ವಿ.ಶಶಿಧರ್ ಮನೆ ಮೇಲೆ ಸಿಸಿಬಿ ದಾಳಿ: ಹಲವು ದಾಖಲೆಗಳು ವಶ

ಪೊಲೀಸ್ ಸಿಬ್ಬಂದಿಗಳು ಸಾಮೂಹಿಕ ಪ್ರತಿಭಟನೆ ನಡೆಸಲು ಪ್ರಚೋದಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಅವರ ನಿವಾಸದ...
ದ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್
ದ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್
Updated on

ಬೆಂಗಳೂರು: ಪೊಲೀಸ್ ಸಿಬ್ಬಂದಿಗಳು ಸಾಮೂಹಿಕ ಪ್ರತಿಭಟನೆ ನಡೆಸಲು ಪ್ರಚೋದಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಅವರ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ಶನಿವಾರ ರಾತ್ರಿ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸಂಜೆ 3 ಗಂಟೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಪರಿಶೀಲನಾ ಕಾರ್ಯವನ್ನು ರಾತ್ರಿಯವರೆಗೂ ಮುಂದುವರೆಸಿದ್ದರು, ದಾಳಿ ವೇಳೆ ಶಶಿಧರ್ ಅವರ ಪತ್ನಿ ಪೂರ್ಣಿಮಾ ಮತ್ತು ಅವರ ಮಗ ಜಾಗೃತ್ ಮನೆಯಲ್ಲಿರದ್ದರು ಎಂದು ತಿಳಿದುಬಂದಿದೆ.

ಶಶಿಧರ್ ಅವರನ್ನು ಬಂಧನಕ್ಕೊಳಪಡಿಸಿದ್ದಾಗ ನಮ್ಮ ಬಳಿ ಸರ್ಚ್ ವಾರೆಂಟ್ ಇತ್ತು. ಆದರೆ, ಮನೆಯನ್ನು ತಪಾಸಣೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದೇ ವಾರೆಂಟ್ ನ್ನು ಬಳಸಿಕೊಂಡು ಉಳಿದ ನಿಯಮ ಹಾಗೂ ವಿಧಾನಗಳನ್ನು ಮುಂದುವರೆಸಲಾಗಿತ್ತು ಎಂದು ಹೆಚ್ಚುವ ಪೊಲೀಸ್ ಆಯುಕ್ತ (ಅಪರಾಧ) ಶರತ್ ಚಂದ್ರ ಅವರು ಹೇಳಿದ್ದಾರೆ.

ದೇಶದ್ರೋಹ ಹಾಗೂ ಅಪರಾಧ ಪ್ರಕರಗಳಲ್ಲಿ ಶಶಿಧರ್ ಅವರು ಬಂಧನಕ್ಕೊಳಗಾಗಿದ್ದಾರೆ. ಹೀಗಾಗಿ ಮಹತ್ವ ದಾಖಲೆಗಳಿಗಾಗಿ ತಪಾಸಣೆ ನಡೆಸುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಶಶಿಧರ್ ಅವರು ಪರಮೇಶ್ವರ್ ವಿರುದ್ಧ ಕಾನೂನು ಸಮರಕ್ಕಿಳಿದಿದ್ದರು. ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಲಾಭದಾಯಕ ಹುದ್ದೆಯನ್ನು ಹೊಂದಿದ್ದು, ಅವರನ್ನು ಸಚಿವ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದರಂತೆ ಶಶಿಧರ್ ಅವರನ್ನು ಬಂಧನಕ್ಕೊಳಪಡಿಸಲು ತೀರ್ಮಾನಿಸಿದ್ದ ರಾಜ್ಯ ಪೊಲೀಸ್ ಇಲಾಖೆಯು ಬುಧವಾರ ಶಶಿಧರ್ ಅವರನ್ನು ಅವರ ಮನೆಯಲ್ಲಿಯೇ ಬಂಧನಕ್ಕೊಳಪಡಿಸಿತ್ತು. ಅಲ್ಲದೆ, ಮನೆಯಲ್ಲಿದ್ದ ಮೊಬೈಲ್, ಫೋನ್, ಲ್ಯಾಪ್ ಟಾಪ್, ಪರಮೇಶ್ವರ್ ಅವರ ವಿರುದ್ಧವಿದ್ದ ಪ್ರಕರಣದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು ಎಂದು ಹೇಳಲಾಗುತ್ತಿತ್ತು,

ಮೂಲಗಳ ಪ್ರಕಾರ ಶಶಿಧರ್ ಅವರು ಬಂಧನಕ್ಕೊಳಗಾಗುವುದಕ್ಕೂ ಹಿಂದಿನ ದಿನ ಶಶಿಧರ್ ಅವರು ಪರಮೇಶ್ವರ್ ಅವರ ವಿರುದ್ಧ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪರಮೇಶ್ವರ್ ಅವರಿಗೆ ನೋಟಿಸ್ ವೊಂದನ್ನು ಜಾರಿ ಮಾಡಿತ್ತು. ಶಶಿಧರ್ ಅವರನ್ನು ಬಂಧಿಸಲು ಇದೂ ಕೂಡ ಕಾರಣವಾಗಿತ್ತು ಎಂದು ತಿಳಿದುಬಂದಿದೆ.

ಇದರಂತೆ ಶಶಿಧರ್ ಶಾಸಕ ಎಸ್.ಆರ್. ವಿಶ್ವನಾಥ್ ಅವರ ವಿರುದ್ಧವೂ ಪ್ರಕರಣವೊಂದನ್ನು ದಾಖಲಿಸಿದ್ದರು. ಎಸ್.ಆರ್. ವಿಶ್ವನಾಥ್ ಅವರು ಅಕ್ರಮ ಆಸ್ತಿ ಹೊಂದಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ದಾಳಿ ನಡೆಸಿದ ವೇಳೆ ವಶಕ್ಕೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com