ಮಾರಿಷಸ್‌ನಲ್ಲೂ ಮೆಟ್ರೊಪೊಲಿಸ್ ಹೆಲ್ತ್ಕೇರ್ ಸೇವೆ ಲಭ್ಯ

ಬೆಂಗಳೂರು: ಮೆಟ್ರೊಪೊಲಿಸ್ ಹೆಲ್ತ್‌ಕೇರ್ ಲಿಮಿಟೆಡ್, ಬ್ರಾಮ್‌ಸೆರ್ ಕಾರ್ಪೋರೇಷನೊಂದಿಗೆ ಜಂಟಿಯಾಗಿ ಮಾರಿಷಸ್‌ನಲ್ಲಿ ಜಾಗತಿಕ ಮಟ್ಟದ ಮತ್ತು ಅತ್ಯುನ್ನತ ಗುಣಮಟ್ಟದ ರೋಗನಿದಾನ ಸೇವೆಗಳನ್ನು ಪರಿಚಯಿಸುತ್ತಿದೆ.
ಆರಂಭದಲ್ಲಿ ಮೆಟ್ರೊಪೊಲಿಸ್ ಒಂದು ಕೇಂದ್ರ ಪ್ರಯೋಗಾಲಯವನ್ನು ಹೊಂದಲಿದ್ದು ಮಾರಿಷಸ್, ಮಡಗಾಸ್ಕರ್, ಸೆಷಲ್ಸ್ ಮತ್ತು ರಿಯುನಿಯನ್ಗಳಲ್ಲಿ ಸಂಗ್ರಹ ಕೇಂದ್ರಗಳನ್ನು ಹೊಂದಲಿದೆ. ಕೇಂದ್ರ ಪ್ರಯೋಗಾಲಯ ಅಪೊಲೋ ಬ್ರಾಮ್ವೆಲ್ ಹಾಸ್ಪಿಟಲ್ನ ಆವರಣದಲ್ಲಿ ಕಾರ್ಯನಿರ್ವಹಿಸಲಿದ್ದು ರೋಗನಿದಾನ ಸೇವೆಗಳು ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಮಾರಿಷಸ್ನಲ್ಲಿನ ನಾಗರಿಕರಿಗೆ ಲಭ್ಯವಾಗಲಿದೆ.
ಮುಂಬರುವ ವರ್ಷದಲ್ಲಿ ಈ ಸ್ಥಳಗಳಲ್ಲಿ 25 ಸಂಗ್ರಹ ಕೇಂದ್ರಗಳನ್ನು ಆರಂಭಿಸುವ ಯೋಜನೆ ಇದ್ದು ಈ ಪ್ರದೇಶದಲ್ಲಿ ಅತ್ಯುನ್ನತ ಗುಣಮಟ್ಟದ ರೋಗನಿದಾನ ಸೌಲಭ್ಯಗಳನ್ನು ಪೂರೈಸುವತ್ತ ಗಮನ ಕೇಂದ್ರೀಕರಿಸಲಾಗಿದೆ. ಮೆಟ್ರೊಪೊಲಿಸ್ ಹೆಲ್ತ್ಕೇರ್ ಈ ಕೂಡಲೇ ಪೋಟರ್್ಲೂಯಿಸ್, ಕ್ಯೂರ್ಪೈಪ್, ಮೊಕಾ, ಕ್ವಾಟ್ರೆಬೋರ್ನಸ್ ಮತ್ತು ರೋಸಿಲ್ಗಳಲ್ಲಿ 5 ಸಂಗ್ರಹ ಕೇಂದ್ರಗಳನ್ನು ಆರಂಭಿಸಲಿದೆ. ಮುಂದಿನ ಮೂರು ತಿಂಗಳಲ್ಲಿ ಸೆಂಟ್ರಲ್ ಫ್ಲ್ಯಾಕ್ ಮತ್ತು ಬ್ಲ್ಯಾಕ್ ರಿವರ್ ಪ್ರದೇಶದಲ್ಲಿ ಇನ್ನೂ ಎರಡು ಪ್ರಯೋಗಾಲಯಗಳು ಬರಲಿವೆ. ಈ ಜಂಟಿ ಯೋಜನೆಯಲ್ಲಿ 50 ದಶಲಕ್ಷ ಮಾರಿಷಿಯನ್ ರೂ.ಗಳ ಹೂಡಿಕೆ ಮಾಡುವ ಯೋಜನೆ ಇದೆ ಎಂದು ವ್ಯವಸ್ಥಾಪಕ ನಿದರ್ೇಶಕಿ ಮತ್ತು ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಅಮೀರಾ ಷಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


