

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಯಂತೆ ಆಡಳಿತಾ ರೂಢ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ.
ಒಟ್ಟು 30 ಜಿಲ್ಲೆಗಳ ಪೈಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ 14 ಜಿಲ್ಲೆಗಳಲ್ಲಿ ಜಯದ ಹಾದಿಯಲ್ಲಿದ್ದು, ಕಾಂಗ್ರೆಸ್ ತೀವ್ರ ಪೈಪೋಟಿ ನೀಡುತ್ತಿರುವ ಬಿಜೆಪಿ ಪಕ್ಷ 07 ಜಿಲ್ಲೆಗಳಲ್ಲಿ ಗೆಲುವು ಸಾಧಿಸಿದೆ ಇನ್ನು ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಜೆಡಿಎಸ್ 2 ಜಿಲ್ಲೆಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದಂತೆ 6 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಪಂಚಾಯಿತಿ ಚುನಾವಣೆಯ 30 ಜಿಲ್ಲೆಗಳ 1083 ಸ್ಥಾನಗಳ ಪೈಕಿ 615 ಸ್ಥಾನಗಳ ಫಲಿತಾಂಶ ಲಭ್ಯವಾಗಿದ್ದು, ಈ ಪೈಕಿ ಕಾಂಗ್ರೆಸ್ 284 ಸ್ಥಾನಗಳನ್ನು ಗಳಿಸಿದ್ದರೆ, ಬಿಜೆಪಿ 256 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಜೆಡಿಎಸ್ 54 ಸ್ಥಾನ ಮತ್ತು ಇತರರು 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಜಿಲ್ಲಾ ಪಂಚಾಯತ್ ಚುನಾವಣೆ ಜಿಲ್ಲಾವಾರು ಫಲಿತಾಂಶ ಈ ಕೆಳಕಂಡಂತಿವೆ.
| ಜಿಲ್ಲೆಗಳು | ಒಟ್ಟು ಕ್ಷೇತ್ರ | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಇತರೆ |
| ಬಾಗಲಕೋಟೆ | 36 | 17 | 18 | 00 | 01 |
| ಬೆಂಗಳೂರು ನಗರ | 50 | 21 | 23 | 05 | 01 |
| ಬೆಂಗಳೂರು ಗ್ರಾಮಾಂತರ | 21 | 14 | 02 | 05 | 00 |
| ಬೆಳಗಾವಿ | 90 | 45 | 37 | 02 | 06 |
| ಬಳ್ಳಾರಿ | 40 | 17 | 21 | 00 | 02 |
| ಬೀದರ್ | 34 | 19 | 11 | 03 | 01 |
| ವಿಜಯಾಪುರ | 42 | 18 | 20 | 03 | 01 |
| ಚಾಮರಾಜನಗರ | 23 | 14 | 09 | 00 | 00 |
| ಚಿಕ್ಕಬಳ್ಳಾಪುರ | 28 | 21 | 01 | 05 | 01 |
| ಚಿಕ್ಕಮಗಳೂರು | 33 | 12 | 18 | 02 | 00 |
| ಚಿತ್ರದುರ್ಗಾ | 37 | 23 | 10 | 02 | 02 |
| ದಕ್ಷಿಣ ಕನ್ನಡ | 36 | 15 | 21 | 00 | 00 |
| ದಾವಣಗೆರೆ | 36 | 08 | 22 | 02 | 04 |
| ಧಾರವಾಡ | 22 | 10 | 11 | 00 | 01 |
| ಗದಗ | 19 | 11 | 08 | 00 | 00 |
| ಕಲಬುರಗಿ | 47 | 21 | 24 | 01 | 01 |
| ಹಾಸನ | 40 | 16 | 01 | 23 | 01 |
| ಹಾವೇರಿ | 34 | 22 | 12 | 00 | 00 |
| ಕೊಡಗು | 29 | 11 | 17 | 01 | 00 |
| ಕೋಲಾರ | 30 | 15 | 05 | 10 | 00 |
| ಕೊಪ್ಪಳ | 29 | 17 | 11 | 00 | 01 |
| ಮಂಡ್ಯ | 41 | 14 | 00 | 25 | 01 |
| ಮೈಸೂರು | 49 | 22 | 08 | 18 | 01 |
| ರಾಯಚೂರು | 38 | 12 | 17 | 09 | 00 |
| ರಾಮನಗರ | 22 | 16 | 00 | 06 | 00 |
| ಶಿವಮೊಗ್ಗ | 31 | 07 | 15 | 07 | 01 |
| ತುಮಕೂರು | 57 | 23 | 19 | 14 | 01 |
| ಉಡುಪಿ | 26 | 06 | 20 | 00 | 00 |
| ಉತ್ತರ ಕನ್ನಡ | 39 | 23 | 11 | 02 | 03 |
| ಯಾದಗಿರಿ | 24 | 12 | 11 | 01 | 00 |