

ಕೊರಟಗೆರೆ: ಹೆತ್ತ ಮಗನ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ಬೇಸತ್ತು ತಂದೆಯೊಬ್ಬ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರದಲ್ಲಿ ನಡೆದಿದೆ.
ಸಂಜೀವರಾಯಪ್ಪ (69) ಆತ್ಮಹತ್ಯೆ ಮಾಡಿಕೊಂಡ ತಂದೆ. ಮಗ ನಾಗರಾಜ ದಿನನಿತ್ಯ ಮದ್ಯ ಸೇವಿಸಿ ಅಪ್ಪನಿಗೆ ಕುರುಕುಳ ನೀಡುತ್ತಿದ್ದ. ಅದೇ ರೀತಿ ನಿನ್ನೆ ಕೂಡ ಈತ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದು, ಇದನ್ನು ಅಪ್ಪ ಪ್ರಶ್ನಿಸಿದ್ದಾನೆ.
ಇದಕ್ಕೆ ಕೋಪಗೊಂಡ ನಾಗರಾಜ ಅಪ್ಪನಿಗೆ ಮನಬಂದಂತೆ ಥಳಿಸಿದ್ದಾನೆ. ಬೇಸತ್ತ ಅಪ್ಪ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆ ಯತ್ನಿಸಿದ್ದು, ಈತನ ಸಂಬಂಧಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಆರೋಪವನ್ನು ಕುಟುಂಬಸ್ಥರು ನಿರಾಕರಿಸಿದ್ದಾರೆ. ತನ್ನ ತಾತ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಜೊತೆಗೆ ಅನಾರೋಗ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊಮ್ಮಗ ಮಂಜುನಾಥ್ ತಿಳಿಸಿದ್ದಾನೆ.
ಶುಕ್ರವಾರ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂಜೀವರಾಯಪ್ಪನನ್ನು ಆತನ ಮಗನ ಭಯದಿಂದಾಗಿ ನೆರೆಹೊರೆಯವರು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಲಿಲ್ಲ ಎಂದು ಹೇಳಲಾಗಿದೆ.
ಆರೋಪಿ ನಾಗರಾಜು ಪರಾರಿಯಾಗಿದ್ದು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.