ಸ್ವಯಂ ಪರೀಕ್ಷೆ: ಪತ್ತೆ ಮಾಡಿ, ಗುಣಮುಖರಾಗಿ

ಕ್ಯಾನ್ಸರ್ ಆಧುನಿಕ ಮನುಷ್ಯನ ವೈರಿ. ಇದರ ಹೆಸರು ಕೇಳಿದರೆ ಸಾಕು ನಡುಕ ಶುರುವಾಗುತ್ತದೆ. ಅದರಲ್ಲಿಯೂ ಈಗೀಗ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿಬಿಟ್ಟಿದೆ. ಇದರೆ ಬಗ್ಗೆ ಜನರಲ್ಲಿ ತುಸು ಹೆಚ್ಚಿನ ಜಾಗೃತಿ ಮೂಡಿ, ತಮ್ಮ ಸಮಸ್ಯೆಯನ್ನು ತಾವೇ ಆರಂಭದಲ್ಲಿಯೇ ಪತ್ತೆ ಹಚ್ಚುವಷ್ಟು ಅರಿವು ಮೂಡಿದರೆ ರೋಗವನ್ನು ಸುಲಭವಾಗಿ ಹೊಡೆದು ಓಡಿಸಬಹುದು.
ಆರಂಭದ ಹಿಂಜರಿಕೆಯನ್ನು ಕೊಡವಿ ಹಾಕಿ ಪರೀಕ್ಷೆಯ ಪ್ರಕ್ರಿಯೆಗೆ ಒಳಗಾಗುವುದು ಬಹಳ ಮುಖ್ಯ. ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದಂತೆ ದೇಹದಲ್ಲಿ ತುಸು ಬದಲಾವಣೆಯಾದರೂ ವೈದ್ಯರನ್ನು ಕಂಡು ಸೂಕ್ತ ಸಲಹೆ ಪಡೆದರೆ ರೋಗದ ಬಗ್ಗೆ ಚಿಂತಿಸುವ ಅಗತ್ಯವೇ ಇರುವುದಿಲ್ಲ. ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ ರೋಗ ಗುಣಮುಖವಾಗಲು ಸಹಕರಿಸುತ್ತಾರೆ.
ದೈಹಿಕ ಬದಲಾವಣೆಯ ಪತ್ತೆ ಹೇಗೆ?
ಒಂದು ಸ್ತನ ಮತ್ತೊಂದಕ್ಕಿಂತ ಗಾತ್ರದಲ್ಲಿ ಹಿಗ್ಗುವುದು ಅಥವಾ ಕುಗ್ಗುವುದು.
ಮೊಲೆಯ ತೊಟ್ಟು - ಒಳಕ್ಕೆಳೆದುಕೊಂಡಂತೆ ಇರುವುದು. ಅದರ ಸ್ಥಾನ ಅಥವಾ ಆಕಾರದಲ್ಲಿ ಬದಲಾವಣೆ ಆಗುವುದು.
ಮೊಲೆ ತೊಟ್ಟಿನ ಮೇಲೆ ಅಥವಾ ಸುತ್ತಮುತ್ತ ದದ್ದು ಉಂಟಾಗುವುದು. ಅಥವಾ ಯಾವುದಾದರೊಂದು ಮೊಲೆ ತೊಟ್ಟಿನಿಂದ ದ್ರವ ಸ್ರಾವವಾದರೆ ವೈದ್ಯಕೀಯ ತುರ್ತು ಚಿಕಿತ್ಸೆ ಅಗತ್ಯವೆಂದೇ ಅರ್ಥ.
ಇನ್ನೊಂದೆಡೆ ಮೊಲೆತೊಟ್ಟಿನ ಸುತ್ತಮುತ್ತ ಗಂಟಾಗುವುದು ಅಥವಾ ಗುಳಿ ಬೀಳುತ್ತದೆ. ಇದು ಒಳ ಭಾಗದಲ್ಲಿ ಮಾಂಸಖಂಡ ಗಟ್ಟಿಯಾಗುತ್ತಿರುವ ಸೂಚನೆ. ಇದೊಂದು ಎಚ್ಚರಿಕೆಯ ಗಂಟೆ ಆಗಿದ್ದು ತಕ್ಷಣವೇ ಗಮನಿಸಬೇಕು. ಅಲ್ಲದೆ ಯಾವುದೇ ಕಾಣುವಂಥ ಬದಲಾವಣೆಗಳು ಇಲ್ಲದಿದ್ದಲ್ಲಿ ಯಾವುದಾದರೂ ಒಂದು ಸ್ತನದ ಅಥವಾ ಕಂಕುಳಲ್ಲಿನ ಸತತ ನೋವನ್ನು ಮಹಿಳೆ ಕಡೆಗಣಿಸಬಾರದು. ನೆನಪಿರಲಿ ಇದು ಕ್ಯಾನ್ಸರ್ ಚಿಹ್ನೆ ಆಗಿರಬಹುದು.
ನಿಮ್ಮ ದೇಹದರಿವು ನಿಮಗಿರಲಿ
ಸ್ತನಗಳ ಸಾಮಾನ್ಯ ಗಾತ್ರ ಮತ್ತು ನೋಟದ ಬಗ್ಗೆ ಚೆನ್ನಾಗಿ ಅರಿವಿದ್ದವರು ಮಾತ್ರ ಅದರಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಬಹುದು. ಆಗ ನಿಗದಿತವಾಗಿ ಸ್ವಯಂ ಪರೀಕ್ಷೆ ಮಾಡಿಸಿಕೊಳ್ಳಬಹುದು. ಸಂದೇಹವಿದ್ದಲ್ಲಿ, ವೈದ್ಯರನ್ನು ಭೇಟಿ ಮಾಡಬಹುದು. ಇದು ಕ್ಯಾನ್ಸರ್ ಅನ್ನು ಬೇಗನೆ ಪತ್ತೆ ಹಚ್ಚಿ, ರೋಗ ಗುಣಪಡಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. <
ಪತ್ತೆ ಮಾರ್ಗ ಯಾವುದು?
ಬಹುತೇಕ ಸ್ತನ ಕ್ಯಾನ್ಸರ್ಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಮ್ಯಾಮೋಗ್ರಫಿ ಸಾಮಾನ್ಯ ಪರೀಕ್ಷೆ. ಸೋನೊಮ್ಯಾಮೋಗ್ರಫಿ ಮತ್ತು ಎಂಆರ್ಐಗಳು ಸ್ತನದ ಸ್ಥಿತಿಯನ್ನು ವಿಶ್ಲೇಷಿಸುವ ಸಾಧನಗಳು. ಇದರೊಂದಿಗೆ ಸ್ವಯಂ ಪರೀಕ್ಷೆ ಮತ್ತು ಅನಾನುಕೂಲತೆ ಎನಿಸಿದಾಗ ವೈದ್ಯರ ಸಲಹೆ ಪಡೆಯುವುದು ಸ್ತನ ಕ್ಯಾನ್ಸರ್ ನಿಭಾಯಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ.
ದೈಹಿಕ ಬದಲಾವಣೆಗಳನ್ನು ಗುರುತಿಸುವುದರಿಂದ ಸ್ತನ ಕ್ಯಾನ್ಸರ್ ಗುಣಪಡಿಸುವಲ್ಲಿ ರೋಗಿಗೆ ಅತ್ಯುತ್ತಮ ಅವಕಾಶ ಲಭ್ಯವಾಗುತ್ತದೆ. ಕ್ಯಾನ್ಸರ್ ಮೂಲದಲ್ಲಿಯೇ ಗುಣಪಡಿಸಲು ರೋಗಿಯ ಉತ್ಸಾಹ ಮತ್ತು ಜ್ಞಾನ ಎರಡೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
-ಡಾ. ಪೂನಂ ಪಾಟೀಲ್,
ಕ್ಯಾನ್ಸರ್ ತಜ್ಞೆ, ಮಣಿಪಾಲ್ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಯೂನಿಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


