ಡಿ(ಬಿ)ಯರ್...

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಜಗತ್ತೇ ಬೊಬ್ಬೆ ಹೊಡೆಯುತ್ತಿರುವಾಗ 'ಬಿಯರ್ ಕುಡಿದು ಆರೋಗ್ಯವಾಗಿರಿ' ಎಂದರೆ, ಇದೆಂಥ ಮಾತು ಎಂದುಕೊಳ್ಳಬೇಡಿ. ನಿಯಮಿತವಾಗಿ, ಸ್ವಲ್ಪ ಪ್ರಮಾಣದ ಬಿಯರ್ ಸೇವಿಸುವುದು ಆರೋಗ್ಯಯುತ ಜೀವನಕ್ಕೆ ರಹದಾರಿ ಎಂದು ವೈಜ್ಞಾನಿಕವಾಗಿಯೇ ಸಾಬೀತಾಗಿದೆ. ಆದರೆ, ಅತಿಯಾಗಿ ಸೇವಿಸಿದರೆ ಹಾನಿಕರ ಎಂಬ ಎಚ್ಚರಿಕೆಯೂ ನೆನಪಿರಲಿ.
ಅಷ್ಟಕ್ಕೂ ಬಿಯರ್ ಕುಡಿದರೆ ಏನಾಗುತ್ತದೆ? ಕುಡಿದ ಒಂದು ಗಂಟೆಯಲ್ಲಿ ದೇಹದ ರಕ್ತನಾಳಗಳು ಸರಾಗವಾಗಿ ರಕ್ತಚಲನೆ ಸುಸೂತ್ರವಾಗುತ್ತದೆ. ವಿಶೇಷವಾಗಿ ಹೃದಯದ ರಕ್ತನಾಳಗಳು ಬಲಗೊಳ್ಳುತ್ತವೆ. ಬಿಯರ್‌ನಲ್ಲಿ ಪಾಲಿಕ್ ಆ್ಯಸಿಡ್ ಜಾಸ್ತಿಯಿದ್ದು ಹೃದಯ ಸಂಬಂಧಿತ ಕಾಯಿಲೆಗಳನ್ನು ಶೇ.20ರಿಂದ 40ರಷ್ಟು ಕಡಿಮೆ ಮಾಡುತ್ತದೆ. ಹೃದಯಾಘಾತಗಳನ್ನು ತಡೆಗಟ್ಟುತ್ತದೆ. ದೇಹದಲ್ಲಿ ಕೊಲೆಸ್ಟರಾಲ್ ಕೂಡ ಕಡಿಮೆಯಾಗುತ್ತದೆ.
ಬಿಯರ್‌ನಲ್ಲಿ ವಿಟಮಿನ್ ಪ್ರಮಾಣ ಹೆಚ್ಚಿರುವುದರಿಂದ ಬಿಯರ್ ಕುಡಿಯುವವರ ದೇಹದಲ್ಲಿ ಶೇ.30ರಷ್ಟು 'ವಿಟಮಿನ್ ಬಿ 6' ಅಧಿಕ ಪ್ರಮಾಣದಲ್ಲಿರುತ್ತದೆ. ಇದರಿಂದ ಕಿಡ್ನಿ ಸಮಸ್ಯೆ ತಡೆಗಟ್ಟಬಹುದು. ಬಿಯರ್‌ನಲ್ಲಿ ನೀರಿನ ಅಧಿಕವಾಗಿರುವುದರಿಂದ ಅದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವುದಲ್ಲದೇ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದನ್ನು ತಡೆಗಟ್ಟುತ್ತದೆ.
ನ್ಯೂ ಇಂಗ್ಲೆಂಡ್ ಜರ್ನಲ್ ಪ್ರಕಾರ, ಬಿಯರ್ ಮಾನಸಿಕವಾಗಿಯೂ ನಿಮ್ಮನ್ನು ಚೆನ್ನಾಗಿಡುತ್ತದೆ. ಮನಸ್ಸು ಖುಷಿಯಿಂದ ಇರುತ್ತದೆ. ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಮುಖ್ಯವಾಗಿ ನಿಯಮಿತವಾದ ಬಿಯರ್ ಕುಡಿಯುವ ವೃದ್ಧ ಮಹಿಳೆಯರನ್ನು ಮಾನಸಿಕ ಸಮಸ್ಯೆಯಿಂದ ದೂರವಿರಲು ಪ್ರಯೋಜನಕಾರಿಯಾಗಿದೆ. ಈ ಪೇಯ ಪಾರ್ಶ್ವವಾಯುವಿನಂಥ ರೋಗವನ್ನೂ ನಿಯಂತ್ರಣ ಮಾಡುತ್ತದೆ. ಬಿಯರ್ ಕುಡಿಯುವ ಅಭ್ಯಾಸ ಇಲ್ಲದವರು ಹೊಸದಾಗಿ ಶುರು ಹಚ್ಚಿಕೊಳ್ಳಬೇಕಿಲ್ಲ. ಇದು ಅಭ್ಯಾಸ ಉಳ್ಳವರಿಗೆ ಮಾತ್ರ!
= ಮಂಜುನಾಥ್ ಎಸ್.
manjunathas1989@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


