

ಬೆಂಗಳೂರು: ಮಂಗಳೂರಿಗೆ ಹೊರಟಿದ್ದ 9 ಡಬ್ಲ್ಯು 2839 ಜೆಟ್ ಏರ್ ವೇಸ್ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ತುರ್ತಾಗಿ ವಿಮಾನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ 10.20ರ ಹೊತ್ತಿಗೆ ವಿಮಾನವನ್ನು ಆದ್ಯತೆ ಮೇರೆಗೆ ತುರ್ತುಭೂಸ್ಪರ್ಶ ಮಾಡಲಾಯಿತು. ಅದೃಷ್ಟವಷಾತ್ ಭಾರೀ ಅನಾಹುತವೊಂದು ತಪ್ಪಿ ಹೋಗಿದ್ದು, ವಿಮಾನದಲ್ಲಿ 65 ಪ್ರಯಾಣಿಕರು ಮತ್ತು 4 ಮಂದಿ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದಾರೆ.
ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಮೂರು ವಿಮಾನಗಳು ಮತ್ತು ಹೊರಡಬೇಕಿದ್ದ 5 ವಿಮಾನಗಳನ್ನು ತಡೆಹಿಡಿಯಲಾಯಿತು. ನಂತರ 10.51ರ ಹೊತ್ತಿಗೆ ಕಾರ್ಯಾಚರಣೆ ಆರಂಭವಾಯಿತು.
ಈ ಸಂಬಂಧ ಜೆಟ್ ಏರ್‌ಲೈನ್ಸ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡು ಹೊಗೆ ಕಾಣಿಸಿಕೊಂಡಿದೆ ಎಂದು ಹೇಳಿದೆ.