ಲಕ್ ವಾ?

ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬರಿಗೆ ಪಾರ್ಶ್ವವಾಯು! ಆಶ್ಚರ್ಯವಾಗುತ್ತಿದೆಯಲ್ಲ, ಆದರೂ ನಿಜ. ಇಂದಿನ ಒತ್ತಡದ ಬದುಕು, ಬದಲಾದ ಆಹಾರ ಪದ್ಧತಿ, ಧೂಮಪಾನ....
ಲಕ್ ವಾ?
Updated on: 

ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬರಿಗೆ ಪಾರ್ಶ್ವವಾಯು!
ಆಶ್ಚರ್ಯವಾಗುತ್ತಿದೆಯಲ್ಲ, ಆದರೂ ನಿಜ. ಇಂದಿನ ಒತ್ತಡದ ಬದುಕು, ಬದಲಾದ ಆಹಾರ ಪದ್ಧತಿ, ಧೂಮಪಾನ, ಮಾದಕದ್ರವ್ಯ ಸೇವನೆಯಿಂದ ಚಿಕ್ಕ ವಯಸ್ಸಿನವರೂ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಜೂನ್‌ನಲ್ಲಿ ಬಿಡುಗಡೆಗೊಳಿಸಿದ ಅಧ್ಯಯನ ವರದಿ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ 1 ಲಕ್ಷ ಜನರಲ್ಲಿ 130 ಮಂದಿಗೆ ಪಾರ್ಶ್ವವಾಯು ಸಮಸ್ಯೆ ಕಾಡುತ್ತಿದೆ. ವಿಶ್ವಾದ್ಯಂತ 15 ದಶಲಕ್ಷಕ್ಕೂ ಹೆಚ್ಚು ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪೈಕಿ 5 ದಶಲಕ್ಷ ಮಂದಿ ಶಾಶ್ವತ ಅಂಗ ವೈಕಲ್ಯಕ್ಕೆ ಈಡಾಗುತ್ತಾರೆ.

ಏನಿದು ಪಾರ್ಶ್ವವಾಯು?
'ಮೆದುಳಿನ ಮೇಲೆ ನಡೆಯುವ ದಾಳಿ'ಗೆ ಪಾರ್ಶ್ವವಾಯು ಎನ್ನುತ್ತಾರೆ. ಮಿದುಳಿಗೆ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾದಾಗ ಇದು ಸಂಭವಿಸುತ್ತದೆ. ಆಮ್ಲಜನಕ ಮತ್ತು ಪೌಷ್ಟಿಕಾಂಶಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿ ಮಿದುಳಿನ ಕೋಶಗಳು ಸಾಯುತ್ತವೆ. ರಕ್ತದ ಕೊರತೆ ಅಥವಾ ಇಸ್ಕೆಮಿಕ್ ಹಾಗೂ ರಕ್ತ ಸ್ರಾವದಿಂದಾಗುವ (ಹೆಮೋರಾಜಿಕ್) ಪಾರ್ಶ್ವವಾಯು (ಲಕ್ವ) ಎಂಬ ಎರಡು ಬಗೆಗಳಿವೆ.

ಲಕ್ಷಣಗಳೇನು?

  •     ನಡೆದಾಡಲು ಸಮಸ್ಯೆ: ನಡೆಯುವಾಗ ಸಮತೋಲನ ತಪ್ಪುತ್ತದೆ.
  •     ಮಾತನಾಡಲು ಆಗದು: ಮಾತನಾಡುವುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.
  •     ಮುಖ, ತೋಳು, ಕಾಲು ಇವುಗಳ ಪೈಕಿ ಒಂದರಲ್ಲಿ ಬದಿಯಲ್ಲಿ ಹಠಾತ್ತನೆ ಸೆಳೆಯುವಿಕೆ, ದುರ್ಬಲತೆ ಕಾಣಿಸಿಕೊಳ್ಳುತ್ತದೆ.
  •     ಒಂದು ಅಥವಾ ಎರಡೂ ಕಣ್ಣುಗಳ ದೃಷ್ಟಿ ಮಂಜಾಗಬಹುದು. ದೃಷ್ಟಿ ಅಥವಾ ಶ್ರಾವ್ಯ ಅಥವಾ ಎರಡೂ ಸಮಸ್ಯೆ ಕಾಣಿಸಿಕೊಳ್ಳಬಹುದು.
  •     ತೀವ್ರ ಮತ್ತು ಹಠಾತ್ ತಲೆನೋವು.
  •     ಮೇಲ್ಕಂಡ ಯಾವುದೇ ಲಕ್ಷಣಗಳೂ ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
 ಕಾರಣಗಳೇನು?
    ಅಧಿಕ ರಕ್ತದೊತ್ತಡ
    ಹೈಪರ್‌ಲಿಪಿಡೇಮಿಯಾ/ಡಿಸೆಲಿಪಿಡಿಮಿಯ್ಙಾ
    ಕಾರ್ಡಿಯೊವಾಸ್ಕ್ಯುಲರ್ ಸಮಸ್ಯೆ
    ಸ್ಥೂಲ ಕಾಯ
    ವಯಸ್ಸು
ಬೇಗ ಸರಿಪಡಿಸಬಹುದು
ಗೊತ್ತು ಮಾಡಿಕೊಳ್ಳುವುದು ಹೇಗೆ?  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com