ಭಾಷೆಗಳನ್ನು ಕಲಿಯುವ ಮೂಲಕ ಆಯಾ ಭಾಷೆಯ ಸಂಸ್ಕೃತಿಯ ಅರಿವು: ಪಿ.ಕೆ. ಶೆಟ್ಟಿ
ಮುಂಬಯಿ: ಭಾಷೆ ಭಾಷೆಗಳಿಂದ ಸಂಬಂಧಗಳು ಗಟ್ಟಿಯಾಗಬೇಕಾದರೆ ನಾವು ಹೆಚ್ಚು ಭಾಷೆಗಳನ್ನು ಕಲಿಯಬೇಕು. ಸಂಬಂಧಗಳನ್ನು ಬೆಸೆಯುವ ಶಕ್ತಿ ಭಾಷೆಗಿರುವುದರಿಂದ ಸಂವಾದವು ಸಾಧ್ಯವಾಗುವುದು. ಕರ್ನಾಟಕ ಸಂಘ, ಮುಂಬಯಿ ಇಂತಹ ಕೆಲಸಗಳನ್ನು ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದು ಕೆ.ಪಿ.ಎಂ.ಜಿ. ಇದರ ಜಂಟಿ ನಿರ್ದೇಶಕರಾಗಿರುವ ಪ್ರಮೋದ್ ಕಲ್ಯಾಣ್ಶೆಟ್ಟಿ ಶ್ಲಾಘಿಸಿದರು.
ಅವರು ಕರ್ನಾಟಕ ಸಂಘ, ಮುಂಬಯಿ ಜುಲೈ 27ರಂದು ಸಂಘದ ಸಮರಸ ಭವನದಲ್ಲಿ ಜರುಗಿಸಿದ ಕನ್ನಡ-ಮರಾಠಿ ಭಾಷಾ ಕಲಿಕಾ ತರಗತಿಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಮಾಣಪತ್ರ ವಿತರಣೆಯ ಕಾರ್ಯಕ್ರಮವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಾ ಭಾಷೆಗಳನ್ನು ಕಲಿಯುವ ಮೂಲಕ ಆಯಾ ಭಾಷೆಯ ಸಂಸ್ಕೃತಿ ಮತ್ತು ಭಾಷೆಯ ಮಹತ್ವಗಳು ನಮಗೆ ತಿಳಿದು ಬರುತ್ತವೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ್ ಜಿ. ಬುರ್ಡೆಯವರು ಮಾತನಾಡುತ್ತಾ ಕರ್ನಾಟಕ ಸಂಘವು ಕನ್ನಡ-ಮರಾಠಿ ಸಂಬಂಧವನ್ನು ಬೆಳೆಸುವ ಉದ್ದೇಶದಿಂದ ಅನೇಕ ಚಟುವಟಿಕೆಗಳನ್ನು ವರ್ಷವಿಡೀ ಹಮ್ಮಿಕೊಂಡು ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾ ಬಂದಿದೆ ಎಂದು ಹೇಳಿದರು.
2012-2013ನೇ ಸಾಲಿನ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಮುಖ್ಯ ಅತಿಥಿ ಕಲ್ಯಾಣಶೆಟ್ಟಿ ವಿತರಿಸಿದರು. ವೃಂದಾ ತಲಗೇರಿ ಮತ್ತು ಬಳಗದವರು ಪ್ರಾರ್ಥಿಸಿದರು. ಕನ್ನಡ ಕಲಿಯುವ ವಿದ್ಯಾರ್ಥಿನಿಯರಾದ ಕೃಪಾ ಪೂಜಾರಿ ಸ್ವಾಗತಿಸಿದರು. ದಿವ್ಯಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಹೊಸತಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಕ್ಷಕಿಯರಾದ ಲಕ್ಷ್ಮೀ ಸುಧೀಂದ್ರ ಮತ್ತು ಬಿ.ಜಿ. ಕುಸುಮ ಹಿತನುಡಿಗಳನ್ನಾಡಿದರು. ಸಂಘದ ಉಪಾಧ್ಯಕ್ಷ ಡಾ. ಭರತ್ಕುಮಾರ್ ಪೊಲಿಪು, ಸಂಘದ ಗೌ. ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಉಪಸ್ಥಿತರಿದ್ದರು. ಕನ್ನಡ ಕಲಿಯುವ ವಿದ್ಯಾರ್ಥಿನಿಯರಾದ ಪ್ರೀತಿ ದೇವಾಡಿಗಾ ಧನ್ಯವಾದಗೈದರು. ಡಾ. ವಸುಂಧರಾ ತಾರ್ಕರ್ ನಿರೂಪಿಸಿದರು.
ಆಕಾಶವಾಣಿಯಲ್ಲಿ ಕವಿ ಕಣವಿ ಜನ್ಮದಿನ ನಿಮಿತ್ತ ಕಾರ್ಯಕ್ರಮ
ಕನ್ನಡದ ಹೆಸರಾಂತ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಅವರ 85ನೇ ಜನ್ಮದಿನ ನಿಮಿತ್ತ ಇತ್ತೀಚೆಗೆ ಮುಂಬಯಿ ಆಕಾಶವಾಣಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕನ್ನಡದ ಖ್ಯಾತ ವಿಮರ್ಶಕ ಡಾ. ಜಿ.ಎಂ. ಹೆಗಡೆ ಅವರು ಕಣವಿ ಜೀವನ ಸಾಹಿತ್ಯ ಸಾಧನೆಯ ಬಗ್ಗೆ ಉಪನ್ಯಾಸ ನೀಡಿದರು. ಮುಂಬಯಿ ಆಕಾಶವಾಣಿ ಕನ್ನಡ ವಿಭಾಗದ ಸಂಚಾಲಕಿ ಸುಶೀಲಾ ದೇವಾಡಿಗ ಅವರು ಅತಿಥಿಗಳನ್ನು ಸ್ವಾಗತಿಸಿ ಕನ್ನಡ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಕವಿ ಡಾ. ಮರಿಯಪ್ಪ ನಾಟೇಕರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

