ಸಿದ್ದು ರಚನೆ ಮಾಡಿದ ಎಸಿಬಿಗೆ ಅವರ ವಿರುದ್ಧವೇ ದೂರಿನ ಸರಮಾಲೆ!

ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಕಡೆಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅವರ ವಿರುದ್ಧವೇ ದೂರಿನ ಸರಮಾಲೆಗಳು ದಾಖಲಾಗುತ್ತಿವೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಸಂಸ್ಥೆಯನ್ನು ಕಡೆಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಚಿಸಿದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅವರ ವಿರುದ್ಧವೇ ದೂರಿನ ಸರಮಾಲೆಗಳು ದಾಖಲಾಗುತ್ತಿವೆ.

ಈ ಹಿಂದೆ ಎಸಿಬಿ ರಚನೆಯಾದ ಗಳಿಗೆಯಲ್ಲಿಯೇ ಸಿದ್ದರಾಮಯ್ಯ ಹ್ಯೂಬ್ಲೋಟ್ ವಾಚ್ ಪ್ರಕರಣ ಎಸಿಬಿ ಅಂಗಳ ಸೇರಿತ್ತು. ಇದೀಗ ಅವರ ಪುತ್ರನ ಸರದಿಯಾಗಿದ್ದು, ಲ್ಯಾಬ್ ಗುತ್ತಿಗೆ ಪಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವರು ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಆರ್‌ಟಿಐ ಕಾರ್ಯಕರ್ತ ಎಸ್. ಭಾಸ್ಕರನ್ ಎಂಬುವರು ಎಸಿಬಿಗೆ ದೂರು ನೀಡಿದ್ದು, ಮುಖ್ಯಮಂತ್ರಿಯ ಪುತ್ರ ಡಾ. ಯತೀಂದ್ರ ಪಾಲುದಾರಿಕೆ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಪ್ರೈ. ಲಿ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ಗುತ್ತಿಗೆ ಪಡೆಯುವಲ್ಲಿ ಅಕ್ರಮ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ದೂರನ್ನು ಸ್ವೀಕರಿಸಿವ ಎಸಿಬಿ ಸಂಸ್ಥೆ ಭಾಸ್ಕರನ್ ಅವರಿಗೆ ದೂರು ಸಲ್ಲಿಕೆಯಾಗಿರುವ ಕುರಿತು ಅಕ್ನಾಲೆಡ್ಜ್ ಮಾತ್ರ ನೀಡಿದೆ ಎಂದು ತಿಳಿದುಬಂದಿದೆ. ಹಾಲಿ ದೂರು ಸೇರಿದಂತೆ ಎಸಿಬಿ ರಚನೆಯಾಗಿ ಒಂದು ತಿಂಗಳಾಗುವ ಮೊದಲೇ ಸಿಎಂ ಹಾಗೂ ಅವರ ಕುಟುಂಬದ ವಿರುದ್ಧ ಒಟ್ಟು ಮೂರು ದೂರುಗಳು ಸಲ್ಲಿಕೆಯಾದಂತಾಗಿದೆ.

ಎಸಿಬಿ ರಚನೆಯಾದ ಗಳಿಗೆಯಲ್ಲಿಯೇ ಸಿದ್ದರಾಮಯ್ಯ ಹ್ಯೂಬ್ಲೋಟ್ ವಾಚ್ ಪ್ರಕರಣ ಎಸಿಬಿ ಅಂಗಳ ಸೇರಿತ್ತು. ಏಪ್ರಿಲ್ 5 ರಂದು ಸಿಎಂ ಪುತ್ರನ ಆಪ್ತನ ಕಂಪನಿಗೆ 2.19 ಎಕರೆ ಭೂಮಿಯನ್ನು ಬಿಡಿಎ ಬದಲಿ ಜಮೀನು ನೀಡಿದ ಆರೋಪ ಕೇಳಿ ಬಂದಿತ್ತು. ಇದರಲ್ಲಿ ಸಿಎಂ ಪುತ್ರ ಡಾ.ಯತೀಂದ್ರ ಶಾಮೀಲಾಗಿದ್ದು, ಸಿಎಂ ಸ್ವಜನಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈಗ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಪ್ರಕರಣವೂ ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿದೆ.

ಸಿಎ ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ ಟೆಂಡರ್ ಗುತ್ತಿಗೆಯನ್ನು ಪುತ್ರನ ಪಾಲುದಾರ ಕಂಪನಿಗೆ ಕೊಡಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com