ಜಯ ಸುಲಲಿತ

ಜೀವನದಲ್ಲಿ ಎಲ್ಲರಿಗೂ ಯಶಸ್ಸಿನ ತುತ್ತ ತುದಿಯೇರಿ ಕೇಕೆ ಹಾಕುವ ಉಮೇದು. ಆದರೆ, ಅದಕ್ಕೆ ಬೇಕಾದ ಪ್ರಯತ್ನ ಮಾತ್ರ ಯಾರಿಗೂ ಬೇಡ. ಇನ್ನೊಬ್ಬರ ಯಶಸ್ಸನ್ನು ನೋಡಿ ಅವರಂತಾಗಬೇಕು ಎಂದುಕೊಳ್ಳುತ್ತೇವೆ. ಆದರೆ ಅವರು ಆ ಸ್ಥಿತಿಗೆ ತಲುಪಬೇಕಾದ್ದರೆ ಪಟ್ಟ ಕಷ್ಟ, ಜೀವನ ಪದ್ಧತಿ, ರೀತಿ ನೀತಿಗಳನ್ನು ನಾವು ಗಮನಿಸುವುದಿಲ್ಲ. ಹಾಗಾಗಿಯೇ ಎಲ್ಲರಿಗೂ ಎಲ್ಲ ಕಾಲಕ್ಕೂ ಯಶಸ್ಸು ಸಿಗುವುದಿಲ್ಲ. ಒಂದಿಷ್ಟು ಬೇಸಿಕ್ ಸಂಗತಿಗಳನ್ನು ನಾವು ಮನನ ಮಾಡಿಕೊಂಡು, ಆಚರಣೆಗೆ ತಂದುಕೊಂಡರೆ ಸಕ್ಸಸ್ ನಿಮ್ಮ ಅಂಗೈಯಲ್ಲಿ.
ಬೇಗ ಎದ್ದೇಳಿ
ದಿನವು ನಿಮ್ಮದೇ ಆಗಬೇಕಿದ್ದರೆ ನಿತ್ಯ ಮುಂಜಾವಿನಲ್ಲಿ ಬೇಗ ಏಳಿ. ಆಗ ನಿಮ್ಮ ದೇಹ ಮತ್ತು ಮನಸ್ಸು ಎರಡೂ ತಾಜಾತನಗೊಳ್ಳುತ್ತವೆ. ಇದರಿಂದ ಅಂದು ನೀವು ಮಾಡಬೇಕಿದ್ದ ಕೆಲಸಗಳಿಗೆ ಚೈತನ್ಯ ದೊರೆಯುತ್ತದೆ. ಹಾಗಂತ, ನಿಮ್ಮ ದಿನಚರಿ ಕಚೇರಿಯೊಂದಿಗೆ ಆರಂಭವಾಗುವುದು ಬೇಡ. ಅಂದಿನ ದಿನಕ್ಕೇ ಏನೇನು ಮಾಡಬೇಕು ಎಂಬುದನ್ನು ಪ್ಲ್ಯಾನ್ ಮಾಡಿಕೊಳ್ಳಿ. ಅದರಂತೆ ಅಂದಿನ ಕೆಲಸಗಳನ್ನು ಅಂದೇ ಮಾಡಿ ಮುಗಿಸಿಬಿಡಿ.
ಒಂದಿಷ್ಟು ವ್ಯಾಯಾಮ
ಅದು ಎಂಥದ್ದೇ ಗುರಿ ಇರಲಿ. ಅದನ್ನು ಸಾಧಿಸಲು ಆರೋಗ್ಯವಂತರಾಗಿರುವುದು ತುಂಬಾ ಮುಖ್ಯ. ನಿತ್ಯ ವ್ಯಾಯಾಮ ಮಾಡಿ. ಅದಕ್ಕೊಂದಿಷ್ಟು ಟೈಮ್ ಇರಲಿ. ಇದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡೂ ಚೈತನ್ಯದಾಯಕವಾಗುತ್ತವೆ. ಇದು ನಿಮ್ಮ ಗುರಿ ಮುಟ್ಟಲು ಸಹಾಯಕ.
ಸಜ್ಜಾಗಿರಿ
ಯಾವುದೇ ಕೆಲಸಕ್ಕೂ ಆತ್ಮವಿಶ್ವಾಸ ಮುಖ್ಯ. ಅದಿದ್ದರೆ ನೀವು ಅಂದುಕೊಂಡ ಕೆಲಸ ಅರ್ಧ ಮುಗಿಸದಂತೆ ಸರಿ. ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಿ. ಸುಂದರವಾಗಿ ಕಾಣಲು ಪ್ರಯತ್ನಿಸಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವ್ಯವಸ್ಥಿತವಾಗಿದ್ದರೆ ಜಗತ್ತು ಕೂಡಾ ನಿಮ್ಮನ್ನು ಗುರ್ತಿಸುತ್ತದೆ ಎಂಬುದು ನೆನಪಿರಲಿ.
ಸರಿಯಾದದ್ದನ್ನೇ ತಿನ್ನಿ
ನಿಮ್ಮ ಗುರಿ ತಲುಪಲು ನೀವು ತಿನ್ನುವ ಆಹಾರನೂ ಮುಖ್ಯ. ನಿದ್ದೆ ಬರಿಸುವ ಆಹಾರ ತಿಂದರೆ ನಿಮ್ಮ ಕೆಲಸಗಳು ಹೇಗಾಗಬೇಕು? ನಿಮ್ಮ ಊಟ ನಿಮ್ಮನ್ನು ಆಲಸಿಯನ್ನಾಗಿ ಮಾಡುತ್ತಿದ್ದರೆ ಕೂಡಲೇ ಅಂಥ ಆಹಾರ ಬಿಟ್ಟು ಬಿಡಿ. ತುಸು ತಿನ್ನಿ, ಹೆಚ್ಚಾಗಿ ಯೋಚಿಸಿ. ಚೆನ್ನಾಗಿ ಕೆಲಸ ಮಾಡಿ. ಆಗ ಪ್ರಯತ್ನಗಳಿಗೆ ಫಲ ಸಿಕ್ಕೇ ಸಿಗುತ್ತದೆ.
= ತಿಪ್ಪಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


