ಮೇ 26ಕ್ಕೆ ಪಿಯುಸಿ ಫಲಿತಾಂಶ

ಕಳೆದ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇದೇ ಬುಧವಾರ ಪ್ರಕಟಗೊಳ್ಳಲಿದೆ. ಆಯಾ ಪದವಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇದೇ ಬುಧವಾರ ಪ್ರಕಟಗೊಳ್ಳಲಿದೆ. ಆಯಾ ಪದವಿ ಪೂರ್ವ ಕಾಲೇಜುಗಳಲ್ಲಿ ಮೇ 26ರಂದು ಫಲಿತಾಂಶ ಲಭ್ಯವಾಗಲಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಫಲಿತಾಂಶ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿದ ಇಲಾಖೆ ನಿರ್ದೇಶಕ ಡಾ.ರಾಮೇಗೌಡ, ಮೇ 25ರಂದು ಬೆಳಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 12 ಗಂಟೆ ನಂತರ ಜಾಲತಾಣಗಳಲ್ಲಿ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು www.karresult.nic.in ಮತ್ತು www.puc.kar.nic.in ನಲ್ಲಿ ನೋಡಬಹುದು.

ಈ ವರ್ಷ ಮೊದಲ ಬಾರಿಗೆ, ಇಲಾಖೆ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಕಳುಹಿಸುವ ಬದಲು ಆನ್ ಲೈನ್ ನಲ್ಲಿ ಜೆರಾಕ್ಸ್ ಪ್ರತಿಯನ್ನು ಪ್ರಕಟಿಸಲಿದೆ. ಇದೇ ಸಂದರ್ಭದಲ್ಲಿ ಖಾಸಗಿ ವೆಬ್ ಸೈಟ್ ಗಳು ಫಲಿತಾಂಶ ಪ್ರಕಟಿಸುವುದನ್ನು ಕೂಡ ಇಲಾಖೆ ನಿಷೇಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com