

ನ್ಯೂಯಾರ್ಕ್: ಸಿಹಿ ಪಾನಿಯಾಗಳು ಮಕ್ಕಳ ನೆನಪಿನ ಶಕ್ತಿಗೆ ಕಹಿಯಾಗಲಿದೆ!
ಹೌದು, ಸಿಹಿ ಪಾನಿಯಾಗಳು ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆಯಾಗಲು ಕಾರಣ.
ಇತ್ತೀಚೆಗೆ ಹೆಚ್ಚು ಸಿಹಿಯನ್ನು ಒಳಗೊಂಡಿರುವ ಪಾನಿಯಾಗಳನ್ನು ಮಕ್ಕಳು ಸೇವಿಸುತ್ತಿದ್ದಾರೆ. ಆದರೆ, ಇದರಿಂದ ಅವರ ಜ್ಞಾಪಕದ ಶಕ್ತಿ ಕುಗ್ಗುತ್ತದೆ ಎಂದು ನೂತನ ವರದಿ ಹೇಳುತ್ತದೆ.
ಹೀಗೆಂದು ಹೇಳುತ್ತಿರುವುದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೋಫೆಸರ್ ಸ್ಕಾಟ್ ಕನೋಸ್ಕಿ. ತಾವು ನಡೆಸಿದ ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ. ಮಕ್ಕಳು ಹೆಚ್ಚು ಸಿಹಿ ಪಾನಿಯಾಗಳನ್ನು ಸೇವಿಸುವುದರಿಂದ ಅವರ ಮೆದುಳಿನ ನರಗಳಿಗೆ ತೊಂದರೆಯಾಗುತ್ತದೆ. ಇದರಿಂದ ಜ್ಞಾಪಕ ಶಕ್ತಿ ಕುಗ್ಗುತ್ತದೆ ಎಂದು ಹೇಳಿದ್ದಾರೆ.
ಸಿಹಿ ಪಾನಿಯಾಗಳು ಎಷ್ಟರ ಮಟ್ಟಿಗೆ ಹಾನಿಕರ ಎಂಬುದರ ಬಗ್ಗೆ ಸಂಶೋಧನೆ ನಡೆಸಿದಾಗ ಈ ಮಾಹಿತಿ ಹೊರಬಿದ್ದಿದೆ. ಇಲಿಯ ಮೇಲೆ ಪ್ರಯೋಗ ಮಾಡಲಾಗಿದ್ದು, ಮೆದುಳಿನಲ್ಲಿರುವ ನರದ ಮೇಲೆ ಸಿಹಿ ಅಂಶ ಹೆಚ್ಚು ಒತ್ತಡಹೇರಲಿದ್ದು, ಇದರಿಂದ ಜ್ಞಾಪಕ ಶಕ್ತಿ ಕುಗ್ಗುತ್ತಾ ಹೋಗುತ್ತದೆ ಎಂದು ಅವರು ತಿಳಿಸಿದ್ದಾರೆ.