ರಾಜ್ಯ

ಮಡಿಕೇರಿ: ಕಾರು ಸರ್ವೀಸ್ ಬೇಗ ಮಾಡಿಕೊಡು ಎಂದಿದ್ದಕ್ಕೆ ಗುಂಡಿಟ್ಟು ಕೊಲೆ

ಆಯುಧ ಪೂಜೆ ಹಿನ್ನೆಲೆಯಲ್ಲಿ ಬೇಗನೇ ಕಾರು ವಾಷಾ ಮಾಡಿಕೊಡುವಂತೆ ಒತ್ತಾಯಿಸಿದ್ದರಿಂದ ಸರ್ವೀಸ್ ಸ್ಟೇಷನ್ ಮಾಲೀಕ ಕಾರಿನ ಓನರ್ ಗೆ ಗುಂಡಿಟ್ಟು ಕೊಲೆ ...

ಮಡಿಕೇರಿ: ಕಾರು ಸರ್ವೀಸ್ ಬೇಗ ಮಾಡಿಕೊಡು ಎಂದಿದ್ದಕ್ಕೆ ಗುಂಡಿಟ್ಟು ಕೊಲೆ
ಸಾಂದರ್ಭಿಕ ಚಿತ್ರ
Published On :

ಮಡಿಕೇರಿ: ಆಯುಧ ಪೂಜೆ ಹಿನ್ನೆಲೆಯಲ್ಲಿ ಬೇಗನೇ ಕಾರು ವಾಷಾ ಮಾಡಿಕೊಡುವಂತೆ ಒತ್ತಾಯಿಸಿದ್ದರಿಂದ ಸರ್ವೀಸ್ ಸ್ಟೇಷನ್ ಮಾಲೀಕ ಕಾರಿನ ಓನರ್ ಗೆ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಶೇಖರ್ (45) ಕೊಲೆಯಾದ ವ್ಯಕ್ತಿ. ಮಡಿಕೇರಿಯ ಸೋಮವಾರ ಪೇಟೆ ತಾಲೂಕಿನ ಶನಿವಾರ ಪೇಟೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂತೆ ಹೋಬಳಿಯ ಗುಂಡುರಾವ್ ಬಡಾವಣೆ ನಿವಾಸಿಯಾದ ಶೇಖರ್ ಇಂದು ಬೆಳಗ್ಗೆ ಕಾರನ್ನು ಸರ್ವೀಸ್ ಗೆ ಬಿಟ್ಟಿದ್ದರು, ಮತ್ತೆ ಕಾರು ತೆಗೆದು ಕೊಳ್ಳಲು ಬಂದಾಗ ಇನ್ನೂ ವಾಷಿಂಗ್ ಆಗಿರಲಿಲ್ಲ. ಈ ವೇಳೆ ತನ್ನ ಕಾರನ್ನು ಬಿಟ್ಟು ಬೇರೆ ಕಾರಿಗೆ ವಾಟರ್ ಸರ್ವೀಸ್ ಮಾಡುತ್ತಿದ್ದುದ್ದಕ್ಕೆ ಶೇಖರ್ ಸರ್ವೀಸ್ ಸ್ಟೇಷನ್ ಮಾಲೀಕನ ಜೊತೆ ಜಗಳ ಮಾಡಿದ್ದಾರೆ.

ಈ ವೇಳೆ ಆಕ್ರೋಶ ಗೊಂಡ ಸರ್ವೀಸ್ ಸ್ಟೇಷನ್ ಮಾಲಕ ಅಬ್ದುಲ್ ರುಬ್ಜು ಎಂಬಾತ ಮನೆಗೆ ಹೋಗಿ ಗನ್ ತಂದು ಗ್ರಾಹಕ ಶೇಖರ್ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಶೇಖರ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇನ್ನು ಆಕ್ರೋಶಗೊಂಡ ಶೇಖರ್ ಸ್ನೇಹಿತರು ಹಾಗೂ ಕುಟುಂಬಸ್ಥರು ಸರ್ವೀಸ್ ಸ್ಟೇಷನ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲಿದ್ದ ಇತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ನಂತರ ಸೋಮವಾರ ಪೇಟೆ ಪೊಲೀಸರು ಸರ್ವೀಸ್ ಸ್ಟೇಷನ್ ಮಾಲೀಕನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.