ಹಾಡಹಗಲೇ ಮುತ್ತೂಟ್ ಫಿನ್ ಕಾರ್ಪ್ ನಲ್ಲಿ 3 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ

ಹಾಡಹಗಲೇ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕಲಬುರಗಿಯ ಜಯನಗರದ ಮುತ್ತೂಟ್‌ ಫಿನ್ ಕಾರ್ಪ್ ಶಾಖೆಯಲ್ಲಿ ನಡೆದಿದೆ.
ಮುತ್ತೂಟ್ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು
ಮುತ್ತೂಟ್ ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು
Updated on: 

ಕಲಬುರಗಿ:  ಹಾಡಹಗಲೇ  ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಕಲಬುರಗಿಯ ಜಯನಗರದ ಮುತ್ತೂಟ್‌ ಫಿನ್ ಕಾರ್ಪ್ ಶಾಖೆಯಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ 11ರ ವೇಳೆ ಏಕಾಏಕಿ ನುಗ್ಗಿದ ನಾಲ್ವರು ಯುವಕರ ತಂಡ, ಮೂರು ಕೋಟಿ ರು. ಅಧಿಕ ಮೌಲ್ಯದ 12 ಕೆಜಿ ಚಿನ್ನಾಭರಣ ಹಾಗೂ ಮೂರು ಲಕ್ಷ ರೂ.ನಗದು ದೋಚಿ ಪರಾರಿಯಾಗಿದೆ.

ಇಲ್ಲಿನ ಮುತ್ತೂಟ್‌ ಫಿನ್‌ಕಾರ್ಪ್‌ ಶಾಖೆಯಲ್ಲಿ ದರೋಡೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಎರಡೂವರೆ ವರ್ಷಗಳ ಹಿಂದೆ ನಗರದ ಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಶಾಖೆಯಲ್ಲಿ ದರೋಡೆ ನಡೆದಿತ್ತು. ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ.

ಘಟನೆಯ ವಿವರ
ಬೆಳಗ್ಗೆ 11ರ ವೇಳೆ ಜಯನಗರದಲ್ಲಿರುವ ಮುತ್ತೂಟ್‌ ಫಿನ್‌ಕಾರ್ಪ್‌ ಶಾಖೆಯಲ್ಲಿ ನಾಲ್ವರು ಸಿಬ್ಬಂದಿ, ಸಿಬ್ಬಂದಿಗೆ ಉಪಾಹಾರ ಕೊಡಲೆಂದು ಬಂದಿದ್ದ ಸಿಬ್ಬಂದಿಯೊಬ್ಬನ ಸಂಬಂಧಿಕ ಮಾತ್ರವಿದ್ದರು. ಗ್ರಾಹಕರಾರೂ ಇರಲಿಲ್ಲ. ಈ ವೇಳೆ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದ ಒಬ್ಟಾತ ಕೈಯಲ್ಲಿ ಫೈಲ್‌ ಹಿಡಿದುಕೊಂಡು ಒಳಗೆ ಬಂದ. ಆತನ ಹಿಂದೆ ಸಫಾರಿ ಹಾಕಿಕೊಂಡಿದ್ದ ಮತ್ತೂಬ್ಬ ಯುವಕ ಬಂದು ಸಿಬ್ಬಂದಿ ಬಳಿ ತಾವು ತನಿಖಾಧಿಕಾರಿಗಳು, ಇಲ್ಲಿನ ವಹಿವಾಟಿನ ಬಗ್ಗೆ ಮಾಹಿತಿ ನೀಡಿ ಎಂದ. ಆಗ ಅಲ್ಲಿನ ಸಿಬ್ಬಂದಿ ಗಾಬರಿಯಿಂದ ಎದ್ದು ನಿಂತರು. ಅಷ್ಟರಲ್ಲಿ ಮತ್ತಿಬ್ಬರು ಯುವಕರು ಒಳನುಗ್ಗಿ ಬಂದು ಸಿಬ್ಬಂದಿಯ ಕುತ್ತಿಗೆಗೆ ಬಂದೂಕು ಹಿಡಿದು, ಎಲ್ಲರನ್ನೂ ಲಾಕರ್‌ ಕೋಣೆಯೊಳಗೆ ಕೂಡಿಹಾಕಿ ಚೀಲಕ ಹಾಕಿದರು. "ಯಾರೂ ಕೂಗಾಡಬೇಡಿ. ಕೂಗಿದರೇ ಒಬ್ಬೊಬ್ಬರನ್ನಾಗಿ ಕೊಲ್ಲುತ್ತೇವೆ ಎಂದು ಬೆದರಿಸಿದ್ದಾರೆ. ಇದೇ ವೇಳೆ, ಒಬ್ಟಾತ ಸಿಸಿಟಿವಿ ಕ್ಯಾಮರಾದ ವಯರ್‌ ಕತ್ತರಿಸಿದ್ದಾನೆ. ನಂತರ ಸಿಬ್ಬಂದಿಯಿಂದಲೇ ಲಾಕರ್‌ ತೆಗೆಸಿ, 12 ಕೆಜಿ ಬಂಗಾರ, 3 ಲಕ್ಷ ರೂ. ನಗದು ತೆಗೆದುಕೊಂಡು, ಬ್ಯಾಗ್‌ನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ.

ಇದಾದ ಸುಮಾರು 15ನಿಮಿಷಗಳ ನಂತರ ಗ್ರಾಹಕರೊಬ್ಬರು ಶಾಖೆಗೆ ಬಂದು ನೋಡಿದಾಗ ಒಳಗೆ ಯಾರೂ ಕಾಣಿಸಲಿಲ್ಲ. ಜತೆಗೆ, ಲಾಕರ್‌ ಕೋಣೆಯಿಂದ ಚೀರಾಟ ಕೇಳಿ ಬಂತು. ಲಾಕರ್‌ ಕೋಣೆಗೆ ಹಾಕಲಾಗಿದ್ದ ಚೀಲಕ ಹೊರತೆಗೆದಾಗ ದರೋಡೆ ನಡೆದ ಘಟನೆ ತಿಳಿದು ಬಂತು. ತಕ್ಷಣ ಸಿಬ್ಬಂದಿಯೊಬ್ಬ ಆ ಗ್ರಾಹಕನ ಮೊಬೈಲ್‌ನಿಂದ ಕಂಟ್ರೋಲ್‌ ರೂಂಗೆ ದೂರವಾಣಿ ಕರೆ ಮಾಡಿ, ವಿಷಯ ತಿಳಿಸಿದ್ದಾನೆ.

ಸುದ್ದಿಗಾರರ ಜತೆ ಮಾತನಾಡಿದ ಐಜಿಪಿ ಶಿವಕುಮಾರ, ದರೋಡೆಕೋರರು ಸಿಬ್ಬಂದಿಯಿಂದ ಕಿತ್ತೂಯ್ದಿದ್ದ ಮೊಬೈಲ್‌ಗ‌ಳು ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಪೊಲೀಸ್‌ ತರಬೇತಿ ಕೇಂದ್ರದ ಟವರ್‌ ವ್ಯಾಪ್ತಿಯೊಳಗೆ ಇರುವುದು ಪತ್ತೆಯಾಯಿತು. ಇದನ್ನು ಆಧರಿಸಿ ಪೊಲೀಸರ ತಂಡಗಳು ಶಹಾಬಾದ್‌ವರೆಗೂ ಹೋಗಿ ಪರಿಶೀಲನೆ ನಡೆಸಿದರಾದರೂ, ಆರೋಪಿಗಳ ಸುಳಿವು ಪತ್ತೆಯಾಗಲಿಲ್ಲ. ಸ್ಥಳೀಯರೇ ಈ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com