ಪೋರ್ಚುಗಲ್ಗಿಂತ ಭಿನ್ನವಿಲ್ಲ. ಭಾರಿ ಅಂತರದಲ್ಲಿ ಗೆದ್ದರೆ ಮಾತ್ರ ನಾಕೌಟ್ ಕನಸು ಕಾಣಬಹುದಾಗಿದೆ. ಹಾಗಾಗಿ, ಪೋರ್ಚುಗಲ್ ಮುಂದೆ ಘಾನಾ ಕಠಿಣ ಸವಾಲು ನಿಲ್ಲಿಸಿದರೆ ಅಚ್ಚರಿ ಇಲ್ಲ. ಉಭಯ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.
ಪೋರ್ಚುಗಲ್-ಘಾನಾ
(ಗುಂಪು -ಜಿ)
ಸಮಯ: ರಾತ್ರಿ 9.30ಕ್ಕೆ
4 ರ್ಯಾಂಕ್ 37
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

