

ಮೈಸೂರು: ಕಾವೇರಿಯಲ್ಲಿರುವ ವಾಸ್ತವಿಕತೆಯನ್ನು ವಿವರಿಸುತ್ತಿದ್ದೇವೆಯೇ ವಿನಃ, ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಕಾವೇದಿ ನದಿ ಹಂಚಿಕೆ ವಿವಾದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೆಲಸ ಕಷ್ಟಕರ ಸೂತ್ರಗಳಿಂದಾಗಿ ನಾವು ಈಗಾಗಲೇ ತಮಿಳುನಾಡಿಗೆ ನೀರನ್ನು ಬಿಟ್ಟಿದ್ದೇವೆ. ಆದರೆ, ಸಾಮಾನ್ಯ ವರ್ಷದಂತೆಯೇ ತಮಿಳುನಾಡು ತನ್ನ ಪಾಲಿನ ನೀರನ್ನು ಕೇಳುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಆಹಾಕರ ಎದುರಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಪಾಲಿನ ನೀರು ನೀಡುವುದು ಕಷ್ಟಕರವಾಗುತ್ತದೆ. ತಮಿಳುನಾಡಿಗೆ ನೀರು ಕೊಡುವುದಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ, ಕಾವೇರಿಯಲ್ಲಿರುವ ವಾಸ್ತವಿಕತೆಯನ್ನು ವಿವರಿಸುವ ಪ್ರಯತ್ನವನ್ನು ಕರ್ನಾಟಕ ಮಾಡುತ್ತಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಮತ್ತೂರು ಜಲಾಶಯದಲ್ಲಿ ಈಗಾಗಲೇ 34 ಟಿಎಂಸಿ ನೀರಿದೆ. ಆದರೆ, ಕರ್ನಾಟಕದ ಕಾವೇರಿಯಲ್ಲಿ 50 ಟಿಎಂಸಿ ನೀರು ಕೂಡ ಇಲ್ಲ, ಕರ್ನಾಟಕಕ್ಕೆ 40 ಟಿಎಂಸಿ ನೀರು ಕುಡಿಯುವುದಕ್ಕೆ ಅಗತ್ಯವಿದೆ. ಹೀಗಾಗಿ ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಮಟ್ಟದ ವಾಸ್ತವಿಕತೆಯ ಕುರಿತು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.