

ಯುನಾನಿ ಗ್ರೀಸ್ ಮೂಲದ ವೈದ್ಯ ಪದ್ಧತಿ. ಅರಬ್ಬರು ಯುರೋಪನ್ನು ಗ್ರೀಕ್ ಹಾಗೂ ರೋಮನ್ ಸಾಮ್ರಾಜ್ಯ ಪತನವಾದ ನಂತರ ಗೆದ್ದುಕೊಂಡರು. ಆಗ ಅರಬ್ಬರು ಬಳಸುತ್ತಿದ್ದ ವೈದ್ಯ ಪದ್ಥತಿ ಇಂದು ಇಸ್ಲಾಮಿಕ್ ವೈದ್ಯ ಪದ್ಧತಿಯಾಗಿ ಖ್ಯಾತಿ ಪಡೆದಿದೆ. ರಸಧಾತುವಿಗೆ ಮಹತ್ವ ನೀಡುವ ಈ ವೈದ್ಯ ಪದ್ಧತಿ ಆಯುರ್ವೇದ ಸಿದ್ಧ ರಸಧಾತುವಿಗಿಂತ ವಿಭಿನ್ನ. ನಾಡಿ ನೋಡಲು ವಿಶೇಷ ಪ್ರಾಮುಖ್ಯ ನೀಡುವುದು ಈ ವೈದ್ಯಪದ್ಧತಿಯ ವಿಶೇಷ.