ಮಾನ್ವಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಮೂವರು ದುರ್ಮರಣ

ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮಹಿಳೆ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಹಾಗೂ 20 ಹೆಚ್ಚು ಮಂದಿ
ಪಲ್ಟಿಯಾದ ಟ್ರ್ಯಾಕ್ಟರ್
ಪಲ್ಟಿಯಾದ ಟ್ರ್ಯಾಕ್ಟರ್
ರಾಯಚೂರು: ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮಹಿಳೆ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಹಾಗೂ 20 ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹೆಗ್ಗಡದಿನ್ನಿಯಲ್ಲಿ ನಡೆದಿದೆ,
ಮೃತಪಟ್ಟವರನ್ನು ಸಾಬಮ್ಮ(55), ರಮೇಶ್ (15) ಹಾಗೂ ಶಿವರಾಜು (16) ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಮಾನ್ವಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ಟ್ರ್ಯಾಕ್ಟರ್‌ ಮತ್ತೊಂದು ಟ್ರ್ಯಾಕ್ಟರನ್ನು ಹಿಂದಿಕ್ಕಲು ಹೋಗಿ ಈ ದುರಂತ ಸಂಭವಿಸಿದೆ.
ಈ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com