ಆರೋಗ್ಯ-ಜೀವನಶೈಲಿ

ಪಿರಿ ಪಿರಿ ಪಿರಿಯಡ್ಸ್

ಪಿರಿ ಪಿರಿ ಪಿರಿಯಡ್ಸ್
Published On :

ಋತುಮತಿಯಾದಾಗಿನಿಂದ ಋತುಬಂಧದ ತನಕವೂ ಹೆಣ್ಣಿನಲ್ಲಿ ಬದಲಾವಣೆಗಳು ಸ್ವಾಭಾವಿಕ. ಅವನ್ನೆಲ್ಲವನ್ನೂ ಸರಿದೂಗಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೆಣ್ಣಿನ ಜೀವನದ ಅತಿ ಮುಖ್ಯ ಸವಾಲು. ಬದಲಾದ ಜೀವನ ಶೈಲಿಯೂ ಹೆಣ್ಣಿನ ಮುಟ್ಟಿನ ದೋಷಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಋತುಚಕ್ರದಲ್ಲಿ ಏರುಪೇರಾಗೋದು ಸಾಮಾನ್ಯ.
ಋತುಚಕ್ರ ಆರಂಭವಾದಾಗ ಒಂದೆರಡು, ಮೂರು ತಿಂಗಳುಗಳಿಗೊಮ್ಮೆ ಮುಟ್ಟಾದರೂ ತೊಂದರೆಯಿಲ್ಲ. ಸಾಮಾನ್ಯವಾಗಿ ವರ್ಷದಲ್ಲಿ 10-13 ಸಲ ಮುಟ್ಟು ಕಾಣಿಸಿಕೊಳ್ಳುವುದು ಆರೋಗ್ಯವಂತ ಸ್ತ್ರೀಯ ಲಕ್ಷಣ. ಇದರಲ್ಲಿ ತೀವ್ರ ಬದಲಾವಣೆಯಾದಲ್ಲಿ ಹೆಚ್ಚು ಅಲರ್ಟ್ ಆಗಬೇಕು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ ಇಲ್ಲಸಲ್ಲದ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಋತುಚಕ್ರ ಆರಂಭವಾದಾಗ, ರಜೋ ನಿವೃತ್ತಿ ವೇಳೆ ಹಾಗೂ ಎದೆ ಹಾಲುಣಿಸುವಾಗ ಸಾಮಾನ್ಯವಾಗಿ ಋತುಚಕ್ರದಲ್ಲಿ ಏರುಪೇರಾಗುತ್ತದೆ. ಆಗ 2-3 ತಿಂಗಳಿಗೊಮ್ಮೆ ಅಥವಾ ಐದಾರು ತಿಂಗಳಿಗೊಮ್ಮೆ ಮುಟ್ಟು ಕಾಣಿಸಿಕೊಂಡರೂ ಸಮಸ್ಯೆ ಎಂದು ಪರಿಗಣಿಸುವ ಅಗತ್ಯವಿಲ್ಲ. ಮಧ್ಯದಲ್ಲಿ ಇಂಥ ಬದಲಾವಣೆಗಳಾದಲ್ಲಿ ವೈದ್ಯರ ಸೂಕ್ತ ಚಿಕಿತ್ಸೆ ಪಡೆದು ಕೊಳ್ಳಲೇಬೇಕು.

ಮುಟ್ಟು ಮುಂದೇಕೆ?

  • ಸ್ತ್ರೀ ಹಾರ್ಮೊನ್‌ಗಳಲ್ಲಿ ಅಸಮತೋಲನ (ಸಾಮಾನ್ಯವಾಗಿ ಪಿಸಿಒಡಿ ಸಮಸ್ಯೆ)
  • ಅತಿ ಬೊಜ್ಜು
  • ಒಮ್ಮಿದೊಮ್ಮಲೆ ಅತಿ ತೂಕ ಕಡಿಮೆ ಮಾಡಿಕೊಳ್ಳುವುದು
  • ಗರ್ಭಕೋಶ, ಅಂಡಾಶಯದಲ್ಲಿ  ಏನಾದರೂ ಸಮಸ್ಯೆ ಇದ್ದಲ್ಲಿ
  • ಮಾನಸಿಕ ಒತ್ತಡ
  • ರಕ್ತ ಹೀನತೆ ಸಮಸ್ಯೆ
  • ಜೀವನ ಶೈಲಿಯ  ಬದಲಾವಣೆ
  • ಮುಟ್ಟಿನ ತೊದಂರೆಗೆ ಸೂಕ್ತ ಕಾರಣವನ್ನು ರಕ್ತ ಪರೀಕ್ಷೆ ಹಾಗೂ ಗರ್ಭಾಶಯದ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದರಿಂದ ಪತ್ತೆ ಹಚ್ಚಬಹುದು.

ಆಯುರ್ವೇದ ಚಿಕಿತ್ಸೆ

ಡಾ. ವೀಣಾ ಅರ್ಹಂತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.