

ಕಿತ್ತಳೆ ಹಣ್ಣು. ನೋಡಿದ್ರೆ ಬಾಯಲ್ಲಿ ನೀರು ಬರುತ್ತೆ. ಇಂಥ ಸಿಹಿ ಕಿತ್ತಳೆ ಹಣ್ಣಿನಿಂದ ದೇಹಕ್ಕೆ ಹಲವು ಉಪಯೋಗಗಳಿವೆ. ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಹೆಚ್ಚು ಇರುತ್ತೆ. ಇದನ್ನು ಪ್ರತಿದಿನ ಮಕ್ಕಳು ಹಾಗೂ ವಯಸ್ಸಾದವರು ಸೇವಿಸಿದ್ರೆ ಹೆಚ್ಚು ಉಪಯುಕ್ತ.
ಪ್ರತಿದಿನ ತಾಜಾ ಕಿತ್ತಳೆ ಹಣ್ಣಿನ ರಸವನ್ನು ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ. ಆ್ಯಸಿಡಿಟಿ, ಕ್ಯಾನ್ಸರ್, ಹಾಗೂ ಹೃದಯ ಸಂಬಂಧಿ ರೋಗಗಳನ್ನು ದೂರವಿಡಬಹುದಾಗಿದೆ.
ಪ್ರತಿದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ವಯಸ್ಸಾದವರಲ್ಲಿ ರಕ್ತದ ಒತ್ತಡ ಹತೋಟಿಯಲ್ಲಿಡುತ್ತದೆ. ವಿಟಮಿನ್ ಸಿ ಹೆಚ್ಚು ಇರುವ ಕಿತ್ತಳೆ ಹಣ್ಣಿನ ರಸದಲ್ಲಿ ರೋಗದ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಹೀಗಾಗಿ ಆರೇಂಜ್ ಜ್ಯೂಸ್ ನೀಡಿದ್ರೆ ಹೆಚ್ಚು ಪ್ರಯೋಜನಕಾರಿ.
ಇನ್ನು ಕಿತ್ತಳೆ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕಿಡ್ನಿ ಸ್ಟೋನ್ ಉಂಟಾಗುವುದಿಲ್ಲ. ಕಿತ್ತಳೆ ರಸ ಅಲ್ಸರ್ ರೋಗಕ್ಕೆ ರಾಮಭಾಣ.
ಆರೇಂಜ್ ಜ್ಯೂಸ್ ತೂಕ ಕಡಿಮೆ ಮಾಡಲು ಸಹಾಯಮಾಡುತ್ತೆ. ಜೊತೆಗೆ ಹಾರ್ಟ್ ಅಟ್ಯಾಕ್ ಆಗುವುದನ್ನು ತಡೆಗಟ್ಟುತ್ತದೆ. ಅನಿಮೀಯಾದಿಂದ ಬಳಲುತ್ತಿರುವವರಿಗೆ ಕಿತ್ತಳೆ ರಸ ದಿವ್ಯೌಷಧ. ಇನ್ನು ಪ್ರತದಿನ ಕಿತ್ತಳೆ ರಸವನ್ನು ಸೇವಿಸುವುದರಿಂದ ದೇಹದಲ್ಲಿನ ಟಾಕ್ಸಿನ್ ಕಡಿಮೆಯಾಗಿ ಚರ್ಮ ಸುಂದರವಾಗಿರುತ್ತೆ. ಕಿತ್ತಳೆ ಹಣ್ಣಿನಲ್ಲಿ ದೇಹಕ್ಕೆ ಅಗತ್ಯವಿರುವ ಸಿ ವಿಟಮಿನ್ ಹೆಚ್ಚಾಗಿ ಇದೆ.
ಇನ್ನು ವಯಸ್ಸಾದವರಿಗೆ ಅಂದರೆ 60 ವರ್ಷ ದಾಟಿದವರಿಗೆ ಪ್ರತಿದಿನ 500 ಎಂ.ಎಲ್ ಕಿತ್ತಳೆ ಹಣ್ಣಿನ ಜ್ಯೂಸ್ ನೀಡಿದ್ರೆ ಅವರ ಬುದ್ದಿ ಶಕ್ತಿ ಚುರುಕುಗೊಳ್ಳುತ್ತದೆ ಹಾಗೂ ಅವರು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಎಂದು ಲಂಡನ್ ವಿಶ್ವ ವಿದ್ಯಾನಿಲಯವೊಂದು ತನ್ನ ಸಂಶೋಧನೆಯಿಂದ ಸಾಬೀತು ಪಡಿಸಿದೆ.
ಒಟ್ನಲ್ಲಿ ಕಿತ್ತಳೆ ಹಣ್ಣು ತಿನ್ನಲು ಸಿಹಿಯಾಗಿರುವುದರ ಜೊತೆಗೆ ಹಲವು ಪೌಷ್ಠಿಕಾಂಶಗಳ ಜೊತೆಗೆ ಔಷಧೀಯ ಗುಣಗಳನ್ನು ಕೂಡ ಹೊಂದಿದೆ.