ಟಮ್ಮಿ ಪ್ರಾಬ್ಲಂ ಕಮ್ಮಿ ಮಾಡ್ಕೊಳ್ಳಿ

ದಿನಕಳೆದಂತೆ ಹೊಟ್ಟೆ ಉಬ್ಬುತ್ತಿದೆ. ಎಲ್ಲಾದರೂ ಹೋಗಬೇಕೆಂದರೆ ನಾಚಿಕೆ. ಎಷ್ಟೇ ಚೆನ್ನಾಗಿರುವ ವಸ್ತ್ರ ಧರಿಸಿದರೂ 'ಡೊಳ್ಳು ಹೊಟ್ಟೆ'ಯ ಅಡ್ಡಿ. ಹೊಟ್ಟೆ ಕರಗಿಸಿಕೊಳ್ಳದೆ ಬೇರೆ ದಾರಿಯೇ ಇಲ್ಲ. ಹೌದು. ಇಂತಹ ಸಮಸ್ಯೆಯಲ್ಲಿ ಸಿಲುಕಿರುವವರು ಎಷ್ಟೋ ಮಂದಿ. ಟಮ್ಮಿಯನ್ನು ಕರಗಿಸಿ ಸ್ಟೈಲ್ ಆಗಿ ಕಾಣಬೇಕೆಂದರೆ ಪರಿಹಾರ 'ಯೋಗ'. ಯೋಗದ ಕೆಲವೊಂದು ಆಸನಗಳು ನಿಮ್ಮ ಆಸೆಯನ್ನು ಖಂಡಿತಾ ಈಡೇರಿಸುತ್ತವೆ. ಅಂತಹ ಆಸನಗಳ ಬಗ್ಗೆ ಒಂದಿಷ್ಟು.
ಕಪಾಲ ಭಾಟಿ
ಇದು ಹೊಟ್ಟೆಯನ್ನು ತಗ್ಗಿಸುವ ಉಸಿರಾಟದ ತಂತ್ರ. ಕಪಾಲ ಭಾಟಿ ಮಾಡಿದಂತೆ ಚಯಾಪಚಯ ದರ, ಜೀರ್ಣಾಂಗ ವ್ಯವಸ್ಥೆಯ ಕಾರ್ಯಕ್ಷಮತೆ ಸುಧಾರಿಸುತ್ತದೆ. ಈ ಮೂಲಕ ನಿಮ್ಮ ತೂಕವನ್ನು ಪರಿಣಾಮಕಾರಿಯಾಗಿ ಇಳಿಸಬಹುದು. ಪ್ರತಿ ದಿನ ಕಪಾಲ ಭಾಟಿಯೊಂದಿಗೆ ಯೋಗಾಭ್ಯಾಸ ಆರಂಭಿಸಿ.
ಹಸ್ತಪಾದಾಸನ
ಹೆಸರೇ ಹೇಳುವಂತೆ ನಿಂತಲ್ಲಿಂದಲೇ ಬಗ್ಗಿ ಕೈಗಳನ್ನು ಕಾಲಿನ ಉಗುರುಗಳಿಗೆ ತಾಗಿಸುವುದು. ಈ ಆಸನ ಮಾಡುತ್ತಿದ್ದಂತೆ ಬೆನ್ನಿನ ಎಲ್ಲ ಸ್ನಾಯುಗಳು ಎಳೆಯಲ್ಪಡುತ್ತವೆ. ಇದು ಕಿಬ್ಬೊಟ್ಟೆಯ ಅಂಗಗಳಿಗೆ ಹೆಚ್ಚಿನ ಕೆಲಸ ನೀಡಿ ಡೊಳ್ಳುಹೊಟ್ಟೆಯನ್ನು ಕಡಿಮೆ ಮಾಡುತ್ತವೆ. ನರವ್ಯವಸ್ಥೆಗೆ ಸರಿಯಾಗಿ ರಕ್ತದ ಪೂರೈಕೆ ಆಗುವಂತೆ ನೋಡಿಕೊಳ್ಳುತ್ತದೆ.
ಶವಾಸನ
ನಿಮ್ಮ ನಿತ್ಯದ ಯೋಗಾಭ್ಯಾಸವನ್ನು ಶವಾಸನದ ಮೂಲಕ ಪೂರ್ಣಗೊಳಿಸಿ. ಅಂದರೆ, ಶವದಂತೆ ನಿರಾಳವಾಗಿ ಅ ಂಗಾತನೆ ಮಲಗಿಕೊಳ್ಳಿ. ಇದು ನಿಮ್ಮ ಒತ್ತಡ ನಿವಾರಿಸಿ, ಅಂಗಾಂಶ, ಕೋಶಗಳನ್ನು ಸರಿಪಡಿಸಿ ಇಡೀ ಶರೀರಕ್ಕೆ ನವತಾರುಣ್ಯವನ್ನು ಒದಗಿಸುತ್ತದೆ.
ವೀರಭದ್ರಾಸನ
ವೀರಭದ್ರಾಸನ ಅಭ್ಯಾಸ ಮಾಡುವುದರಿಂದ ಭುಜ, ಎದೆ, ಉದರ, ತೊಡೆಸಂದು ಹಿಗ್ಗಿ, ಬಲಿಷ್ಠಗೊಳ್ಳುತ್ತವೆ. ಇದು ನಿಮ್ಮ ದೇಹವನ್ನು ಸುಸ್ಥಿತಿಗೆ ತರುತ್ತದೆ. ಈ ಆಸನವು ಒತ್ತಡ ನಿವಾರಿಸುವ ಅತ್ಯುತ್ತಮ ಭಂಗಿ.
ಸೇತುಬಂಧ ಸರ್ವಾಂಗಾಸನ
ಈ ಆಸನವೇ ಸೇತುವೆಯಂತಿರುವ ಕಾರಣ ಇದನ್ನು ಸೇತುಬಂಧ ಸರ್ವಾಂಗಾಸನ ಎನ್ನುತ್ತಾರೆ. ಇದು ಕಿಬ್ಬೊಟ್ಟೆಯ ಅಂಗಗಳನ್ನು ಉತ್ತೇಜಿಸಿ ಜೀರ್ಣಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತದೆ.
ಪಶ್ಚಿಮೋತ್ತನಾಸನ
ಕುಳಿತುಕೊಂಡಲ್ಲೇ ಮುಂದಕ್ಕೆ ಬಾಗುವ ಈ ಆಸನ ನಿಮ್ಮ ಕೆಳಬೆನ್ನು, ತೊಡೆಭಾಗ, ಸೊಂಟವನ್ನು ಹಿಗ್ಗಿಸುತ್ತದೆ. ಅಷ್ಟೇ ಅಲ್ಲದೆ, ಕಿಬ್ಬೊಟ್ಟೆ ಮತ್ತು ಶ್ರೋಣಿಕುಹರವನ್ನು ಸಮಸ್ಥಿತಿಗೆ ತರುತ್ತದೆ.
-ಹಲೀಮತ್ ಸಅದಿಯಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


