

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ ವ್ಯವಸ್ಥೆಯ ದುಸ್ಥಿತಿಯನ್ನು ಬಿಚ್ಚಿಡಲು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ತಮ್ಮ ಜೀವವನ್ನೇ ಬಲಿಕೊಡಬೇಕಾಯಿತು.
ತಮ್ಮ ಗುರಿ ಸಾಧಿಸಲು ಪೊಲೀಸರನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ರಾಜಕಾರಣಿಗಳಿಗೆ ಒಂಚಿತ್ತೂ ಹಿಂಜರಿಕೆಯಿಲ್ಲ. ದಕ್ಷ ಅಧಿಕಾರಿಗಳಿಗೆ ಇಲ್ಲಿ ತಮ್ಮ ಪ್ರಾಮಾಣಿಕತೆಯೇ ಮುಳುವಾಗುತ್ತಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಅಲಿಖಿತ ನಿಯಮಗಳು ಆಳುತ್ತಿವೆ.
ಡಿವೈಎಸ್ಪಿ ಎಂ.ಕೆ ಗಣಪತಿ ಹಾಗೂ ಕಲ್ಲಪ್ಪ ಹಂಡಿಭಾಗ್ ಅವರು ವಿವಿಧ ಪರಿಸ್ಥಿತಿಗಳಲ್ಲಿ ವ್ಯವಸ್ಥೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಮತ್ತೊಬ್ಬ ಡಿಎವೈಎಸ್ಪಿ ಅನುಪಮಾ ಶೆಣೈ, ತಮ್ಮ ಹುದ್ದೆಯ ಬಗ್ಗೆ ಅಪರಿಮಿತ ಭರವಸೆ ಇಟ್ಟುಕೊಂಡವರು, ವ್ಯವಸ್ಥೆಯಲ್ಲಿ ಏನೂ ಬದಲಾವಣೆ ತರಲಾಗದು ಎಂದು ಹತಾಶೆಗೊಂಡು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದರು.
ಕಲ್ಲಪ್ಪ ಹಂಡಿಭಾಗ್ ಕೂಡ ತಮ್ಮ ಹುದ್ದೆಯ ಬಗ್ಗೆ ಅತಿ ಹೆಚ್ಚು ಭರವಸೆಯಿಟ್ಟುಕೊಂಡಿದ್ದವರು. ಯುವ ಹಾಗೂ ಉಜ್ವಲ ಭವಿಷ್ಯ ಹೊಂದಬಹುದಾದ ಸಾಧ್ಯತೆ ಇತ್ತು. ಅವರು ಬದುಕಬೇಕಿತ್ತು. ತನ್ನ ಬಡ ಕುಟುಂಬಕ್ಕೆ ಮೂಲ ಆಧಾರ ಸ್ತಂಭ ಇವರೇ ಆಗಿದ್ದರು. ಬೆದರಿಕೆ ಹಾಗೂ ಹಣಕ್ಕಾಗಿ ಬೇಡಿಕೆ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಆಟಕ್ಕೆ ಮುಗ್ಧ ಕಲ್ಲಪ್ಪ ಹಂಡಿಭಾಗ್ ಜುಲೈ 5 ರಂದು ಚಿಕ್ಕಮಗಳೂರಿನಲ್ಲಿ ಸಾವಿಗೆ ಶರಣಾದರು.
ಇದಾದ ಎರಡು ದಿನಗಳಲ್ಲೇ ಮತ್ತೊಬ್ಬ ಡಿವೈಎಸ್ಪಿ ಎಂ ಕೆ ಗಣಪತಿ ಮಡಿಕೇರಿಯಲ್ಲಿ ತಮ್ಮ ಸಾವಿಗೆ ಇವರೇ ಕಾರಣವೆಂದು ಟಿವಿ ಚಾನೆಲ್ ಗೆ ಸಂದರ್ಶನ ನೀಡಿ ಆತ್ಮಹತ್ಯೆಗೆ ಶರಣಾದರು. ಅದರ ಪರಿಣಾಮ ಕೆ.ಜೆ ಜಾರ್ಜ್ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳೂಬೇಕಾಯಿತು.
ಕೋರ್ಟ್ ಆದೇಶದಂತೆ ಮತ್ತಿಬ್ಬರು ಐಪಿಎಸ್ ಅಧಿಕಾರಿಗಳು ತಮ್ಮ ಹುದ್ದೆ ಕಳೆದು ಕೊಂಡು ಬೇರೆಡೆಗೆ ಸ್ಥಳಾಂತರಗೊಂಡರು.
ಹಂಡಿಭಾಗ್ ಆತ್ಮಹತ್ಯೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳ ಎದುರಿಸುತ್ತಿದ್ದ ಕೆಲ ಅಧಿಕಾರಿಗಳಿಗೆ ನಾಂದಿಯಾಯಿತು. ಹಂಡಿಭಾಗ್ ಸಾವಿನ ನಂತರ ಹಲವು ಪೊಲೀಸರು ಆತ್ನಹತ್ಯೆ ಯತ್ನ ಪ್ರಯತ್ನ ನಡೆಸಿದರು.
ಹಿರಿಯ ಪೊಲೀಸ್ ಅಧಿಕಾರಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ವಿಜಯನಗರ ಪೊಲೀಸ್ ಠಾಣೆ ಸಬ್ ಇನ್ ಸ್ಪೆಕ್ಟರ್ ರೂಪಾ ಆತ್ನಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ಸೇರಿ ಗುಣಮುಖರಾದರು. ಉತ್ತರ ಕರ್ನಾಟಕದಲ್ಲಿ ಹೆಡ್ ಕಾನ್ ಸ್ಟೇಬಲ್ ತಮ್ಮ ಮೇಲಧಿಕಾರಿಗಳು ಹಿಂಸೆ ನೀಡುತ್ತಿದ್ದಾರೆ ಎಂದು ಆತ್ಮಹತ್ಯೆಗೆ ಶರಣಾದರು. ಆದರೆ ಆತ ಕೌಟುಂಬಿಕ ಕಲಹದಿಂದ ಆತ್ನಹತ್ಯೆಗೆ ಶರಣಾದ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು. ಕಳೆದ ನಾಲ್ಕು ತಿಂಗಳಿಂದ ವೇತನ ಸಿಕ್ಕಿಲ್ಲವೆಂದು ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು.
ಕಲಬುರಗಿಯಲ್ಲಿ ಮತ್ತೊಬ್ಬ ಪೊಲೀಸ ತಮ್ಮ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.
ಕರ್ನಾಟಕದಲ್ಲಿರುವ ಸರಿ ಸುಮಾರು ಪೊಲೀಸರು ದುಃಖ, ಕೋಪ, ಹತಾಶೆ, ಅಸಹಾಯಕತೆಯಿಂದ ನರಳುತ್ತಿದ್ದಾರೆ. ಇಲಾಖೆಯಲ್ಲಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಇದ್ದಾರೆ. ಅಂದರೇ ಸುಮಾರು 30 ಸಾವಿರ ಪೊಲೀಸರು ಕೊರತೆಯಿದ್ದಾರೆ. ಇದರಿಂದಾಗಿ ಪೊಲೀಸರಿಗೆ ಹೆಚ್ಚಿನ ಪ್ರಮಾಣದ ಕೆಲಸದ ಹೊರೆ ಬೀಳುತ್ತಿದೆ.
ಪೊಲೀಸರಿಗೆ ಅವರವರ ಹುದ್ದೆಗೆ ತಕ್ಕಂತೆ ವೇತನ ನೀಡಲಾಗುತ್ತಿದೆ. ವರ್ಗಾವಣೆ, ತಮಗೆ ಬೇಕಾದ ಸ್ಥಳಕ್ಕೆ ಪೊಸ್ಟಿಂಗ್, ಗಾಗಿ ಹೆಚ್ಚಿನ ಪ್ರಮಾಣದ ಹಣ ನೀಡಬೇಕಾಗುತ್ತದೆ. ಜೊತೆಗೆ ರಜೆ ಪಡೆಯಲು ಲಂಚ ನೀಡಬೇಕು ಎಂದು ಪೊಲೀಸ್ ಇಲಾಖೆಯಲ್ಲಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೇತನ ಹೆಚ್ಚಳ, ರಜೆ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೊಲೀಸರು ಜೂನ್ ತಿಂಗಳಲ್ಲಿ ಪ್ರತಿಭಟನೆ ನಡೆಸಿದರು, ಆದರೆ ಸರ್ಕಾರ ಇದನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು. ಹಣವಿದ್ದರೇ ಮಾತ್ರ ವರ್ಗಾವಣೆ, ಕಾರ್ಯಕ್ಷಮತೆ ಆಧರಿಸಿ ಯಾವೊಬ್ಬ ಪೊಲೀಸರಿಗೂ ಬಡ್ತಿ ನೀಡಲಾಗುತ್ತಿಲ್ಲ, ಹೀಗಾಗಿ ಬೇರೆ ದಾರಿ ಕಾಣದೇ ಭ್ರಷ್ಟ ವ್ಯವಸ್ಥೆ ಭ್ರಷ್ಟ ಅಧಿಕಾರಿಗಳನ್ನು ಸೃಷ್ಟಿಸುತ್ತಿದೆ. ಎಲ್ಲೊ ಕೆಲವು ಅಧಿಕಾರಿಗಳು ಮಾತ್ರ ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಡಿದೇಳುತ್ತಿದ್ದಾರೆ.
ಒಟ್ಟಾರೆ ಹೇಳಬೇಕೆಂದರೇ ಭ್ರಷ್ಟ ವ್ಯವಸ್ಥೆಯೆಂಬ ರಾಕ್ಷಸ ಅಧಿಕಾರ ಮತ್ತು ಹಣ ದಾಹವನ್ನು ತಾನೇ ಸೃಷ್ಟಿಸಿ ಪೋಷಿಸುತ್ತಿದೆ. ಇದು ಭಾರತದ ಎಲ್ಲಾ ರಾಜ್ಯಗಳಲ್ಲಿರುವ ಪೊಲೀಸ್ ಇಲಾಖೆಯ ವಾಸ್ತವ ಸ್ಥಿತಿ. ಆದರೆ ಗಣಪತಿ ಮತ್ತು ಹಂಡಿಭಾಗ್ ಆಸಕ್ತಿದಾಯಕ ತಿರುವು ನೀಡಿದರು. ಆದರೆ ಅವವ ಸಾವು ಪೊಲೀಸ್ ಇಲಾಖೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಾಗಲಿಲ್ಲ.