

ತುಮಕೂರು: ಈ ಬಾರಿ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಜಾನಪದ ಸಂಪ್ರದಾಯದಂತೆ ತುಮಕೂರಿನ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ನೇರಳೆಕೆರೆ ಗ್ರಾಮಸ್ಥರು ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಮೂರು ಕತ್ತೆಗಳಿಗೆ ವಿವಾಹ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಿವಾಹ ಮಾಡಲಾಯಿತು. ಸ್ಥಳೀಯರು ವಾದ್ಯ ನುಡಿಸಿದರು. ನಂತರ ಮದುವೆಗೆ ಆಗಮಿಸಿದವರಿಗೆಲ್ಲಾ ಪ್ರಸಾದ ಹಂಚಲಾಯಿತು. ರೈತರು ಮಳೆಯನ್ನು ನಂಬಿ, ಭತ್ತ, ಅಡಿಕೆ, ರಾಗಿ ಮತ್ತು ಜೋಳ ಬಿತ್ತನೆ ಮಾಡಿದ್ದು, ಮಳೆಯಿಲ್ಲದೇ ಬೆಳೆಗಳು ಒಣಗುತ್ತಿದ್ದು, ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ.