ಸಂಗೀತಕ್ಕೆ ಸಂಭೋಗ ಸುಖ ನೀಡುವ ಶಕ್ತಿಯಿದೆ: ಅಧ್ಯಯನ

ಸಂಗೀತದ ಶಕ್ತಿಗೆ ಈಗ ಹೊಸದೊಂದು ಆಯಾಮ ಸೇರ್ಪಡೆಯಾಗಿದೆ. ಸಂಗೀತದ ಸ್ವರಗಳು ಕೆಲವರಿಗೆ ಸಂಭೋಗ ಪರಾಕಾಷ್ಟೆ ನೀಡಬಲ್ಲಂತಹ ಆನಂದವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನ್ಯೂಯಾರ್ಕ್: ಸಂಗೀತದ ಶಕ್ತಿಗೆ ಈಗ ಹೊಸದೊಂದು ಆಯಾಮ ಸೇರ್ಪಡೆಯಾಗಿದೆ. ಸಂಗೀತದ ಸ್ವರಗಳು ಕೆಲವರಿಗೆ ಸಂಭೋಗ ಪರಾಕಾಷ್ಟೆ ನೀಡಬಲ್ಲಂತಹ ಆನಂದವನ್ನು ನೀಡುವ ಶಕ್ತಿ ಹೊಂದಿವೆ ಎನ್ನುತ್ತದೆ ಅಧ್ಯಯನವೊಂದು.

ಇದು ನೀಡಬಲ್ಲ ಆನಂದ ಕೆಲವೊಮ್ಮೆ ದೇಹವನ್ನು ಅಲುಗಾಡಿಸಬಲ್ಲುದು, ಬೆವರು ಬರಿಸಬಲ್ಲುದು ಮತ್ತು ಉದ್ರೇಕವನ್ನೂ ತರಬಲ್ಲುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಈ ಅಧ್ಯಯನದ ಸಂಶೋಧಕರು ವೆಸ್ಲಿಯನ್ ವಿಶ್ವವಿದ್ಯಾಲಯದ ಮನೋಶಾಸ್ತ್ರದ ಪ್ರೊಫೆಸರ್ ಗಳಾದ ಸೈಕ್ ಲೂಯಿ ಮತ್ತು ಕ್ಯೂಕ್ ಹ್ಯಾರಿಸನ್. ಇದು ಫ್ರಾಂಟಿಯರ್ಸ್ ಆಫ್ ಸೈಕಾಲಜಿ ಜರ್ನಲ್ ನಲ್ಲಿ ಪ್ರಕಟವಾಗಿದೆ.

ಸಾಮಾನ್ಯವಾಗಿ ಪಶ್ಚಿಮ ದೇಶಗಳ ಶಾಸ್ತ್ರೀಯ ಸಂಗೀತಕ್ಕೆ ಈ ಮನೋವೈಜ್ಞಾನಿಕ ಪ್ರತಿಕ್ರಿಯೆಗಳು ಉಂಟಾಗುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಆದರೆ ನಾವು ಸಂಶೋಧನೆ ನಡೆಸಿರುವುದು ಶಾಸ್ತ್ರೀಯ ಸಂಗೀತದ ಮೇಲೆ ಆಗಿರುವುದರಿಂದ ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿರುವ ಲೂಯಿ ಅವರು, ಪಾಪ್, ಜನಪದ ಮತ್ತು ವಿಶ್ವದ ಇತರ ಸಂಗೀತಕ್ಕೂ ಈ ರೀತಿಯ ಪ್ರತಿಕ್ರಿಯೆ ಸಾಧ್ಯವಿದೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com