ಫಿಫಾ ವಿಶ್ವಕಪ್ 2014

ಬ್ರೆಜಿಲ್ ಫೇವರಿಟ್ ಅಚ್ಚರಿಗೆ ಕಾದಿದೆ ಚಿಲಿ

ಬ್ರೆಜಿಲ್ ಫೇವರಿಟ್ ಅಚ್ಚರಿಗೆ ಕಾದಿದೆ ಚಿಲಿ
Published On :

ಬೆಲೊ ಹಾರಿಜಾಂಟೆ:  ಇತಿಹಾಸ ತಿರುವಿ ನೋಡಿದರೆ, ಐದು ಬಾರಿ ವಿಶ್ವಕಪ್ ಫುಟ್ಬಾಲ್‌ನಲ್ಲಿ ತನ್ನದೇಯಾದ ಸಾಮ್ರಾಜ್ಯ ಕಟ್ಟಿರುವ ಬ್ರೆಜಿಲ್ ಆಟಗಾರರು ಈ ಬಾರಿ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಎದುರಾಗಲಿರುವ ಚಿಲಿ ವಿರುದ್ಧ ಗೆಲ್ಲುವ ಹಾಟ್ ಫೇವರಿಟ್ ಎನಿಸಿದ್ದಾರೆ.
ಎಸ್ಟಾಡಿಯೊ ಮಿನೇರೊ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ 2014ರ ಆವೃತ್ತಿಯ ಮೊದಲ ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಆತಿಥೇಯ ಬ್ರೆಜಿಲ್ ಮತ್ತು ಚಿಲಿ ಆಟಗಾರರು ವಿಜಯಲಕ್ಷ್ಮಿ ಒಲಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
'ಎ' ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಜಯ, ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು 7 ಅಂಕ ಗಳಿಸಿ ಅಗ್ರಸ್ಥಾನಿ ತಂಡವಾಗಿ ನಾಕೌಟ್ ಸುತ್ತು ತಲುಪಿರುವ ಬ್ರೆಜಿಲ್‌ಗೆ ತವರು ಅಂಕಣದ ಲಾಭವಿದೆ. ಇನ್ನೊಂದೆಡೆ ಚಿಲಿ ತಂಡ 'ಬಿ' ಗುಂಪಿನಿಂದ ಎರಡನೇ ತಂಡವಾಗಿ ಮುಂದಡಿ ಇಟ್ಟಿದೆ. ಗುಂಪು ಸೆಣಸಿನಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ತಂಡದ ವಿರುದ್ಧ 2-0 ಗೋಲುಗಳಿಂದ ಜಯಭೇರಿ ಬಾರಿಸಿದ್ದು ಚಿಲಿಯ ಮಹತ್ಸಾಧನೆಯಾಗಿದೆ. ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಚಿಲಿ ಆಟಗಾರರು ನಾಕೌಟ್‌ನಲ್ಲಿ ಸಹ ಬ್ರೆಜಿಲ್ ವಿರುದ್ಧ ಗೆದ್ದು ಅಚ್ಚರಿ ಫಲಿತಾಂಶ ನೀಡುವ ಮೂಲಕ ಕ್ವಾರ್ಟರ್‌ಫೈನಲ್ ಹಾದಿ ಕಂಡುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ, ಚಿಲಿ ಆಟಗಾರರು ಬ್ರೆಜಿಲ್ ತಂಡದ  ನೇಮಾರ್ ಅವರನ್ನು ಬಂಧಿಸುವುದು ಅಗತ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.