ಸಂಸ್ಕಾರ ಬೇಕು ಗುರು!

Updated on: 

ಜೀವನದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕಾರ ಅತ್ಯಗತ್ಯ. ಸಂಸ್ಕಾರವಿಲ್ಲದ ಜೀವನ ಸಹ್ಯವೆನಿಸುವುದಿಲ್ಲ. ಬಾಲ್ಯದಲ್ಲೇ ಸಂಸ್ಕಾರದ ಪಾಠ ಸಿಗಬೇಕು. ಒಂದು ವೇಳೆ ಕೇವಲ ಶಿಕ್ಷಣವಿದ್ದು ಸಂಸ್ಕಾರ ಶೂನ್ಯನಾದ ವ್ಯಕ್ತಿ ಸಮಾಜಕ್ಕೆ ಕಂಟಕನಾಗುವನು. ಶಿಕ್ಷಣದ ಜತೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಅಂಥ ವ್ಯಕ್ತಿ ದೇಶದ ಆಸ್ತಿಯಾಗಬಲ್ಲ. ಅಂಥ ಸಂಸ್ಕಾರಗಳನ್ನು ಪೋಷಕರು ಮಕ್ಕಳಿಗೆ ಆರಂಭಿಕ ಹಂತಗಳಲ್ಲೆ ಕಲಿಸುವುದು ಅತ್ಯವಶ್ಯ.

  • ಹಸಿವಾದಾಗ ತಿನ್ನುವುದು ಪ್ರಕೃತಿ. ಅದೇ ಸಂದರ್ಭದಲ್ಲಿ ಇನ್ನೊಬ್ಬರ ಆಹಾರ ಕಸಿದು ತಿನ್ನುವುದು ವಿಕೃತಿ. ಆದರೆ, ಮನೆಯವರೆಲ್ಲರ ಊಟ ಆಗಿದೆಯೇ ಎಂದು ಪರೀಕ್ಷಿಸಿ ನಂತರ ಊಟಮಾಡುವುದೇ ಸಂಸ್ಕಾರ.
  • ತಂದೆ-ತಾಯಿಗೆ, ಹಿರಿಯರಿಗೆ, ಶಿಕ್ಷಕರಿಗೆ ಗೌರವಿಸುವ, ನಮಸ್ಕರಿಸುವ ವಿನಯಗಳನ್ನು ಮೊದಲು ಕಲಿಸಿ.
  • ಮಕ್ಕಳನ್ನು ಪರಾವಲಂಬಿ ಮರದ ಬಳ್ಳಿಯಾಗಿ ಬೆಳಸದೇ, ಸ್ವಾವಲಂಬಿ, ಸ್ವಾತಂತ್ರ್ಯ ವೃಕ್ಷವಾಗಿಸಿ.
  • ಸಂಸ್ಕಾರಯುತ ಮನೋಭಾವ ಬೆಳೆಸಲು ಮಹಾತ್ಮರ, ರಾಷ್ಟ್ರಪುರುಷರ ಚರಿತ್ರೆ ಬಗ್ಗೆ ತಿಳಿಸಿ, ಅಂಥ ಪುಸ್ತಕದ ಅಧ್ಯಯನ ಕೈಗೊಳ್ಳಲು ಸಹಕರಿಸಿ.
  • ನಿಮ್ಮ ನಡೆ, ನುಡಿಯನ್ನೆ ನಿಮ್ಮ ಮಕ್ಕಳು ಅನುಸರಿಸುತ್ತಾರೆಂಬ ವಿಷಯ ನಿಮಗೆ ಗೊತ್ತಿರಲಿ.
  • ಓರ್ವ ತಜ್ಞರ ಪ್ರಕಾರ, ಮಕ್ಕಳ ಸಮಸ್ಯೆಯೆಂದರೆ ಸಮಸ್ಯೆಯಿಂದ ಕೂಡಿದ ತಂದೆ ತಾಯಂದಿರೆ ಎಂದಿದ್ದಾರೆ.
  • ಸಂಸ್ಕಾರವಂತರಾಗಲು ನಮ್ಮ ಒಡನಾಡಿಗಳೊಂದಿಗಿನ ಒಡನಾಟವೂ ಅತಿಮುಖ್ಯ. ಹಾಗಾಗಿ ನಿಮ್ಮ ಮಕ್ಕಳ ಗೆಳೆಯರ ಬಳಗದ ಆಯ್ಕೆ ಬಗೆಗೂ ಗಮನವಿರಲಿ.
  • ಕೆಟ್ಟ ಅಭ್ಯಾಸಗಳುಳ್ಳ ಮಕ್ಕಳು ಯಾವಾಗಲೂ ಓಳ್ಳೆಯ ಅಭ್ಯಾಸಗಳುಳ್ಳ ಮಕ್ಕಳನ್ನು ಕಿಚಾಯಿಸುತ್ತಿರುತ್ತಾರೆ. ಇದರಿಂದ ಸಹಜವಾಗಿ ಒಬ್ಬಂಟಿತನ, ಇತರರ ಕುಚೇಷ್ಟೆಗೆ ಅಂಜಿ ಮಕ್ಕಳು ಬಹುಬೇಗ ಕೆಟ್ಟ ಅಭ್ಯಾಸಗಳ ಮೊರೆ ಹೋಗುತ್ತಾರೆ. ಇಂಥ ವಿಚಾರಗಳು ಪಾಲಕರಿಗೆ ತಿಳಿದಿರಲಿ.
- ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com