'ಪ್ರೇಮದ ಊರಲಿ' ಮಾದರಿ; ಸರ್ಕಾರಿ ಕೆಲಸವಿದ್ದರೂ ರೈತನನ್ನೇ ವರಿಸಲು ಮುಂದಾದ ಯುವತಿ!

ಇತ್ತೀಚಿನ ದಿನಗಳಲ್ಲಿ ರೈತ ಯುವಕರಿಗೆ ಮದುವೆಗೆ ಹೆಣ್ಣು ಸಿಗದಿರುವುದು ಕರ್ನಾಟಕ ಸೇರಿದಂತೆ ಅನೇಕ ಕಡೆಗಳಲ್ಲಿ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ರೈತರು ಸಹ ನಮ್ಮನ್ನು ಯಾರು ಮದುವೆಯಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಲವತ್ತುಕೊಂಡರು ಸಂದರ್ಭಗಳನ್ನು ನೋಡಿದ್ದೇವೆ.
ಆದರೆ ಇದಕ್ಕೆ ವ್ಯತಿರೀಕ್ತವಾದ ಘಟನೆಯೊಂದು ನಡೆದಿದೆ. ಚಾಮರಾಜನಗರದ ಯುವತಿಯೊಬ್ಬರು ಈ ಚರ್ಚೆಗೆ ತದ್ವಿರುದ್ಧವಾದ ನೈಜ ಉದಾಹರಣೆಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರೂ, ರೈತ ಯುವಕನನ್ನೇ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ವರನ ಹೆಸರಿನ ಹಿಂದೆ ‘ರೈತ’ ಎಂದು ಬರೆಸಿದ್ದಾರೆ. ಈ ಮೂಲಕ ಕೃಷಿ ಮತ್ತು ರೈತ ವೃತ್ತಿಯ ಬಗ್ಗೆ ಗೌರವದ ಸಂದೇಶ ಸಾರಿದ್ದಾರೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯ ICU ವಿಭಾಗದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಚಾಮರಾಜನಗರದ ಬೇಗೂರು ಗ್ರಾಮದ ಎಂ. ಲಕ್ಷ್ಮೀ ರೈತನನ್ನೇ ಮದುವೆಯಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರಿ ಕೆಲಸ ಹೊಂದಿದ್ದರಿಂದ ಲಕ್ಷ್ಮೀ ವರನಾಗಿ ಸರ್ಕಾರಿ ಉದ್ಯೋಗಿಯನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಅವರು ಕೊಳ್ಳೇಗಾಲದ ರೈತ ರಾಜು ಕೆ. ಎಂಬುವರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ.
ಲಕ್ಷ್ಮೀ ಮತ್ತು ರಾಜು ಕೆ. ಅವರ ವಿವಾಹ ಡಿಸೆಂಬರ್ 3ರಂದು ನಡೆಯಲಿದೆ ಎಂದು ವರದಿಯಾಗಿದೆ. ಇನ್ನು ಇತ್ತೀಚೆಗೆ ತೆರೆಕಂಡ ‘ಪ್ರೇಮದ ಊರಲಿ’ ಸಿನಿಮಾದಲ್ಲಿ ರೈತ ಯುವಕರಿಗೆ ಹೆಣ್ಣು ಸಿಗದೆ ಎದುರಾಗುತ್ತಿರುವ ಸಂಕಷ್ಟವನ್ನು ನಿರ್ದೇಶಕರು ಮನಮುಟ್ಟುವಂತೆ ತೆರೆಮೇಲೆ ಕಟ್ಟಿಕೊಟ್ಟಿದ್ದರು. ಈ ಚಿತ್ರ ಕನ್ನಡಿಗರ ಮನಸೆಳೆದಿದ್ದು ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 120ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



