

ಟ್ರಾನ್ಸಿಲ್ ಎನ್ನುವುದು ಗಂಟಲಿನ ಎರಡು ಭಾಗಗಳಲ್ಲಿರುವ ಚಿಕ್ಕ ಗ್ರಂಥಿಗಳು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕರಿಸುವಂಥದ್ದು.
ಟಾನ್ಸಿಲೈಟಿಸ್ ಎನ್ನುವುದು ಶೀತಕಾಲ ಅಥವಾ ಮಳೆಗಾಲದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ತೊಂದರೆ. ಟಾನ್ಸಿಲ್ ಗ್ರಂಥಿಗಳು ಊದಿಕೊಂಡು ಗಂಟಲು ನೋವು, ಜ್ವರ, ಕೆಮ್ಮು ಇನ್ನಿತರ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವ ಸೋಂಕಿಗೆ ಟಾನ್ಸಿಲೈಟಿಸ್ ಎನ್ನುವರು.
ಇದರಲ್ಲಿ ತೀವ್ರವಾದ ಟಾನ್ಸಿಲೈಟಿಸ್ ಹಾಗೂ ದೀರ್ಘಕಾಲೀನ ಟಾನ್ಸಿಲೈಟಿಸ್ಗಳಿವೆ. ಕೆಲವು ಸಮಸ್ಯೆ ಅಲ್ಪಾವಧಿ ಇದ್ದರೆ, ಮತ್ತೆ ಕೆಲವು ತುಂಬಾ ದಿನಗಳಿಂದ ಇದ್ದು, ಆಗಾಗ ಕಾಣಿಸಿಕೊಂಡು ರೋಗಿಯನ್ನು ತೊಂದರೆಗೀಡು ಮಾಡುತ್ತವೆ. ಗಂಟಲು ನೋವು, ಕೆಮ್ಮು, ದುರ್ವಾಸನೆ, ಜ್ವರ ಇತ್ಯಾದಿ ಲಕ್ಷಣಗಳು ಇದರಿಂದ ಹೆಚ್ಚುತ್ತದೆ.
ಸೋಂಕಿಗೆ ಕಾರಣಗಳೇನು?
ಗಂಟಲಲ್ಲಿ ಕಿಚ್ ಕಿಚ್ಚಾ?