ಕ್ವಾರ್ಟರ್ಫೈನಲ್ಗೆ ಕೊಲಂಬಿಯಾ, ಊರು ಸೇರಿದ ಉರುಗ್ವೆ

Published On :
ರಿಯೊ ಡಿ ಜನೈರೊ: ಸಂಪರ್ಕ ಆಟಗಾರ ಜೇಮ್ಸ್ ರೋಡ್ರಿಗ್ ದಾಖಲಿಸಿದ ಎರಡು ಸೊಗಸಾದ ಗೋಲುಗಳ ನೆರವಿನಿಂದ ಕೊಲಂಬಿಯಾ ತಂಡ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಉರುಗ್ವೆ ತಂಡವನ್ನು ಹೊಡೆದುರುಳಿಸಿ ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ರಿಯೊ ಡಿ ಜನೈರೊದ ಎಸ್ಟಾಡಿಯೊ ಮಾರಕಾನ ಕ್ರೀಡಾಂಗಣದಲ್ಲಿ ಭಾನುವಾರ ನಸುಕಿನ ಜಾವ ನಡೆದ ಎರಡನೇ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡ 2-0 ಗೋಲುಗಳಿಂದ ಉರುಗ್ವೆ ತಂಡವನ್ನು ಪರಾಭವಗೊಳಿಸಿತು. ಪ್ರಥಮಾರ್ಧದ 28ನೇ ನಿಮಿಷ ಹಾಗೂ ಉತ್ತರಾರ್ಧದಲ್ಲಿ ಪಂದ್ಯದ 50ನೇ ನಿಮಿಷದಲ್ಲಿ ಗೋಲು ಬಾರಿಸಿದ ಜೇಮ್ಸ್ ರೋಡ್ರಿಗ್ ಅವರು ಕೊಲಂಬಿಯಾ ತಂಡ ಮತ್ತೊಮ್ಮೆ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಲು ಕಾರಣರಾದರು. ಜೊತೆಗೆ ಈ ವಿಶ್ವಕಪ್ನಲ್ಲಿ ತಮ್ಮ ಗೋಲು ಸಂಪಾದನೆಯನ್ನು 5ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಶ್ರೇಷ್ಠ ಆಟಗಾರನ ಪುರಸ್ಕಾರಕ್ಕೆ ಪೈಪೋಟಿಗೆ ನಿಂತರು.
ಮತ್ತೊಂದೆಡೆ ಎರಡು ಬಾರಿ ವಿಶ್ವಕಪ್ ಎತ್ತಿಹಿಡಿದಿದ್ದ ಉರುಗ್ವೆ ಈ ಬಾರಿ ಹದಿನಾರರಘಟ್ಟದಲ್ಲಿಯೇ ತನ್ನ ಹೋರಾಟಕ್ಕೆ ತೆರೆ ಎಳೆದುಕೊಳ್ಳಬೇಕಾಯಿತು. ಟೂರ್ನಿಯ ಆರಂಭದಿಂದಲೇ ಉರುಗ್ವೆ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಗ್ರುಪ್ ಆಫ್ ಡೆತ್ ಎಂದೇ ಹೇಳಲಾದ “t’ ಗುಂಪಿನಿಂದ ತನ್ನ ಹೋರಾಟ ಆರಂಭಿಸಿದ್ದ ಉರುಗ್ವೆ ಆಟಗಾರರು ಕೊನೆಯ ಲೀಗ್ ಪಂದ್ಯದಲ್ಲಿ ಇಟಲಿ ವಿರುದ್ಧ ಅದೃಷ್ಟದ ನೆರವಿನಿಂದ ಗೆದ್ದು ನಾಕೌಟ್ ಸುತ್ತಿಗೆ ಅರ್ಹತೆ ಪಡೆದುಕೊಂಡಿತ್ತು. ಆದರೆ, ಇಲ್ಲಿ ಸಹ ತಮ್ಮ ನೈಜ ಆಟ ಪ್ರದರ್ಶಿಸಲು ವಿಫಲವಾಗಿ ಸ್ಪರ್ಧಾಕಣದಿಂದ ಹೊರಬಿದ್ದಿತು.
ಮುಖ್ಯವಾಗಿ ನಾಲ್ಕು ತಿಂಗಳು ನಿಷೇಧದ ಶಿಕ್ಷೆಗೆ ಗುರಿಯಾಗಿರುವ ತಂಡದ ಸ್ಟಾರ್ ಪ್ರತಿಭೆ ಲೂಯಿಸ್ ಸೂರೆಜ್ ಅನುಪಸ್ಥಿತಿ ಉರುಗ್ವೆ ತಂಡಕ್ಕೆ ಭಾರಿ ನಷ್ಟ ತಂದುಕೊಟ್ಟಿತು. ಇಟಲಿ ವಿರುದ್ಧದ ಪಂದ್ಯದಲ್ಲಿ ಎದುರಾಳಿ ಆಟಗಾರ ಜಾರ್ಜಿಯೊ ಚೀಲಿನಿ ಭುಜಕ್ಕೆ ಕಚ್ಚಿ ವಿವಾದಕ್ಕೆ ಸಿಲುಕ್ಕಿದ್ದ ಸೂರೆಜ್ಗೆ ಫಿಫಾ ನಾಲ್ಕು ತಿಂಗಳು ಮತ್ತು 9 ಪಂದ್ಯಗಳಿಂದ ನಿಷೇಧದ ಶಿಕ್ಷೆ ವಿಧಿಸಿದೆ. ಹಾಗಾಗಿ, ವಿಶ್ವಕಪ್ ಪಂದ್ಯಗಳಿಂದ ಹೊರಗುಳಿದಿರುವ ಸೂರೆಜ್ ಇಲ್ಲದೆ ಉರುಗ್ವೆ ತಂಡದ ಹೋರಾಟದ ಮೇಲೆ ಸಂಪೂರ್ಣ ಮಂಕುಕವಿದಂತಾಗಿತ್ತು. ಸೂರೆಜ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಅವರ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದ ಡೀಗೊ ಫೋರ್ಲಾನ್ ಮಿಂಚಲಿಲ್ಲ.
ಆದರೆ, ಇದರ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಕೊಲಂಬಿಯಾ ಆಟಗಾರರು ಎದುರಾಳಿಯ ದೌರ್ಬಲ್ಯಗಳತ್ತ ತಮ್ಮ ಪರಿಣಾಮಕಾರಿ ಹೋರಾಟ ಸಂಘಟಿಸುವ ಮೂಲಕ ಅವಕಾಶಗಳನ್ನು ಕಂಡುಕೊಂಡು ಅಂತಿಮವಾಗಿ ಗೆಲವಿನ ಕೇಕೆ ಹಾಕುವಲ್ಲಿ ಸಫರಾದರು.
ಪ್ರಮುಖವಾಗಿ 22ರ ಮೊನಾಕೊ ಆಟಗಾರ ಅದ್ಭುತ ಕಾಲ್ಚಳಕ ತೋರಿ ಎದುರಾಳಿ ಪಡೆಯನ್ನು ಬೆಚ್ಚಿ ಬೀಳಿಸಿದರು. ಪಂದ್ಯದಲ್ಲಿ ಪ್ರತಿಶತ 54ರಷ್ಟು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದ ಕೊಲಂಬಿಯಾ ತಂಡ ರಕ್ಷಣಾ ವಿಭಾಗವನ್ನು ಹೆಚ್ಚು ಪ್ರಬಲಗೊಳಿಸಿಕೊಂಡಿದ್ದರಿಂದ ಉರುಗ್ವೆ ಆಟಗಾರರಿಗೆ ಗೋಲು ಗಳಿಸುವ ಅವಕಾಶಗಳು ಲಭಿಸಿದರೂ ಅವುಗಳಲ್ಲಿ ಫಲ ಕಾಣಲು ಮಾತ್ರ ಸಾಧ್ಯವಾಗಲಿಲ್ಲ. ಉರುಗ್ವೆ ತಂಡ 9 ಬಾರಿ ಗುರಿಯೆಡೆಗೆ ಚೆಂಡನ್ನು ಬಾರಿಸಿದರೂ ಸಹ ಕೊಲಂಬಿಯಾ ಗೋಲ್ಕೀಪರ್ ಡೇವಿಡ್ ಆಸ್ಪಿನಾ ಉತ್ತಮ ತಡೆಗೋಡೆ ನಿರ್ಮಿಸುವ ಮೂಲಕ ಎದುರಾಳಿಯ ಪ್ರಯತ್ನಗಳನ್ನು ವ್ಯರ್ಥಗೊಳಿಸಿದರು. ಕೊಲಂಬಿಯಾ ಕೋಚ್ ಜೋಸ್ ಪೆಕರ್ಮನ್ ತಮ್ಮ ತಂಡದ ಆಟಗಾರರನ್ನು ಉತ್ತಮ ಯೋಜನೆಯೊಂದಿಗೆಯೇ ಹೋರಾಟಕ್ಕೆ ಅಣಿಗೊಳಿಸಿದ್ದರು. ಅದಕ್ಕೆ ಅವರು ತಕ್ಕ ಫಲವನ್ನೇ ಕಂಡುಕೊಂಡರು.
ಕೊಲಂಬಿಯಾ
2
ಜೇಮ್ಸ್ ರೋಡ್ರಿಗ್
28ನೇ ನಿಮಿಷ,
50ನೇ ನಿಮಿಷ

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.