ಆರೋಗ್ಯ-ಜೀವನಶೈಲಿ

ಪುರುಷತ್ವ ಭಂಗ

ಪುರುಷತ್ವ ಭಂಗ
Published On :

ಕೆಲವೊಮ್ಮೆ ವೆರಿಕೊಸೆಲ್ ನರ ದೌರ್ಬಲ್ಯ ಹೊಂದಿಯೂ ಮಕ್ಕಳಾಗಬಹುದು. ಆದರೆ ಧಾತುವಿನ ಶಕ್ತಿಯಲ್ಲಿ ಕೊರತೆ ಕಾಣಬಹುದು. ಶೀಘ್ರ ಸ್ಖಲನ, ಸ್ಖಲನವೇ ಆಗದಿರುವುದು ಮತ್ತು ಇದಕ್ಕೆ ಪುಷ್ಟಿ ನೀಡುವಂತೆ ಯಾವುದಾದರೂ ಮಾದಕ ದ್ರವ್ಯದ ಪರಿಣಾಮದಿಂದ ಸ್ಖಲನದ ಮೇಲೆ ಪರಿಣಾಮ ಬೀರಬಹುದು.

ಪುರುಷರಲ್ಲಿ ಸಾಮಾನ್ಯವಾಗಿ ಶೇ.8ರಷ್ಟು ನಪುಂಸಕತೆ ಕಂಡು ಬಂದರೆ, ಶೇ. 37 ರಷ್ಟು ಪ್ರಕರಣಗಳಲ್ಲಿ ಮಹಿಳೆಯರಲ್ಲಿ ತೊಂದರೆಯಿರುತ್ತದೆ. ಕೆಲವೊಮ್ಮೆ ಇಬ್ಬರ ದೈಹಿಕ ಅಸಾಮರ್ಥ್ಯವೂ ಕಾರಣವಾಗಬಲ್ಲದು. ಶೇ.5 ರಷ್ಟು ಪ್ರಕರಣಗಳಲ್ಲಿ ನಪುಂಸಕತೆಗೆ ಕಾರಣವನ್ನೇ ಗುರುತಿಸಲಾಗುವುದಿಲ್ಲ.

ಹಿಂದೆ ಮಕ್ಕಳಾಗದಿದ್ದಲ್ಲಿ ಹೆಣ್ಣನ್ನೇ ದೂಷಿಸಲಾಗುತ್ತಿತ್ತು. ಕ್ರಮೇಣ ಗಂಡಸೂ ನಪುಂಸಕನಾಗಿರಲು ಸಾಧ್ಯ ಎಂದು ತಿಳಿದಾಗ ಅಸಿಸ್ಪೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ಸ್ (ಎಆರ್‌ಟಿ) ತಂತ್ರಜ್ಞಾನ ವೈದ್ಯಕೀಯ ಲೋಕವನ್ನು ಪ್ರವೇಶುಸುತ್ತಿದ್ದಂತೇ ಗಂಡಸರಲ್ಲೂ ಸಂತಾನ ಉತ್ಪತ್ತಿ ಶಕ್ತಿ ಇಲ್ಲದಿರಬಹುದು ಎನ್ನುವುದು ಪತ್ತೆಯಾಯಿತು. ಎಆರ್‌ಟಿ ಮೂಲಕ ದಂಪತಿಗೆ ಚಿಕಿತ್ಸೆ ನೀಡಿ, ಗರ್ಭ ಧರಿಸಲು ನೆರವಾಗುವಂತೆ ಮಾಡಲಾಯಿತು.

ಪುರುಷ ಹೇಗೆ ಕಾರಣ?

ಗಂಡಸರಲ್ಲಿ ವೀರ್ಯಾಣು ಕೊರತೆ ಮತ್ತು ಅಸಮತೋಲನದಲ್ಲಿರುವುದು ನಪುಂಸಕತೆಗೆ ಮೊದಲ ಕಾರಣ. ಮದ್ಯಪಾನ, ಔಷಧಿಗಳ ಅಡ್ಡ ಪರಿಣಾಮ, ರಾಸಾಯನಿಕಗಳು, ಕ್ಯಾನ್ಸರ್ ಸಲುವಾಗಿ ತೆಗೆದುಕೊಳ್ಳುವ ರೇಡಿಯೇಷನ್-ಕೆಮೋಥೆರಪಿಯಂಥ ಚಿಕಿತ್ಸೆಗಳು, ವಂಶಪಾರಂಪರ್ಯ, ನರ ದೌರ್ಬಲ್ಯ, ವಾತಾವರಣ ಪೂರಕವಾಗಿಲ್ಲದಿರುವುದು, ಹಾರ್ಮೋನ್‌ಗಳ ಕೊರತೆ, ಥೈರಾಯ್ಡ್ ಸಮಸ್ಯೆ, ಅಪಘಾತ-ಹೀಗೆ ಹಲವು ಕಾರಣಗಳನ್ನು ಪುರುಷ ನಪುಂಸಕತೆಯ ಭಾಗವಾಗಿ ಗುರುತಿಸಲಾಗಿದೆ.

ವೆರಿಕೊಸೆಲ್ ಎಂಬ ಲೈಂಗಿಕ ಶಕ್ತಿ-ಆಸಕ್ತಿ ಗರಿಗೆದರಿಸುವ ನರ ವೀರ್ಯಾಣು ಕೊರತೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಶೇ.15ರಷ್ಟು ಜನತೆಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಕೆಲವೋಮ್ಮೆ ವೆರಿಕೊಸೆಲ್ ನರ ದೌರ್ಬಲ್ಯ ಹೊಂದಿಯೂ ಮಕ್ಕಳಾದರೂ, ಧಾತುವಿನ ಶಕ್ತಿಯಲ್ಲಿ ಕೊರತೆ ಕಾಣಬಹುದು. ಶೀಘ್ರ ಸ್ಖಲನ, ಸ್ಖಲನವೇ ಆಗದಿರುವುದು ಮತ್ತು ಮಾದಕ ದ್ರವ್ಯದ ಸೇವನೆ ಸ್ಖಲನದ ಮೇಲೆ ಪರಿಣಾಮ ಬೀರಬಹುದು.

ಶೇ.20ರಷ್ಟು ಪುರುಷರಲ್ಲಿ ಗುರುತಿಸಲ್ಪಟ್ಟ ಲೈಂಗಿಕ ಕ್ರಿಯಾಹೀನತೆಯೂ ನಪುಂಸಕತೆಯೇ ಆಗಿದೆ. ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ, ಶಿಶ್ನದ ಉತ್ತೇಜನದಲ್ಲಿ ಹಿನ್ನಡೆ, ಶೀಘ್ರ ಸ್ಖಲನ ಇವು ಲೈಂಗಿಕ ಕ್ರಿಯಾಹೀನತೆಯ ಮುಖ್ಯ ಲಕ್ಷಣಗಳು.

ಖಿನ್ನತೆ, ಆತಂಕ, ವಯಸ್ಸಾದಂತೆ ಲೈಂಗಿಕ ಚಟುವಟಿಕೆಯ ಕುಂಠಿತಕ್ಕೆ ವೈದ್ಯಕೀಯ ಸಲಹೆ ಮತ್ತು ಔಷಧೋಪಚಾರ ಅಗತ್ಯ.

ಸಮಸ್ಯೆ ಪತ್ತೆ ಹಚ್ಚುವುದು ಹೇಗೆ?


ವೀರ್ಯಾಣುಗಳನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ವಿಶ್ಲೇಷಿಸಲಾಗುವುದು. ಜತೆಗೆ ಶಿಶ್ನದ ಗಾತ್ರ, ಆಕಾರ ಇತ್ಯಾದಿಗಳನ್ನು ಪರಿಗಣಿಸಲಾಗುವುದು.

ವೀರ್ಯಾಣುಗಳು ಸಾಮಾನ್ಯವಾಗಿ 20 ಮಿಲಿಯನ್ ಪ್ರತಿ ಮಿಲಿಲೀಟರ್‌ಗೆ ಇದ್ದು, ಸ್ಖಲನವಾದಲ್ಲಿ ಸಹಜ ಸ್ಥಿತಿ. ವೀರ್ಯಾಣು ಕಡಿಮೆಯಾಗಲು ಮೂತ್ರ ಜನಕಾಂಗದ ದೋಷವೂ ಕಾರಣ. ಇದನ್ನು ಸರಿಪಡಿಸಿ, ನಂತರದ ಪರೀಕ್ಷೆಗಳಿಗೆ ಮುಂದಾಗ ಬಹುದು. ವೀರ್ಯಾಣು ಹೆಚ್ಚು ಉತ್ಪಾದನೆಯಾಗಲು ದುಬಾರಿ ಇಂಜೆಕ್ಷನ್‌ಗಳಿದ್ದು, ಇದೊಂದು ಸುದೀರ್ಘ ಪ್ರಕ್ರಿಯೆ.

ಸರಿ ಹೋಗಲು ಏನು ಮಾಡಬೇಕು?


  • ಶಿಶ್ನವನ್ನು ಬಿಸಿ ನೀರಿಗೆ ಒಡ್ಡಬಾರದು, ಬಿಸಿ ನೀರಿನ ಟಬ್ ಬಳಸಬಾರದು.
  • ಅತಿ ಬಿಗಿಯಾದ ಒಳವಸ್ತ್ರ ಧರಿಸಬಾರದು.
  • ವೀರ್ಯಾಣುಗಳು ದಾಟಿ ಬರುವ ಲೈಂಗಿಕ ನಳಿಗೆಯಲ್ಲಿ ಇರುವ ಅಡೆತಡೆಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ನಿವಾರಿಸಲಾಗುತ್ತದೆ.
  • ವೆರಿಕೊಸೆಲ್ ನರವನ್ನೂ ವೈದ್ಯಕೀಯವಾಗಿ ಗುಣಪಡಿಸುವ ತಂತ್ರಜ್ಞಾನವಿದೆ. ಈ ನರಕ್ಕೆ ಹಾನಿಯಾಗಿದ್ದರೆ ಸರಿಪಡಿಸಲು ಅಸಾಧ್ಯ.
  • ವೀರ್ಯಾಣು ಉತ್ಪಾದಕ ನರಗಳಿಗೆ ತೀವ್ರ ಘಾಸಿಯಾಗಿದ್ದರೂ ಪರಿಹಾರ ಅಸಾಧ್ಯ.

ಗರ್ಭಧಾರಣೆ ಹೇಗೆ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.