ಮಲಪ್ರಭಾ ಕಾಲುವೆ ಕಾಮಗಾರಿಯಲ್ಲಿ ನಡೆಯುತ್ತಿದೆ ಅಕ್ರಮ: ಜಗದೀಶ್ ಶೆಟ್ಟರ್ ಆರೋಪ

ಮಲಪ್ರಭಾ ಎಡ ಮತ್ತು ಬಲದಂಡೆಯಲ್ಲಿ ನಡೆಯುತ್ತಿರುವ ರು. 964 ಕೋಟಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರು ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರು...
ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್
ವಿಧಾನಸಭಾ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್
Updated on: 

ಬೆಂಗಳೂರು: ಮಲಪ್ರಭಾ ಎಡ ಮತ್ತು ಬಲದಂಡೆಯಲ್ಲಿ ನಡೆಯುತ್ತಿರುವ ರು. 964 ಕೋಟಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರು ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಅವರು ಕಣ್ಮುಚ್ಚಿ ಕುಳಿತಿದ್ದಾರೆಂದು ವಿಧಾನಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಶುಕ್ರವಾರ ಆರೋಪಿಸಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಬರುವ ಮಲಪ್ರಭಾ ಯೋಜನೆಯ ಹಂಚು ಕಾಲುವೆಗಳು ಮತ್ತು ಉಪ ಹಂಚು ಕಾಲುವೆಗಳ ಆಧುನೀಕರಣ ಕಾಮಗಾರಿಗಳಿಗಾಗಿ ಈಗಾಗಲೇ ಕರೆಯಲಾಗಿದ್ದ ಟೆಂಡರ್ ಗಳನ್ನು ರದ್ದು ಪಡಿಸಿ ಎಲ್ಲಾ ಕಾಮಗಾರಿಗಳನ್ನು ಸೇರಿಸಿ ಸಿಂಗಲ್ ಪ್ಯಾಕೇಜ್ ಮಾಡಿದ್ದಾರೆ. ಅಲ್ಲದೆ. ಟೆಂಡರ್ ಮೊತ್ತವನ್ನು ರು. 964 ಕೋಟಿಗೆ ಹೆಚ್ಚಿಸಿ ಹೊಸದಾಗಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

18 ಟೆಂಡರ್ ಗಳಲ್ಲೂ ಭಾಗವಸಿದ್ದ ಗುತ್ತಿಗೆದಾರರು ಶೇ.18 ರಿಂದ 22 ರಷ್ಟು ಕಡಿಮೆ ದರಗಳನ್ನು ನಮೂದಿಸಿ ಟೆಂಡರ್ ನಲ್ಲಿ ಭಾಗವಹಿಸಿದ್ದರು. ಆದರೆ, ಈ ಎಲ್ಲಾ ಟೆಂಡರ್ ಗಳನ್ನೂ ರದ್ದು ಮಾಡಿ ಎಲ್ಲಾ ಕಾಮಗಾರಿಗಳಿಗೆ ಒಂದೇ ಪ್ಯಾಕೇಜ್ ಮಾಡಿರುವ ಹಿಂದೆ ಕೇವಲ ವ್ಯಕ್ತಿಯೊಬ್ಬರ ಹಿತಾಸಕ್ತಿ ಅಡಗಿರುವಂತಿದೆ.

ಉಪ ಹಂಚು ಕಾಲುವೆ ಆಧುನೀಕರಣ ಕಾಮಗಾರಿಗಳಿಗೆ ನಿಗದಿ ಮಾಡಲಾಗಿದ್ದ ರು. 403 ಕೋಟಿಗಳನ್ನು ಆಧುನೀಕರಣ ಕಾಮಗಾರಿಗಳಿಗೆ ನಿಗದಿಪಡಿಸಿದ್ದ ಮೊತ್ತವನ್ನು ಕಾಮಗಾರಿ ಕೈಗೊಳ್ಳದೇ ಸಿಂಗಲ್ ಪ್ಯಾಕೇಜ್ ನಲ್ಲಿ ದುರುಪಯೋಗಪಡಿಸಿಕೊಳ್ಳುವ ಅನುಮಾನವಿದೆ. ಈ ಮೊತ್ತವನ್ನು ರು. 964 ಕೋಟಿಯಲ್ಲಿ ಸೇರಿಸಿಕೊಂಡಿದ್ದರೂ ಉಪಹಂಚು ಕಾಲುವೆ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ.

ಸರ್ಕಾರ ಕಾಮಗಾರಿ ಮೊತ್ತವನ್ನು ಹೆಚ್ಚುಸುತ್ತಾ ಹೋಗಿ ಸರ್ಕಾರಿ ಹಣ ದುರುಪಯೋಗಪಡಿಸಿಕೊಳ್ಳುವ ಹುನ್ನಾರದ ಶಂಕೆ ಇದ್ದು ಹೆಚ್ಚುವರಿ ಮೊತ್ತಕ್ಕೆ ಸಹಿ ಮಾಡದ ಇಬ್ಬರು ಎಂಜಿನಿಯರ್ ಗಳನ್ನು ವರ್ಗ ಮಾಡಿ ಈ ಜಾಗಕ್ಕೆ ಹೆಚ್ಚುವರಿ ಮೊತ್ತಕ್ಕೆ ಸಹಿ ಮಾಡಲು ಎಂಜಿನಿಯರ್ ಗಳನ್ನು ಬದಲಿಸಲಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com