

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸಿ ರಾಜ್ಯದಾದ್ಯಂತ ಶುಕ್ರವಾರ ಬಂದ್ ಕರೆ ನೀಡಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ.
ಜನಪರ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ನೀಡಿರುವ ಬಂದ್ ಕರೆಗೆ ಬಿಎಂಟಿಸಿ, ಕೆಎಸ್ಆರ್ ಟಿಸಿ, ಲಾರಿಗಳ ಸಂಘ, ಕೇಬಲ್ ಆಪರೇಟರ್ಸ್ ಸೇರಿದಂತೆ ಇನ್ನಿತರೆ ಖಾಸಗಿ ಸಂಸ್ಥೆಗಳು ಬೆಂಬಲ ಸೂಚಿಸಿದ್ದು, ಆಗತ್ಯ ವಸ್ತುಗಳ ಲಭ್ಯತೆ ಬಿಟ್ಟರೆ ಇತರೆ ಸೇವೆಗಳು ಹಾಗೂ ಸಾರಿಗೆ ಸಂಪರ್ಕಗಳು ಬಹುತೇಕ ಸ್ತಬ್ಧಗೊಳ್ಳಲಿದೆ.
ನಾಳೆ ರಾಜ್ಯದಾದ್ಯಂತ ಬೃಹತ್ ಮುಷ್ಕರ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಯಾವ ಸೇವೆ ಇರುತ್ತದೆ ಹಾಗೂ ಯಾವುದು ಇಲ್ಲ ಎಂಬ ವಿವರ ಈ ಕೆಳಕಂಡಂತಿದೆ.
ಯಾವುದು ಇಲ್ಲ?