ಖಾತೆ ಹಂಚಿಕೆ ವಿಚಾರದಲ್ಲಿ ಅತೃಪ್ತಿಗೊಂಡಿದ್ದ ರಾಯರೆಡ್ಡಿ?

ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಿ ಮಂಗಳವಾರವಷ್ಟೇ ಖಾತೆ ಹಂಚಿಕೆ ಮಾಡಿದ್ದರು. ಆದರೆ, ಖಾತೆ ಹಂಚಿಕೆ ಮಾಡಿದ...
ಬಸವರಾಜ ರಾಯರೆಡ್ಡಿ (ಸಂಗ್ರಹ ಚಿತ್ರ)
ಬಸವರಾಜ ರಾಯರೆಡ್ಡಿ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಿ ಮಂಗಳವಾರವಷ್ಟೇ ಖಾತೆ ಹಂಚಿಕೆ ಮಾಡಿದ್ದರು. ಆದರೆ, ಖಾತೆ ಹಂಚಿಕೆ ಮಾಡಿದ ಕೆಲವೇ ಸಮಯದಲ್ಲಿ ಸಚಿವ ಬಸವರಾಜ ರಾಯರೆಡ್ಡಿಯವರು ಅತೃಪ್ತಿಗೊಂಡಿದ್ದರು ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಆರಂಭಿಕ ಹಂತದಲ್ಲಿ ಖಾತೆ ಹಂಚಿಕೆ ಮಾಡಿದ್ದಾಗ ಬಸವರಾಜ ರಾಯರೆಡ್ಡಿ ಅವರಿಗೆ ಪ್ರಾಥಮಿಕ ಮತ್ತು ಫ್ರೌಢಶಿಕ್ಷಣ ಖಾತೆಯನ್ನು ನೀಡಲಾಗಿತ್ತು. ಇದಕ್ಕೆ ರಾಯರೆಡ್ಡಿಯವರು ಅಸಂತೃಪ್ತಿ ವ್ಯಕ್ತಪಡಿಸಿದ್ದರು. ಅಲ್ಲದೆ, ಉನ್ನತ ಶಿಕ್ಷಣ ಖಾತೆ ನೀಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ಸಿದ್ದರಾಮಯ್ಯ ಅವರು ಖಾತೆ ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಕೆಲ ಬದಲಾವಣೆ ಮಾಡಿದ್ದರು. ಬಸವರಾಜ ರಾಯರೆಡ್ಡಿಯವರಿಗೆ ಉನ್ನತ ಶಿಕ್ಷಣ ಖಾತೆ ನೀಡಿದರು.

ಇದರಂತೆ ರೋಷನ್ ಬೇಗ್ ಅವರೂ ಕೂಡ ತಮಗೆ ನೀಡಲಾಗಿದ್ದ ವಾರ್ತಾ ಖಾತೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಾರ್ತಾ ಖಾತೆಯನ್ನು ಹಿಂಪಡೆದು ನಗರಾಭಿವೃದ್ಧಿ ಜೊತೆಗೆ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಖಾತೆಯನ್ನು ಅವರಿಗೆ ನೀಡಿದ್ದರು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com