ಅರಮನೆಯಾಯ್ತು ಈಗ ಕೆಆರ್ ಎಸ್ ಡ್ಯಾಮ್ ನಲ್ಲಿ ಜೋಡಿ ಹಕ್ಕಿಗಳ ಫೋಟೋ ಶೂಟ್!

ಮೈಸೂರು ಅರಮನೆಯಲ್ಲಿ ಕಾನೂನು ಉಲ್ಲಂಘಿಸಿ ಫೋಟೋಶೂಟ್ ನಡೆಸಿದ ಆಘಾತಕಾರಿ ಬೆಳವಣಿಗೆ ಬೆನ್ನಲ್ಲೇ ಇದೀಗ ಮತ್ತೆ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಕೆಆರ್ ಎಸ್ ಡ್ಯಾಂ ಮೇಲೆ ಚಿತ್ರೀಕರಣ (ಸಂಗ್ರಹ ಚಿತ್ರ)
ಕೆಆರ್ ಎಸ್ ಡ್ಯಾಂ ಮೇಲೆ ಚಿತ್ರೀಕರಣ (ಸಂಗ್ರಹ ಚಿತ್ರ)
Updated on: 

ಮಂಡ್ಯ: ಮೈಸೂರು ಅರಮನೆಯಲ್ಲಿ ಕಾನೂನು ಉಲ್ಲಂಘಿಸಿ ಫೋಟೋಶೂಟ್ ನಡೆಸಿದ ಆಘಾತಕಾರಿ ಬೆಳವಣಿಗೆ ಬೆನ್ನಲ್ಲೇ ಇದೀಗ ಮತ್ತೆ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

24 ಗಂಟೆಯೂ ಭದ್ರತಾ ಸಿಬ್ಬಂದಿಗಳ ರಕ್ಷಣಾ ಕೋಟೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆಯ ಮೇಲೆ ಜೋಡಿಯೊಂದರ ಪ್ರೀವೆಡ್ಡಿಂಗ್ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಫೋಟೋಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಮೈಸೂರು ಅರಮನೆಯಲ್ಲಿ ನಡೆದ ಫೊಟೋ ಶೂಟ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರವಾಸಿಗರಿಗೆ ಕೆಆರ್‌ಎಸ್ ಅಣೆಕಟ್ಟೆ ಪ್ರವೇಶ ನಿಷೇಧಿಸಲಾಗಿದೆಯಾದರೂ, ಇದಕ್ಕೂ ಮೊದಲೇ ಕೆಆರ್ ಎಸ್ ಅಣೆಕಟ್ಟೆ ಮೇಲೆ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಕಳೆದ ಜುಲೈ 23ರಂದು ಕೆಆರ್ ಎಸ್ ಅಣೆಕಟ್ಟೆ ಮೇಲೆ ಈ ಚಿತ್ರೀಕರಣ ನಡೆಸಲಾಗಿದ್ದು, ಬೆಂಗಳೂರು ಮೂಲದ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ವಿಡಿಯೋ ಚಿತ್ರೀಕರಣ ಮಾಡಿದೆ ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆ, ಬೃಂದಾವನ, ಮೈಸೂರು ಅರಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಡ್ರೋನ್ ಕ್ಯಾಮರಾ ಬಳಸಿ ಚಿತ್ರೀಕರಣ ಮಾಡಲಾಗಿದೆ. ನವ ವಧು-ವರ ಸ್ಥಿರ ಕ್ಯಾಮರಾ, ಡ್ರೋನ್ ಕ್ಯಾಮರಾ ಬಳಸಿರುವುದು, ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧವಿದ್ದರೂ ಫಾರ್ಚುನರ್ ಹಾಗೂ ಸಫಾರಿ ವಾಹನಗಳ ಜತೆಗೆ 15-20 ಜನ ಚಿತ್ರೀಕರಣದಲ್ಲಿ ತೊಡಗಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಿರ್ವಹಣಾ ವಿಭಾಗದ ವತಿಯಿಂದ ದೂರು
ಕೆಆರ್‌ಎಸ್ ಅಣೆಕಟ್ಟೆ ಮೇಲೆ ಅನುಮತಿ ಪಡೆಯದೆ ಅತಿಕ್ರಮವಾಗಿ ಪ್ರವೇಶಿಸಿ ಚಿತ್ರೀಕರಣ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಅಣೆಕಟ್ಟೆಯ ನಿರ್ವಹಣಾ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವರದರಾಜು ಕೆ.ಆರ್.ಎಸ್. ಠಾಣೆಗೆ ದೂರು ಸಲ್ಲಿಸಿದ್ದಾರೆ.

ಶೂಟಿಂಗ್ ಯಾವಾಗ ಮಾಡಲಾಗಿದೆ, ಯಾರು ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲ. ಅಣೆಕಟ್ಟೆ ಹಿಂದೆ ಪೊಲೀಸರ ಭದ್ರತೆಯಲ್ಲಿತ್ತು. ಈಗ ಕರ್ನಾಟಕ ಇಂಡಸ್ಟ್ರಿಯಲ ಫೋರ್ಸ್ ಭದ್ರತೆಯಲ್ಲಿದೆ. ಹಿಂದೆ ಅನುಮತಿ ಪಡೆದು ಸಿನಿಮಾ ಚಿತ್ರೀಕರಣ ನಡೆದಿದೆ. ಈ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆಯಾ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಹೇಳಿದ್ದಾರೆ.

ಚಿತ್ರೀಕರಣಕ್ಕೆ ಅನುಮತಿ ಕೊಡಿಸಿದ ಸಿಎಂ ಆಪ್ತ?
ಇನ್ನು ಉಗ್ರರ ಹಿಟ್‌ಲಿಸ್ಟ್ ನಲ್ಲಿರುವ ಕಾರಣದಿಂದಾಗಿ ಪ್ರವಾಸಿಗರಿಗೆ ಕೆಆರ್ ಎಸ್ ಅಣೆಕಟ್ಟೆ ಮೇಲೆ ನಿಂತು ನೋಡುವ ಅವಕಾಶವನ್ನು ಸ್ಥಗಿತಗೊಳಿಸಲಾಗಿದ್ದು, ಇಂಥಹ ನಿಷೇಧಿತ ಪ್ರದೇಶದಲ್ಲಿ ಒಂದು ತಂಡ ತೆರಳಿ ಚಿತ್ರೀಕರಣ ಮಾಡಲು ಸಿಎಂ ಸಿದ್ದರಾಮಯ್ಯ ಆಪ್ತ ರಾಕೇಶ್ ಪಾಪಣ್ಣ ಅನುಮತಿ ಕೊಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಾಕೇಶ್ ಪಾಪಣ್ಣ ತಮ್ಮ ಪ್ರಭಾವ ಬಳಸಿ ಚಿತ್ರೀಕರಣಕ್ಕೆ ಅನುಮತಿ ಕೊಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com