ಆರೋಗ್ಯ-ಜೀವನಶೈಲಿ

ಮಿಲ್ಕಿ ವೇ

ಮಿಲ್ಕಿ ವೇ
Published On :

ಅದೇನೋ ನಮ್ಮ ಅಮ್ಮ, ಅಜ್ಜಿಯರಿಗೊಂದು ನಂಬಿಕೆ, ಹಾಲು ಕುದಿಸಿದಷ್ಟು ಒಳ್ಳೆಯದೆಂದು. ಕೆನೆ ಹೆಚ್ಚು ಬರುತ್ತೆ. ಬೆಣ್ಣೆ, ತುಪ್ಪಾನೂ ಜಾಸ್ತಿಯಾಗುತ್ತೆ ಎಂಬುದೂ ಮರೆಯದೇ ಹಾಲನ್ನು ಕುದಿಸುವುದರ ಹಿಂದಿನ ರಹಸ್ಯ.  ಹಳ್ಳಿ ಮನೆಗಳಲ್ಲಂತೂ ಕೆಂಡದ ಒಲೆ ಮೇಲೆ ಹಾಲು ಬತ್ತಿ ಹೋಗುವವರೆಗೂ ಕುದಿಯುತ್ತಲೇ ಇರುತ್ತೆ.

ಆದರೆ, ಭಾರತೀಯ ಮಹಿಳೆಯರಿಗೆ ಹಾಲನ್ನು ಕುದಿಸಿದಷ್ಟು ಪೌಷ್ಟಿಕಾಂಶಗಳು ನಶಿಸುತ್ತವೆ ಎಂಬ ವಿಷಯವೇ ಗೊತ್ತಿಲ್ಲ. ಹಾಲಿನ ಸುರಕ್ಷತೆ ಹಾಗೂ ಮಕ್ಕಳಲ್ಲಿ ಪೌಷ್ಟಿಕತೆ ಕೊರತೆ ಬಗ್ಗೆ ಅನೇಕ ಕಳವಳಕಾರಿ ಅಂಶಗಳು ಸಂಶೋಧನೆಗಳಿಂದ ಬೆಳಕಿಗೆ ಬಂದಿವೆ.

ಬಾಲ್ಯದಲ್ಲಿ ಬೇಕು ಹಾಲು
ಸುಮಾರು ಶೇ.80ರಷ್ಟು ಮಕ್ಕಳ ಬಾಲ್ಯ ಬೆಳವಣಿಗೆ ಮೊದಲ ಎರಡು ವರ್ಷದಲ್ಲಾಗುತ್ತದೆ. ಹಾಲು ಆಗ ನಿರ್ಣಾಯಕ ಅಂಶವಾಗಿರುತ್ತದೆ. ಈ ಘಟ್ಟದಲ್ಲಿ ಮುಖ್ಯವಾಗಿ ಪ್ರೊಟೀನ್, ವಿಟಮಿನ್‌ಗಳು ಬೇಕು. ಇದರ ಕೊರತೆ ಉಂಟಾದರೆ ಮೂಳೆಗಳ ಬೆಳವಣಿಗೆಯೂ ಕುಂಠಿತವಾಗಬಹುದು. ಸ್ನಾಯುಗಳು ಬಲಶಾಲಿಯಾಗುವುದಿಲ್ಲ. ನರವ್ಯೂಹದ ಸಮಸ್ಯೆ ಕಾಣಿಸಿಕೊಳ್ಳಬಹುದು. ದೀರ್ಘಕಾಲೀನ ಅನೇಕ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ಹಾಲು ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ ಮಕ್ಕಳಿಗೆ ಏನೇನು ಪೋಷಕಾಂಶಗಳು ಅಗತ್ಯವೋ, ಅದು ಇದರಲ್ಲಿದೆ. ವಿಟಮಿನ್ 'ಡಿ' ಮತ್ತು ವಿಟಮಿನ್ 'ಬಿ'12ರ ಆಕರವಾಗಿದೆ. ಕ್ಯಾಲ್ಷಿಯಂ ಕೂಡ ಅಧಿಕವಾಗಿದೆ. ಹಾಲೊಂದು ಪರಿಪೂರ್ಣ ಆಹಾರ. ಯುಎಚ್‌ಟಿ ಹಾಲಿನ ಪ್ಯಾಕ್‌ಗಳನ್ನು ಜನರು ಬಳಸಿದರೆ ಸೂಕ್ತ. ಇದರಲ್ಲಿ ಸೂಕ್ತ ತಂತ್ರಜ್ಞಾನವಿದ್ದು, ಹಾಲಿನ ಪೋಷಕಾಂಶಗಳನ್ನು ರಕ್ಷಿಸುತ್ತದೆ. ಈ ಹಾಲನ್ನು ಕುದಿಸಬೇಕಾದ ಅಗತ್ಯವೇ ಇಲ್ಲ.

ಹಾಲಿನಲ್ಲಿ ಪೋಷಕಾಂಶಗಳ ಗುಣಮಟ್ಟ ಕಾಪಾಡುವುದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಅತ್ಯಗತ್ಯ. ಮಕ್ಕಳಲ್ಲಿ ಐಕ್ಯೂ ಹೆಚ್ಚಿಸಲು ಪೋಷಕಾಂಶಗಳು ಬಹು ಮುಖ್ಯ. ತಜ್ಞರು ನೀಡುವ ಸಲಹೆಯಂತೆ ಹಾಲನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕುದಿಸಬಾರದು. ಮತ್ತೆ ಮತ್ತೆ ಕಾಯಿಸುವ ಅವಶ್ಯಕತೆಯೇ ಇಲ್ಲ. ಇದರಿಂದ ನಕಾರಾತ್ಮಕ ಪರಿಣಾಮ ಉಂಟಾಗಬಹುದು. <

17ಶೇ.ರಷ್ಟು ತಾಯಂದಿರು ಹಾಲನ್ನು ಕುದಿಸುವುದರಿಂದ ಪೌಷ್ಟಿಕಾಂಶಗಳು ನಶಿಸುತ್ತವೆ ಎಂಬುದನ್ನು ಅರಿತಿದ್ದಾರೆ.

24 ಶೇ.ರಷ್ಟು ಮಾತೆಯರು ಹಾಲು ಕುದಿಸಿದರೆ ಪೌಷ್ಟಿಕಾಂಶಗಳು ನಶಿಸುವುದಿಲ್ಲ ಎಂದೇ ತಿಳಿದುಕೊಂಡಿದ್ದಾರೆ.

59ಶೇ.ರಷ್ಟು ತಾಯಂದಿರ ಪ್ರಕಾರ ಹಾಲು ಕುದಿಸುವುದರಿಂದ ಅದರ ಪೌಷ್ಟಿಕಾಂಶ ಹೆಚ್ಚುತ್ತದೆ.

ಬಹುತೇಕ ಭಾರತೀಯ ಮಾತೆಯರಿಗೆ ಹಾಲನ್ನು ಹೆಚ್ಚು ಹೆಚ್ಚು ಕುದಿಸುವುದರಿಂದ ಪೌಷ್ಟಿಕಾಂಶಗಳು ನಷ್ಟವಾಗುತ್ತದೆ ಎಂಬುದೇ ಗೊತ್ತಿಲ್ಲ. 100 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 15 ನಿಮಿಷಕ್ಕಿಂತ ಹೆಚ್ಚು ಕಾಲ ಕುದಿಸಿದಾಗ ಹಾಲಿನಲ್ಲಿರುವ ಪೌಷ್ಟಿಕಾಂಶಗಳು ನಶಿಸುತ್ತವೆ. ಅಗತ್ಯ ವಿಟಮಿನ್, ಪ್ರೊಟೀನ್, ಆಮಿನೊ ಆಮ್ಲ ಮತ್ತು ಖನಿಜಾಂಶಗಳೂ ನಷ್ಟವಾಗುತ್ತವೆ.
-ಡಾ. ಮಂಜಾರಿ ಚಂದ್ರ, ನ್ಯೂಟ್ರೀಶಿಯನ್ ತಜ್ಞ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.