

ಕೈ ಮೇಲೆ ಅದೋನೋ ಮಣಿ ಮಣಿ ಅಂಟಿಸಿಕೊಂಡು ಬ್ಯಾಂಡೇಜ್ ಹಾಕಿಕೊಂಡವರನ್ನು ನೀವು ಅಲ್ಲಿ ಇಲ್ಲಿ ನೋಡಿರಬಹುದು. ಕೈ ಬೆರಳುಗಳನ್ನು ಬಳಸಿ ದೇಹದ ನಿರ್ದಿಷ್ಟ ಭಾಗಗಳ ಮೇಲೆ ಒತ್ತಡವನ್ನುಂಟು ಮಾಡಿ ನೀಡುವ ಚಿಕಿತ್ಸೆಯೊಂದಿದೆ. ಇದೇ ಆಕ್ಯುಪ್ರೆಷರ್. ದೇಹದಲ್ಲಿ ಅನೇಕ ಒತ್ತಡ ಬಿಂದುಗಳನ್ನು ಗುರುತಿಸಲಾಗಿದೆ. ಈ ಒತ್ತಡ ಬಿಂದುಗಳ ಮೇಲೆ ಬೆರಳಿನಿಂದ ಒತ್ತಡ ತಂದು ರೋಗವನ್ನು ಗುಣಪಡಿಸಬಹುದು ಎಂದು ಚೀನಾ ಮೂಲದ ಈ ವಿಧಾನದಲ್ಲಿ ಹೇಳಲಾಗಿದೆ. ಇದನ್ನು ಅಧಿಕ ರಕ್ತದೊತ್ತಡ, ಸಿಹಿಮೂತ್ರ ರೋಗ, ಅಸ್ತಮಾ, ಮೈಗ್ರೇನ್, ಋತುಚಕ್ರದ ಏರುಪೇರು, ಮಾನಸಿಕ ಖಿನ್ನತೆ ಮುಂತಾದ ರೋಗಗಳ ಚಿಕಿತ್ಸೆಗೆ ಪರಿಣಾಮಕಾರಿಯಾಗಿ ಬಳಸಬಹುದು.