ವಸಡಿನ ಸ್ಯಾಡ್ ಸ್ಟೋರಿ

ಬಾಯಿ ನಮ್ಮ ದೇಹದ ಹೆಬ್ಬಾಗಿಲು. ಅದರ ಸ್ವಚ್ಛತೆ ನಮ್ಮಿಡೀ ದೇಹದ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಬಹಳಷ್ಟು ಬಾರಿ ದೇಹಕ್ಕೆ ನೀಡುವ ಕಾಳಜಿಯನ್ನು ಬಾಯಿಗೆ ಕೊಡುವುದೇ ಇಲ್ಲ. ನಮಗರಿವಿಲ್ಲದಂತೆ ಇದು ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತದೆ. ಬಾಯಿ, ಮೂಗೇ ದೇಹಕ್ಕೆ ಬರುವ ಸೋಂಕುಗಳಿಗೆ ಪ್ರಮುಖ ದ್ವಾರಗಳಾಗಿದ್ದು ಇದರ ರಕ್ಷಣೆ ಆದ್ಯ ಕರ್ತವ್ಯ. ಅದಕ್ಕೇ ಹೇಳುವುದು, 'Oral health is gateway to overall health' ಎಂದು.
ಶ್ವಾಸಕೋಶದ ಸೋಂಕು
ಬಾಯಿ-ಗಂಟಲಿಗೆ ನೇರ ಸಂಪರ್ಕ ಹೊಂದಿದ ಶ್ವಾಸ ಮಾರ್ಗಕ್ಕೆ ಬಾಯಿಂದ ಸೋಂಕು ನೇರವಾಗಿ ಸೇರಿ ನ್ಯೂಮೋನಿಯಾ ತರಬಹುದು.
ದಂತ ಪರತ(ಕೊಳೆಯ ಪದರು) ನೇರವಾಗಿ ಸೇರಿ ಉಸಿರಿನ ದುರ್ವಾಸನೆ, ಶ್ವಾಸ ನಾಳಕ್ಕೆ ಒಯ್ದು ಸೋಂಕು ಹೆಚ್ಚಿಸುತ್ತದೆ.
ವಸಡು ರೋಗವನ್ನು ತರುವ ಸೋಂಕು, ದೇಹದ ಇತರೆಡೆ ಹರಡಿ ಮೂಳೆ ಸವೆಯುತ್ತದೆ. ಇದರಿಂದ ದವಡೆ ಮೂಳೆ ಸವೆದು, ಹಲ್ಲಿನ ಆಧಾರ ನಶಿಸಿ ಸಾಂದ್ರತೆ ಕಳೆದುಕೊಳ್ಳುವ ಹಲ್ಲು ಬೇಗ ಉದುರುತ್ತದೆ. ಗಟ್ಟಿತನ ಕಳೆದುಕೊಳ್ಳುತ್ತದೆ. ತನ್ನ ಸಾಂದ್ರತೆ ಕ್ಷೀಣಿಸಿದಾಗ ಉದುರುವ, ಮುರಿಯುವ ಸಾಧ್ಯತೆ ಹೆಚ್ಚು.
ಹೃದ್ರೋಗ
ವಸಡು ರೋಗ(ಪಯೋರಿಯಾ)-ಪೆರಿಯೋ ಡಾಂಟೈಟಿಸ್ ತೀವ್ರಗೊಳ್ಳುವ ಸ್ಥಿತಿ. ಸೋಂಕು ರಕ್ತದ ಮೂಲಕ ಹೃದಯಕ್ಕೆ ತಲುಪಿ ಅದರ ಮೇಲ್ಪದರದ ಕವಾಟಗಳಲ್ಲಿ ಸೇರಿ ಹೃದ್ರೋಗ ತರಬಲ್ಲದು. ಇದರಿಂದ ಹೃದಯಾಘಾತವೂ ಆಗಬಹುದು. ಇದರೊಂದಿಗೆ ರಕ್ತಸ್ರಾವ ಸಮಸ್ಯೆಯೂ ಕಾಡಬಹುದು.
ಮಧುಮೇಹ-ವಸಡು ರೋಗ
ವಸಡು ರೋಗ, ಮಧುಮೇಹದೊಂದಿಗೆ ಕನೆಕ್ಟ್ ಆಗಿರುತ್ತದೆ. ವಸಡು ರೋಗದ ತೀವ್ರತೆ ಹೇಗೆ ಮಧುಮೇಹವನ್ನು ಹೆಚ್ಚಿಸುವುದೋ, ಅದೇ ರೀತಿ ಮಧುಮೇಹ ಹೆಚ್ಚಾದಂತೆಲ್ಲ ವಸಡು ರೋಗವೂ ಹೆಚ್ಚುತ್ತದೆ. ಜೊತೆಗೆ ವಸಡಿನಲ್ಲಿ ರಕ್ತಸ್ರಾವ, ವಸಡಿನೂತ, ಸಡಿಲತೆ ಕಾಣಿಸುತ್ತದೆ. ಇದರಿಂದ ಹಲ್ಲಿನ ಬುನಾದಿ ಹಾಳಾಗಿ ಹಲ್ಲು ಸಡಿಲಗೊಳ್ಳುತ್ತದೆ.
ಗರ್ಭಾವಸ್ಥೆ ಮೇಲೂ ಎಫೆಕ್ಟ್
ಗರ್ಭಾವಸ್ಥೆಯ ಹಂತದಲ್ಲಿ ಹಲ್ಲಿನ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಬದಲಾಗುವ ಹಾರ್ಮೋನುಗಳ ವೈಪರೀತ್ಯದಿಂದಾಗಿ ವಸಡಿನ ಬಾವು, ಊತ ಕಾಣಿಸಿಕೊಳ್ಳುಬಹುದು. ವಸಡಿನಲ್ಲಿ ಈ ಮುಂಚೆಯೇ ಸಮಸ್ಯೆ ಇದ್ದರೆ ಅದು ಮತ್ತಷ್ಟು ಹೆಚ್ಚಾಗುತ್ತದೆ. ಅವಧಿಗೂ ಮುನ್ನ ಹೆರಿಗೆ ಆಗುವ ಸಂಭವವಿದ್ದು, ಹುಟ್ಟುವ ಮಗು ಕಡಿಮೆ ತೂಕದ್ದೂ ಆಗಿರಬಹುದು. ಅಲ್ಲದೇ ವಸಡಿನ ಸೋಂಕಿನ ಕ್ರಿಮಿಗಳು ಹೊಕ್ಕುಳ ಬಳ್ಳಿ ಮೂಲಕ ಮಗುವನ್ನು ತಲುಪಿ, ಸೋಂಕು ತರಬಹುದು.
ಅಪಾಯಕಾರಿ ಆಯ್ಯಕ್ಟಿನೊಬ್ಯಾಸಿಲಸ್ ಆಯ್ಯಸ್ಟಿನೋಮೈಸಿಟಮ್ ಕೊಮಿಟ್ಯಾನ್ಸ್ ಎಂಬ ಕ್ರಿಮಿ ಈ ಸೋಂಕಿನ ಪ್ರಮುಖ ಕ್ರಿಮಿಯಾಗಿ. ದೇಹದಲ್ಲಿ ವಸಡು ರೋಗ ಹೆಚ್ಚಾದಾಗ ಕಾಣಿಸಿಕೊಳ್ಳುತ್ತದೆ.
ಬಾಯಿ ಆರೋಗ್ಯ
ಸ್ವಚ್ಛ ಬಾಯಿ, ಸ್ವಚ್ಛ ಹಲ್ಲು ನಿಮ್ಮದಾಗಿರಲಿ.
ಪ್ರತಿ 6 ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಿ ನಿಮ್ಮ ಬಾಯಿಯನ್ನು ಪರೀಕ್ಷಿಸಿಕೊಳ್ಳಿ.
ವಸಡಿನ ಆರೋಗ್ಯಕ್ಕೆ ಉತ್ತಮ ಆಹಾರ ಸೇವಿಸಿ.
ವಸಡಿನ ಆರೋಗ್ಯಕ್ಕೆ ಪ್ರತಿದಿನ ಬೆರಳಿನಿಂದ ಮಸಾಜ್ ಮಾಡಿ.
ವಸಡಿನ ರಕ್ತಸ್ರಾವ ಕಡೆಗಣಿಸದಿರಿ.
ಕಡ್ಡಿ-ಪಿನ್ ಬಳಸಿ ವಸಡನ್ನು ಘಾಸಿ ಮಾಡದಿರಿ.
-ಡಾ.ಕೆ.ವಿ. ಸಂತೋಷ್ ಹೊಳಲ್ಕೆರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


