

ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯಗೊಂಡ ಯುವತಿಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಆಕೆಯನ್ನು ಅಪಹರಣ ಮಾಡಿದ ಘಟನೆಯೊಂದು ನಗರದಲ್ಲಿ ನಡೆದಿದೆ.
ದ್ವಿತೀಯ ಪಿಯುಸಿ ಮುಗಿಸಿರುವ ಗಾನ (18) (ಹೆಸರು ಬದಲಿಸಲಾಗಿದೆ) ಎಂಬ ಯುವತಿ ಫೇಸ್ ಬುಕ್ ನಲ್ಲಿ ಪರಿಚಯಗೊಂಡಿದ್ದ ರಾಹುಲ್(21) ಎಂಬ ವ್ಯಕ್ತಿಯನ್ನು ಗಾಢವಾಗಿ ನಂಬಿದ್ದಾಳೆ. ಇದರಂತೆ ಊಟಿಗೆ ಪ್ರವಾಸ ಹೋಗುವುದಾಗಿ ಯುವತಿಗೆ ರಾಹುಲ್ ತಿಳಿಸಿದ್ದಾನೆ.
ರಾಹುಲ್ ಮಾತನ್ನು ನಂಬಿದ್ದ ಗಾನ ಆತನೊಂದಿಗೆ ಪ್ರವಾಸಕ್ಕೆಂದು ಹೋಗಿದ್ದಾಳೆ. ಆದರೆ, ಯುವತಿಯನ್ನು ಕರೆದೊಯ್ದ ರಾಹುಲ್ ರೂಮೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾನೆ. ಅಲ್ಲದೆ, ಅಕೆಯ ಬಳಿಯಿದ್ದ ಹಣವನ್ನು ಕಿತ್ತುಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ.
ಜೂ.14 ರಂದು ರಾಹುಲ್ ಯುವತಿಯನ್ನು ಊಟಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆಸಿಕೊಂಡಿದ್ದಾನೆ, ಮಗಳು ಪ್ರವಾಸಕ್ಕೆ ಹೋಗಿ ದಿನಗಳು ಕಳೆದರೂ ಆಕೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೋಷಕರು ದೂರು ದಾಖಲಿಸಿದ್ದರು. ಇದರಂತೆ ತನಿಖೆ ಆರಂಭಿಸಿದಾಗ ಆಕೆಯ ಫೇಸ್ ಬುಕ್ ಪೋಸ್ಟ್ ಗಳನ್ನು ಗಮನಿಸಲಾಯಿತು. ರಾಹುಲ್ ಮೇಲೆ ಹಲವು ಅನುಮಾನಗಳು ಬರಲು ಆರಂಭಿಸಿತು. ರಾಹುಲ್ ಮೊಬೈಲ್ ನೆಟ್ ವರ್ಕ್ ನ್ನು ಹಿಂಬಾಲಿಸುವ ಮೂಲಕ ಆತನನ್ನು ರಾಮನಗರದಲ್ಲಿ ಬಂಧಿಸಲಾಯಿತು ಪೊಲೀಸರು ಹೇಳಿದ್ದಾರೆ.