

ಮೈಸೂರು: ಸಾಲ ಮರುಪಾವತಿಸುವಂತೆ ಅವಾಚ್ಯ ಶಬ್ದಗಳಿಂದ ತಂದೆಗೆ ನಿಂದಿಸಿದರು ಎಂಬ ಕಾರಣಕ್ಕೆ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮರದೂರು ಗ್ರಾಮದ ನಿವಾಸಿಯಾದ ಶಿವನಾಯಕ್ ಎಂಬುವರು ಕುಮಾರ್ ಹಾಗೂ ಮಮತಾ ಎಂಬುವರಿಂದ 30 ಸಾವಿರ ರುಪಾಯಿ ಸಾಲ ಪಡೆದಿದ್ದರು. ಸಾಲ ಮರುಪಾವತಿಸುವಂತೆ ಸಾಲ ನೀಡಿದರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಇದರಿಂದ ಮನನೊಂದ ರೋಜಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತ ರೋಜಾ, ಶಿವನಾಯಕ್ ಹಾಗೂ ಮಾದೇವಿ ದಂಪತಿಯ ಮಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.