ಹೊರನಾಡು ಕನ್ನಡಿಗ

ದಿಲ್ಲಿಯಲ್ಲಿ ವೀರಪ್ಪ ಅವರಿಗೆ ಶ್ರದ್ಧಾಂಜಲಿ

Published On :

ನವದೆಹಲಿ: ದಿಲ್ಲಿಯಲ್ಲಿ ಜ.5ರಂದು ನಿಧನರಾದ ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲ, ದಿಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ, ದಿಲ್ಲಿ ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಎಂ. ವೀರಪ್ಪ ಅವರಿಗೆ ದಿಲ್ಲಿಯಲ್ಲಿ 'ದೆಹಲಿ ಕನ್ನಡಿಗ' ಪತ್ರಿಕೆ ಆಶ್ರಯದಲ್ಲಿ ಜ.13ರಂದು ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ವಕೀಲರು, ಕನ್ನಡ ಕಾರ್ಯಕರ್ತರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
'ದೆಹಲಿ ಕನ್ನಡಿಗ' ಪತ್ರಿಕೆ ಸಂಪಾದಕ ಬಾ. ಸಾಮಗ ಮಾತನಾಡುತ್ತಾ, ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕ ಸರ್ಕಾರದ ವಕೀಲರಾಗಿದ್ದ ವೀರಪ್ಪ ಅವರು ಕರ್ನಾಟಕದ ಹಿತರಕ್ಷಣೆಗಾಗಿ ವಾದಿಸಿ ಕರ್ನಾಟಕಕ್ಕೆ ಗೌರವ ತರುತ್ತಿದ್ದರು. ದಿಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ, ದಿಲ್ಲಿ ಕರ್ನಾಟಕ ಸಂಘದ
ಉಪಾಧ್ಯಕ್ಷರಾಗಿ ದಿಲ್ಲಿಯಲ್ಲಿ ಕನ್ನಡದ ಬೆಳವಣಿಗಾಗಿ ಸದಾ ಶ್ರಮಿಸುತ್ತಿದ್ದರು. ದಿಲ್ಲಿ ಕರ್ನಾಟಕ ಸಂಘರ್ಷ ಸಮಿತಿಯು ಕರ್ನಾಟಕದ ಹಿತರಕ್ಷಣೆಗಾಗಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹಗಳ ನೇತೃತ್ವ ವಹಿಸಿ ಕನ್ನಡನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ ಕಂಕಣಬದ್ಧರಾಗಿ ಕಾರ್ಯಕ್ರಮ ಯೋಜಿಸುತ್ತಿದ್ದ ವೀರಪ್ಪ ಅವರನ್ನು 'ದೆಹಲಿ ಕನ್ನಡಿಗ' ಪತ್ರಿಕೆ ದಿಲ್ಲಿಯಲ್ಲಿ ಏರ್ಪಡಿಸಿದ್ದ 23ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು. ವೀರಪ್ಪ ಅವರ ಸ್ಮಾರಕವಾಗಿ ದಿಲ್ಲಿಯಲ್ಲಿ ಕಾರ್ಯಕ್ರಮ ರೂಪಿಸಲಾಗುವುದೆಂದರು.
ಕಲಾವಿದೆ ಶ್ರೀಮತಿ ರಾಜೇಶ್ವರಿಪಿ. ಭಟ್ ಮಾತನಾಡುತ್ತಾ  ಕರ್ನಾಟಕ ಸಾಹಿತ್ಯ ಅಕಾಡೆಮಿ ದಿಲ್ಲಿಯಲ್ಲಿ ಸಾಹಿತ್ಯೋತ್ಸವ ಏರ್ಪಡಿಸಿದ್ದಾಗ ಅದರ ಯಶಸ್ಸಿಗೆ ಅವಿರತ ಶ್ರಮಿಸಿದ್ದ ವೀರಪ್ಪ ಅವರು ದಿಲ್ಲಿಯಲ್ಲಿ ನಡೆಯುತ್ತಿದ್ದ ಎಲ್ಲಾ ಕನ್ನಡ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದರು. ವೀರಪ್ಪ ಅವರನ್ನು ಕನ್ನಡಿಗರು ಸದಾ ಸ್ಮರಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಕನ್ನಡಕ್ಕೆ ಕುರಿತಂತೆ ವೀರಪ್ಪ ಅವರ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.