ಅತಿಯಾದ ಸುಸ್ತಾ?

ಅತಿಯಾದ ಸುಸ್ತಾ?
Updated on: 

ರಕ್ತಹೀನತೆ ಯಾರನ್ನು, ಯಾವಾಗ ಬೇಕಾದರೂ ಕಾಡಬಹುದು. ಅದರಲ್ಲಿಯೂ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಗೆ ಈ ಸಮಸ್ಯೆಗೆ ತುತ್ತಾಗುವುದು ಹೆಚ್ಚು. ಅತಿ ರಕ್ತಸ್ರಾವ, ಅಪೌಷ್ಟಿಕತೆ, ಅಜೀರ್ಣ, ಅಧಿಕ ಮಾಸಿಕ ರಜಸ್ರಾವ, ಗರ್ಭಪಾತ, ರಕ್ತಭೇದಿ, ಕಾಮಾಲೆ, ಮೂಲವ್ಯಾಧಿ, ಜಂತು ಹುಳಗಳು, ಸಮತೋಲನ ಆಹಾರ ಸೇವಿಸದೇ ಇರುವುದರಿಂದ ಸಾಮಾನ್ಯವಾಗಿ ರಕ್ತಹೀನತೆ ಕಾಡುತ್ತದೆ.
ಸುಸ್ತು, ಮುಖ ಬಿಳಚಿಕೊಳ್ಳುವುದು, ಉಗುರಿನಲ್ಲಿ ಬಿಳಿ ಬಣ್ಣದ ಚುಕ್ಕೆ ಕಾಣಿಸಿಕೊಳ್ಳುವುದು, ಕೈ ಕಾಲು ಉಗುರಿನಲ್ಲಿ ತಗ್ಗಿರುವುದು, ತಲೆ ಭಾರ, ನಿರಾಸಕ್ತಿ, ಕಣ್ಣಿನ ರೆಪ್ಪೆಯ ಒಳ ಭಾಗ ಬಿಳುಚಿಕೊಳ್ಳುವುದು, ತಲೆಸುತ್ತು, ಅಜೀರ್ಣ ಇವು ರಕ್ತಹೀನತೆಯ ಲಕ್ಷಣಗಳು. ಇದಕ್ಕೆ ವೈದ್ಯರು ಸೂಕ್ತ ಕಬ್ಬಿಣ ಹಾಗೂ ಬಹು ವಿಟಮಿನ್‌ಗಳುಳ್ಳ ಔಷಧಿಗಳನ್ನು ನೀಡುತ್ತಾರೆ. ಇವು ದೇಹ ತೂಕ ಹೆಚ್ಚಿಸುತ್ತವೆ ಎಂಬ ಭಯದಿಂದ ಮಹಿಳೆಯರು ಇವನ್ನು ಸೇವಿಸಲು ಹಿಂದು ಮುಂದು ನೋಡುತ್ತಾರೆ. ಅದಕ್ಕೆ ಮನೆ ಮದ್ದೂ ಇದೆ.

ಏನಿದು ಚಿಕಿತ್ಸೆ?

  •     ಎರಡು ಚಮಚ ಅಶ್ವಗಂಧ ಬೇರಿನ ಪುಡಿಯನ್ನು, 1 ಲೋಟ ಹಾಲಿಗೆ ಬೆರೆಸಿ ದಿನಕ್ಕೆ 2 ಬಾರಿ ಸೇವಿಸಬೇಕು.
  •     1 ಹಿಡಿ ದಾಳಿಂಬೆ ಎಲೆಯನ್ನು ಅರೆದು ಮೊಸರಿನಲ್ಲಿ ಬೆರೆಸಿ ಪ್ರತಿದಿನ ಕುಡಿದರೆ ಒಳ್ಳೆಯದು.
  •     ನೆಲ್ಲಿಕಾಯಿ ಅಥವಾ ಕಬ್ಬಿನ ರಸ ಬಹಳ ಒಳ್ಳೆಯದು.
  •     ನುಗ್ಗೆಕಾಯಿ ಮತ್ತು ಸೈಂಧವ ಉಪ್ಪನ್ನು ಬಿಸಿನೀರಿನೊಂದಿಗೆ ಸೇವಿಸಿ.
ಯಾವುದು ಒಳ್ಳೆಯದು?
ಯಾವುದು ಬೇಡ?
  • ಮದ್ಯಪಾನ, ಕಾಫಿ, ಟೀ, ಖಾರದ ಪದಾರ್ಥ, ಮಸಾಲೆ, ಕರಿದ ತಿನಿಸುಗಳನ್ನು ಕಂಟ್ರೋಲ್ ಮಾಡಿ.
  • ಆಗಾಗ ಹೊಟ್ಟೆಯಲ್ಲಿನ ಹುಳುಗಳ ಪರೀಕ್ಷೆ ಮಾಡಿಸಬೇಕು. ಅಪೌಷ್ಟಿಕತೆ ಅಥವಾ ಬೇರೆ ಕಾಯಿಲೆಗಳು ಇವೆಯೇ ಎಂದು ಆಗಾಗ ಸೂಕ್ತ ಚಿಕಿತ್ಸೆಗಳ ಮೂಲಕ ಪರೀಕ್ಷಿಸಿಕೊಳ್ಳುತ್ತಿರಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com