

ವಾಸನೆ, ಹೊಗೆ, ಪರಾಗಗಳು, ಪುಡಿಮಣ್ಣು ಮತ್ತು ಧೂಳಿನಲ್ಲಿರುವ ಹುಳುಗಳು ಇತ್ಯಾದಿ ಕಾರಣಗಳಿಂದ ಅಲರ್ಜಿ ಅನುಭವಿಸುವವರಿಗೆ ಕೆಲವೊಮ್ಮೆ ಉಸಿರಾಡಲು ಕಷ್ಟವಾಗುತ್ತದೆ. ಇದನ್ನೇ 'ಅಸ್ತಮಾ' ಎನ್ನುವುದು. ಅಸ್ತಮಾ ಎಂಬ ಪದ ಗ್ರೀಕ್‌ನ 'ಆಸೀನ್' ಎಂಬ ಪದದಿಂದ ಬಂದಿದೆ. ಇದರರ್ಥ ತೆರೆದ ಬಾಯಿಯಿಂದ ಉಸಿರಾಡುವುದು.
ಅಸ್ತಮಾ ಒಂದು ಮನಃಶಾರೀರಿಕ ಅವ್ಯವಸ್ಥೆ. ಇದರಿಂದ ಮನುಷ್ಯ ಸರಿಯಾಗಿ ಕೆಲಸ ಮಾಡಲಾಗದೆ ತನ್ನ ಮೇಲಿನ ವಿಶ್ವಾಸವನ್ನೇ ಕಳೆದುಕೊಳ್ಳುವಂತಾಗುತ್ತಾನೆ. ವಿಶ್ವಾದ್ಯಂತ ಕೋಟ್ಯಂತರ ಮಂದಿಯನ್ನು ಕಾಡುತ್ತಿರುವ ಅಸ್ತಮಾ ಸರಿಸುಮಾರು 15ರಲ್ಲಿ ಒಂದು ಮಗುವನ್ನು ಕಾಡುತ್ತಿದೆ. ಹಾಗಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ದೀರ್ಘಕಾಲಿಕ ಕಾಯಿಲೆಗಳಲ್ಲಿ ಇದು ಸಾಮಾನ್ಯ.
ಲಕ್ಷಣಗಳು