ಫಿಫಾ ವಿಶ್ವಕಪ್ಗೆ 1.57 ಲಕ್ಷ ಭದ್ರತಾ ಸಿಬ್ಬಂದಿ

ಬ್ರೆಜಿಲಿಯಾ: ಮುಂದಿನ ತಿಂಗಳು ಆರಂಭವಾಗಲಿರುವ ಫಿಫಾ ವಿಶ್ವಕಪ್ ವಿರುದ್ಧ ಬ್ರೆಜಿಲ್ನಲ್ಲಿ ವ್ಯಾಪಕ ಹಿಂಸಾತ್ಮಕ ಹೋರಾಟ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ, ವಿಶ್ವಕಪ್ ಪಂದ್ಯಾವಳಿಗೆ ಭದ್ರತೆ ನೀಡಲು ಒಟ್ಟು 1.57 ಲಕ್ಷ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಬ್ರೆಜಿಲ್ ಸರ್ಕಾರ ತಿಳಿಸಿದೆ.
ಶುಕ್ರವಾರ ಮಾಹಿತಿ ನೀಡಿರುವ ಬ್ರೆಜಿಲ್ ಗೃಹ ಸಚಿವಾಲಯ, ಪಂದ್ಯಾವಳಿಗೆ ಕ್ರಮವಾಗಿ 57 ಸಾವಿರ ನೌಕಾಸೇನೆ, ಭೂಸೇನೆ ಹಾಗೂ ವಾಯುಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ತುರ್ತು ಸಂದರ್ಭಗಳನ್ನು ನಿಭಾಯಿಸಲು ಹೆಚ್ಚುವರಿಯಾಗಿ 21 ಸಾವಿರ ಸಿಬ್ಬಂದಿ ನೀಡಲಾಗಿದೆ ಎಂದು ತಿಳಿಸಿದೆ. ಬ್ರೆಜಿಲ್ ಸರ್ಕಾರ 2012ರಿಂದ ಈ ಪಂದ್ಯಾವಳಿಯ ಆಯೋಜನೆಗಾಗಿ ತನ್ನ ಸೇನೆಯನ್ನು ಬಲಪಡಿಸಿದ್ದು, ಇದಕ್ಕಾಗಿ ರು. 188.43 ಕೋಟಿಯನ್ನು ಖರ್ಚು ಮಾಡಿದೆ.
ಈ ವೇಳೆ ಮಾತನಾಡಿದ ನ್ಯಾಯಾಂಗ ಸಚಿವರಾದ ಜೋಸ್ ಎಡೌರ್ಡೊ ಕಾರ್ಡೊಜ್, ಇತ್ತೀಚೆಗೆ ನಡೆಯುತ್ತಿರುವ ಪ್ರತಿಭಟನೆಗಳು ಹೋರಾಟಗಳನ್ನು ನಂಬಲು ಅಸಾಧ್ಯ. ಈ ಪ್ರತಿಭಟನೆ ವೇಳೆ ಕೋಟ್ಯಾಂತರ ಜನರು ಬೀದಿಗಿಳಿಯಲಿದ್ದು, ಕೆಲವೊಮ್ಮೆ ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ. ಇದರಿಂದ ಪಂದ್ಯಾವಳಿಯ ಆಯೋಜಕರಲ್ಲಿ ಭಯ ಹುಟ್ಟಿದೆ ಎಂದರು.
ಪ್ರತಿಭಟನೆಗಳು ಕಳೆದ ಜೂನ್ ತಿಂಗಳಲ್ಲಿ ನಡೆದಕ್ಕಿಂತ ಸಣ್ಣ ಪ್ರಮಾಣದಲ್ಲಿರುವ ನಿರೀಕ್ಷೆ ಇದೆ. ಆದರೆ ಪ್ರಮಾಣಿಕವಾಗಿ ಹೇಳುವುದಾದರೆ, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


