ಕೇರಳ ಚುನಾವಣೆಗೆ ಮಂಗಳೂರು ಮೂಲಕ ಹಣ?

ಕರ್ನಾಟಕದ ಗಡಿ ಪ್ರದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕರೆನ್ಸಿ ನೋಟುಗಳಿಗಾಗಿ ಬೇಡಿಕೆ ಹೆಚ್ಚಿದ್ದು, ಈ ಬಗ್ಗೆ ಆರ್ ಬಿಐ ಕಳವಳ ವ್ಯಕ್ತಪಡಿಸಿದೆ.
ಕೇರಳ ಚುನಾವಣೆಗೆ ಮಂಗಳೂರು ಮೂಲಕ ಹಣ?
ಕೇರಳ ಚುನಾವಣೆಗೆ ಮಂಗಳೂರು ಮೂಲಕ ಹಣ?
Updated on

ಮಂಗಳೂರು: ಕರ್ನಾಟಕದ ಗಡಿ ಪ್ರದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಕರೆನ್ಸಿ ನೋಟುಗಳಿಗಾಗಿ ಬೇಡಿಕೆ ಹೆಚ್ಚಿದ್ದು, ಈ ಬಗ್ಗೆ ಆರ್ ಬಿಐ ಕಳವಳ ವ್ಯಕ್ತಪಡಿಸಿದೆ.
ಒಂದೇ ತ್ರೈಮಾಸಿಕ ಅವಧಿಯಲ್ಲಿ ಒಂದು ಟ್ರಿಲಿಯನ್( ಒಂದು ಲಕ್ಷ ಕೋಟಿ) ಯಷ್ಟು ಕರೆನ್ಸಿಗಾಗಿ ಬೇಡಿಕೆ ಇದ್ದು, ಇದಕ್ಕೂ ಕೇರಳ ವಿಧಾನಸಭಾ ಚುನಾವಣೆ ಸಂಬಂಧವಿದೆಯೇ ಎಂದು ಆರ್ ಬಿಐ ನ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಬ್ಯಾಂಕ್ ನ್ನು ಪ್ರಶ್ನಿಸಿದೆ. ಕರ್ನಾಟಕದ ಗಡಿ ಪ್ರದೇಶದಲ್ಲಿ  ಮೊದಲ ತ್ರೈಮಾಸಿಕದಲ್ಲಿ ನಡೆದಿರುವ ಹಣದ ವಹಿವಾಟನ್ನು( ಹಣ ಹಿಂತೆಗೆತ) ವನ್ನು ಪರಿಶೀಲನೆ ನಡೆಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ ನೀಡಿದೆ.
ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಂದು ಟ್ರಿಲಿಯನ್ ನಷ್ಟು ಹೆಚ್ಚು ಕರೆನ್ಸಿಗಾಗಿ ಬೇಡಿಕೆ ಉಂಟಾಗಿದೆ. ಇದು ಒಂದೇ ತ್ರೈಮಾಸಿಕದಲ್ಲಿ ಏಕಾಏಕಿ ಉಂಟಾಗಿರುವ ಬೇಡಿಕೆಯಾಗಿದ್ದು, ಕೇರಳ ವಿಧಾನಸಭಾ ಚುನಾವಣೆಗೂ ಹಾಗೂ ಕರೆನ್ಸಿ ಬೇಡಿಕೆ ಹೆಚ್ಚಿರುವುದಕ್ಕೂ ಸಂಬಂಧವಿದೆಯೇ ಎಂಬುದನ್ನು ಪರಿಶೀಲಿಸಿ ಎಂದು  ದಕ್ಷಿಣ ಕನ್ನಡದ ಪ್ರಮುಖ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚನೆ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕ್ ಗಳ ಕರೆನ್ಸಿ ಚೆಸ್ಟ್ ಗಳನ್ನು ಪರಿಶೀಲಿಸಿ ಅತಿ ಶೀಘ್ರದಲ್ಲೇ ವರದಿ ನೀಡಬೇಕೆಂದು ಬೆಂಗಳೂರು ಆರ್ ಬಿಐ ನ ಸಂಶೋಧನಾ ಅಧಿಕಾರಿ ರೋಷಿನ್ ಪೌಲ್ ಸೂಚನೆ ನೀಡಿದ್ದಾರೆ. ಕೆಲವು ಬ್ಯಾಂಕ್ ಗಳು ಒಂದು ಲಕ್ಷ ಕೋಟಿ ವ್ಯವಹಾರದತ್ತ ಸಾಗಲು ಹೆಣಗುತ್ತಿವೆ ಹೀಗಿರಬೇಕಾದರೆ ಒಂದು ವರ್ಷದ ಅವಧಿಯಲ್ಲಿ ಒಂದು ಜಿಲ್ಲೆಯಲ್ಲಿ ಒಂದು ಟ್ರಿಲಿಯನ್ ನಷ್ಟು ಮೊತ್ತ  ಉತ್ಪಾದನೆಯಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಬ್ಯಾಂಕಿಂಗ್ ಅರ್ಥಿಕ ತಜ್ಞರು.  ರಾಜ್ಯದ ಎಲ್ಲಾ ಭಾಗಗಳಿಂದಲೂ ಹಣ ಹಿಂಪಡೆದರೂ ಒಂದು ಟ್ರಿಲಿಯನ್ ನಷ್ಟು ಹೆಚ್ಚಿ ಕರೆನ್ಸಿಗೆ ಬೇಡಿಕೆ ಬರಲು ಒಂದು ತ್ರೈಮಾಸಿಕ ಅವಧಿಗಿಂತಲೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.   

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com