ಕಿವಿ ಪರೀಕ್ಷೆಗೆ ಉಪಯೋಗಿಸುವ ಸಾಧನವನ್ನು ಆರೋಸ್ಕೋಪ್ ಎನ್ನುತ್ತಾರೆ. ಹೊರಕಿವಿ, ಮಧ್ಯಕಿವಿಯಲ್ಲಿಯ ಪರದೆಯನ್ನು ಸ್ಪಷ್ಟವಾಗಿ ನೋಡಲು ಇದರಿಂದ ಸಾಧ್ಯ. ಸಾಧಾರಣವಾಗಿ ಉಪಯೋಗಿಸುವ ಟಾರ್ಚ್‌ನಿಂದ ಕಿವಿ ಪರೀಕ್ಷಿಸಲು ಸಾಧ್ಯವಿಲ್ಲದ ಕಾರಣ ಈ ಸಾಧನವನ್ನು ಬಳಸುತ್ತಾರೆ.
ಆಫ್ಥಾಲ್ಮೋಸ್ಕೋಪ್ ಅಂದ್ರೆ...
ಕಣ್ಣಿನ ಒಳ ಭಾಗದ ಆಪ್ಟಿಕ್ ನರ್ವ್ ಹಾಗೂ ಇತರೆ ಭಾಗಗಳನ್ನು ನೋಡಲು ಈ ಸಾಧನವನ್ನು ಬಳಸಲಾಗುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ ಮುಂತಾದ ರೋಗವಿರುವವರಲ್ಲಿ ನರಗಳು ತುಸು ವ್ಯತ್ಯಾಸ ಹೊಂದಿರುತ್ತದೆ. ಇದರಿಂದ ಮುಂದೆ ಉಂಟಾಗಬಹುದಾದ ಕುರುಡನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಈ ಸಾಧನ ಸಹಕಾರಿ. ಇದರಲ್ಲಿ ಸಮಸ್ಯೆಯನ್ನು ಪತ್ತೆ ಹಚ್ಚುವಂಥ ಮಸೂರವಿರುತ್ತದೆ.