ಬಿಎಂಟಿಸಿ ಬಸ್ ನಲ್ಲಿ 3 ತಿಂಗಳ ಮಗು ಬಿಟ್ಟು ಹೋದ ಪೋಷಕರು

ಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ನಲ್ಲಿ ಮೂರು ತಿಂಗಳ ಹೆಣ್ಣುಮಗು ಪತ್ತೆಯಾಗಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಕೂಡ್ಲುಗೇಟ್‌ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಿಎಂಟಿಸಿ ಬಸ್‌ನಲ್ಲಿ ಮೂರು ತಿಂಗಳ ಹೆಣ್ಣುಮಗು ಪತ್ತೆಯಾಗಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಕೂಡ್ಲುಗೇಟ್‌ ಕಡೆ ಸಂಚರಿಸುವ ಬಸ್‌ನ ಚಾಲಕನ ಹಿಂಬದಿಯ ಸೀಟಿನಲ್ಲಿ ಮಗು ಪತ್ತೆಯಾಗಿದೆ.

ಮುಂಜಾನೆ 6 ಗಂಟೆಗೆ ಬಸ್ ತಂದು ನಿಲ್ದಾಣದಲ್ಲಿ ನಿಲ್ಲಿಸಿ ಚಾಲಕ ಶೌಚಾಲಯಕ್ಕೆ ತೆರಳಿದ್ದ. ಮರಳಿ ಬರುವ ಹೊತ್ತಿಗೆ ತನ್ನ ಹಿಂಬದಿಯ ಸೀಟಿನಲ್ಲಿ ಮುದ್ದಾದ ಮಗು ಇರುವುದನ್ನು ಮೇಲದಿಕಾರಿಗಳಿಗೆ ತಿಳಿಸಿದ್ದಾನೆ.

ಈ ಸಂಬಂಧ ಉಪ್ಪಾರ ಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮಗುವನ್ನು ಬಾಸ್ಕೊ ಸಂಸ್ಥೆಗೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಿಲ್ದಾಣದ ಎಲ್ಲಾ ಸಿಸಿ ಕ್ಯಾಮರಾದ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸುತ್ತಿದ್ದು, ಮಗುವನ್ನು ಬಿಟ್ಟು ಹೋದವರ ಪತ್ತೆ ನಡೆಸುತ್ತಿದ್ದಾರೆ.

ಹೆಣ್ಣುಮಗುವೆಂಬ ಕಾರಣಕ್ಕೆ ಪಾಲಕರೇ ಮಗುವನ್ನು ಬಿಟ್ಟು ಹೋಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಗು ತೊಟ್ಟ ಬಟ್ಟೆ ಗಮನಿಸಿದರೆ ಸ್ಥಿತಿವಂತರೇ ಮಗುವನ್ನು ಬಿಟ್ಟು ಹೋಗಿರುವಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com