ಪುಟ್ಟನಿಗೆ ಪೆಟ್ಟು

ಪುಟ್ಟನಿಗೆ ಪೆಟ್ಟು
Updated on: 

ಅಯ್ಯೋ ಮಕ್ಕಳು ಬೀಳದೇ ದೊಡ್ಡೋರು ಬೀಳೋಕೆ ಆಗುತ್ತಾ? ಚೂರು ಪಾರು ಗಾಯಗಳು ಆಗ್ತನೇ ಇರ್ತವೆ ಎಂಬ ಧೋರಣೆಯಿಂದ ಬಹುತೇಕರು ಮಕ್ಕಳು ಬಿದ್ದು ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡಾಗ ತಲೆ ಕೆಡಿಸಿಕೊಳ್ಳೋದೇ ಇಲ್ಲ. ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಬಿಡಿ.
ಹಾಗಂತ ಮಕ್ಕಳು ಬೀಳ್ತವೆ, ಅಳ್ತವೆ ಎಂದು ಆಟಕ್ಕೆ ಕಳುಹಿಸದೇ ಹೋದರೆ ಹೇಗೆ? ಆ ಪಾಟಿ ಹೆದರಿಕೊಳ್ಳುವ ತಾಯಂದಿರಿಗೂ ನಮ್ಮಲ್ಲಿ ಕೊರತೆ ಇಲ್ಲ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮಕ್ಕಳು ಸಾಧ್ಯವಾದಷ್ಟು ಮನೆಯಿಂದ ಹೊರಗೆ ಆಡಲು ಅವಕಾಶ ಕಲ್ಪಿಸಿಕೊಡಬೇಕೆಂಬುದು ತಜ್ಞರ ಅಭಿಪ್ರಾಯ.
ಗಾಯವಾದ ಕೂಡಲೇ ಮಗುವಿಗೆ ಮಾರುಕಟ್ಟೆಯಲ್ಲಿ ಸಿಗುವ ಯಾವುದಾದರೂ ಔಷಧಿಯನ್ನು ಲೇಪಿಸುವುದೊಳಿತು. ಮತ್ತೆ ಸಾಮಾನ್ಯವಾಗಿ ಬ್ಯಾಂಡೇಜ್ ಕಟ್ಟಲಾಗುತ್ತದೆ. ಇದರಿಂದ ಅಷ್ಟೇನೂ ಲಾಭವಿಲ್ಲ. ಇದನ್ನು ಹೊರತುಪಡಿಸಿ ಮಗು ಬಿದ್ದು ಏಟು ಮಾಡಿಕೊಂಡ ಮೇಲೆ ಕೆಲವು ಪ್ರಥಮ ಚಿಕಿತ್ಸೆಗಳಿಗೆ ಆದ್ಯತೆ ನೀಡುವುದು ಒಳಿತು.
*     ಗಾಯವನ್ನು ಮೊದಲಿಗೆ ಸ್ವಚ್ಛ ನೀರಿನಿಂದ ತೊಳೆಯಬೇಕು. ಗಾಯದ ಮೇಲೆ ಕೊಳೆ ಇದ್ದರೆ ಸೋಪು ಹಚ್ಚಿ ಅಥವಾ ಮೆತ್ತನೆಯ ಬಟ್ಟೆಯಲ್ಲಿ ಒರೆಸಿ ತೆಗೆಯಬೇಕು.
*      ಮಗುವಿಗೆ ಊತ ಅಥವಾ ಸೀಳು ಗಾಯವಾಗಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಬ್ಯಾಂಡೇಜ್ ಹಾಕಿದಾಗ ಪೂರ್ತಿ ಗಾಯವೂ ಮುಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ಸೋಂಕಾಗುವುದು ತಪ್ಪುತ್ತದೆ.
*    ವಾಟರ್ ಪ್ರೂಫ್ ಬ್ಯಾಂಡೇಜ್ ಬಳಸಿ. ಇದ ರಿಂದ ಬೇಗ ಗಾಯ ವಾಸಿಯಾಗುತ್ತದೆ.

ಏಳು- ಬೀಳು
ಬಾಲ್ಯದ ದಿನಗಳಲ್ಲಿನ ಏಳು- ಬೀಳುಗಳು ಮಕ್ಕಳ ಕ್ರಿಯಾಶೀಲ ಬೆಳವಣಿಗೆಗೆ ನೆರವಾಗುತ್ತದೆ. ಗಾಯಕ್ಕಿಂತ ಹೆಚ್ಚಾಗಿ ಪ್ರೀತಿ, ಪ್ರೇಮ, ಅಪ್ಯಾಯಮಾನ, ಆತ್ಮೀಯತೆಯಿಂದ ಮಕ್ಕಳನ್ನು ನೋಡಿಕೊಂಡರೆ ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿ.
- ಡಾ. ವಾಸುದೇವ್ ಧನಂಜಯ್, ಡಿಸಿಎಚ್ ಮಕ್ಕಳ ತಜ್ಞ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com