ಫಿಫಾ ವಿಶ್ವಕಪ್ 2014

ಮುನ್ನಡೆ ನಿರೀಕ್ಷೆಯಲ್ಲಿ ಜರ್ಮನಿ, ಅಮೆರಿಕ

Published On :

ರೆಸಿಫೆ: ವಿಶ್ವಕಪ್ ಇತಿಹಾಸದಲ್ಲಿ ಜರ್ಮನಿ ತನ್ನದೇಯಾದ ಭಿನ್ನ ಸಾಮ್ರಾಜ್ಯ ಹೊಂದಿದೆ. ಪಶ್ಚಿಮ ಜರ್ಮನಿಯಾಗಿದ್ದ ಸಂದರ್ಭದಲ್ಲಿ ಮೂರು ಬಾರಿ ವಿಶ್ವಕಪ್ ಮುಕುಟ ಧರಿಸಿರುವ ಜರ್ಮನಿ, ಈಗ ನಾಲ್ಕನೇ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಸದ್ಯ ಜರ್ಮನಿ ನಾಕೌಟ್ ಸುತ್ತು ತಲುಪುವ ಹೊಸ್ತಿಲಲ್ಲಿ ನಿಂತಿದ್ದರೂ ಸಹ ಅದು ಖಚಿತವಾಗಬೇಕಾದರೆ, ಗುರುವಾರ ನಡೆಯಲಿರುವ 'ಜಿ' ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಅಮೆರಿಕ ವಿರುದ್ಧ ಗೆಲವು ಇಲ್ಲವೇ ಕನಿಷ್ಠ ಡ್ರಾ ಫಲಿತಾಂಶವನ್ನಾದರೂ ಪಡೆಯಬೇಕು. ಒಂದು ವೇಳೆ ಸೋಲನುಭವಿಸಿದರೆ, ಪೋರ್ಚುಗಲ್ ಮತ್ತು ಘಾನಾ ನಡುವೆ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಹೊರಬೀಳುವ ಫಲಿತಾಂಶದ ಮೇಲೆ ಅದರ ಭವಿಷ್ಯ ನಿಲ್ಲಲಿದೆ.
ಅಮೆರಿಕ ಕೂಡ ಇದೇ ಪರಿಸ್ಥಿತಿಯಲ್ಲಿದೆ. ಜರ್ಮನಿ ವಿರುದ್ಧ ಗೆಲವು ಅಥವಾ ಡ್ರಾ ಫಲಿತಾಂಶ ಪಡೆದು ಮುಂದಿನ ಸುತ್ತು ಪ್ರವೇಶಿಸುವ ಕನಸು ಕಟ್ಟಿಕೊಂಡಿರುವ ಅಮೆರಿಕನ್ನರು, ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡುವುದನ್ನು ಅಲ್ಲಗಳೆಯಲಾಗದು.  ಜರ್ಮನಿ ಕೋಚ್ ಜೋಕಿಮ್ ಲೋ ಮತ್ತು ಅಮೆರಿಕದ ಕೋಚ್ ಜರ್ಗೆನ್ ಕ್ಲಿನ್ಸ್‌ಮನ್ ಉತ್ತಮ ಸ್ನೇಹಿತರಾಗಿದ್ದು, ತಮ್ಮ ತಂಡದ ಆಟಗಾರರನ್ನು ಈ ಹೋರಾಟಕ್ಕೆ ಉತ್ತಮ ರೀತಿಯಲ್ಲಿಯೇ ಅಣಿಗೊಳಿಸಲಿದ್ದಾರೆ. ಜಾಗತಿಕ ಅಖಾಡದಲ್ಲಿ ಜರ್ಮನಿ ಮತ್ತು ಅಮೆರಿಕ ಒಟ್ಟಾರೆ 9 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಜರ್ಮನಿ 6 ಪಂದ್ಯಗಳಲ್ಲಿ ಗೆದ್ದು ತನ್ನ ಪ್ರಭುತ್ವ ಸ್ಥಾಪಿಸಿದೆ. ವಿಶ್ವಕಪ್‌ನಲ್ಲಿ ಮಾತ್ರ ಉಭಯರು ಎರಡು ಬಾರಿ ಸೆಣಸಿದ್ದು, ಜರ್ಮನಿ 2-0 ಗೆಲವಿನ ಸಾಧನೆಯೊಂದಿಗೆ ಪೂರ್ಣ ತನ್ನ ಹಿಡಿತ ಹೊಂದಿದೆ. 1998ರಲ್ಲಿ ಗುಂಪು ಹಂತದಲ್ಲಿ 2-0 ಗೋಲುಗಳಿಂದ ಜಯಗಳಿಸಿದ್ದ ಜರ್ಮನಿ ಆಟಗಾರರು, 2002ರ ವಿಶ್ವಕಪ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಏಕೈಕ ಗೋಲಿನಿಂದ ವಿಜಯೋತ್ಸವ ಆಚರಿಸಿದ್ದರು.
ಜರ್ಮನಿ-ಅಮೆರಿಕ (ಗುಂಪು ಜಿ)
ಸಮಯ: ರಾತ್ರಿ 9.30ಕ್ಕೆ
2    ರ್ಯಾಂಕ್    13
ಮುಖಾಮುಖಿ
9    ಪಂದ್ಯ    9
6    ಜಯ    3
3    ಸೋಲು    6
21    ಗೋಲುಪರ    15
ಒಟ್ಟು ಗೋಲು- 36

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.