14 ಪರಂಪರೆ ನಗರಗಳು: ಸರ್ಕಾರಕ್ಕೆ ತಲುಪದ ಸ್ಮಾರಕಗಳ ವರದಿ

Published On :
ಬೆಂಗಳೂರು: ನಮ್ಮ ರಾಜ್ಯದ 14 ಸ್ಥಳಗಳನ್ನು ಪರಂಪರೆ ನಗರಗಳು ಎಂದು ಸರ್ಕಾರ ಘೋಷಿಸಿದ 4 ವರ್ಷಗಳ ನಂತರ ಅದರ ಮಾನದಂಡಗಳನ್ನು ಈಡೇರಿಸುವ ವಿವರವಾದ ವರದಿಯನ್ನು ಪಡೆಯಬೇಕಿದೆ ಮತ್ತು ಪರಂಪರೆಯ ಸ್ಮಾರಕಗಳನ್ನು ಸರ್ಕಾರ ರಕ್ಷಿಸಬೇಕಾಗಿದೆ.
ಇದಕ್ಕೆ ಕಾರಣ, ಹುಬ್ಬಳ್ಳಿ ಮೂಲದ ಖಾಸಗಿ ಸಂಸ್ಥೆ, ಅಡೈ, ಈ ಎಲ್ಲಾ ಸ್ಥಳಗಳ ವಿವರಗಳ ವರದಿಯನ್ನು ತಯಾರಿಸುವಲ್ಲಿ ಮಾನದಂಡಗಳನ್ನು ಈಡೇರಿಸಿಲ್ಲ ಮತ್ತು ಪರಂಪರೆಯ ತಾಣಗಳ ವರದಿಗಳನ್ನು ತಯಾರಿಸುವಾಗ ಅಕ್ರಮವಾಗಿ ಗೂಗಲ್ ನ ಚಿತ್ರಗಳನ್ನು ಮತ್ತು ಲೇಖನಗಳನ್ನು ಬಳಸಿಕೊಂಡಿದೆ.
ಕುತೂಹಲದ ವಿಷಯವೆಂದರೆ ವಸ್ತು ಸಂಗ್ರಹಾಲಯ, ಪರಂಪರೆ ಮತ್ತು ಪುರಾತನ ವಸ್ತುಶಾಸ್ತ್ರ ಇಲಾಖೆ ಅಡೈಗೆ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಇದೀಗ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳು, ವಸ್ತು ಸಂಗ್ರಹಾಲಯದ ನಿರ್ದೇಶಕ ಹೆಚ್.ಟಿ.ತಲ್ವರ್ ಅವರಿಗೆ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ತನಿಖೆಯಲ್ಲಿ ಕೂಡ ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


